ಸಿನಿಮಾ ಸುದ್ದಿ

ಸಾಹಸಸಿಂಹ 'ವಿಷ್ಣುವರ್ಧನ್' ಪುತ್ಥಳಿ ಧ್ವಂಸ ಅಪಮಾನವಲ್ಲ, ಆಶೀರ್ವಾದ: ನಟಿ ಭಾರತಿ

Vishwanath S

ಮೈಸೂರು/ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಟೋಲ್ ಗೇಟ್ ಬಳಿ ವಿಷ್ಣುವರ್ಧನ್ ಪುತ್ಥಳಿ ಧ್ವಂಸವಾಗಿದ್ದು, ಇದನ್ನು ಅಪಮಾನವೆಂದು ಭಾವಿಸದೆ, ಆಶೀರ್ವಾದದಂತೆ ಪರಿಗಣಿಸೋಣ ಎಂದು ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ.

ವಿಷ್ಣುವರ್ಧನ್ ಅವರ 11ನೇ ಪುಣ್ಯ ಸ್ಮರಣೆಯ ದಿನದಂದು ಪುತ್ಥಳಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಗಾರರೊಡನೆ ಮಾತನಾಡಿ, ಡಾ. ವಿಷ್ಣುವರ್ಧನ್ ಬಗ್ಗೆ ಮಾತನಾಡುವವರು ಸದಾ ಇರಬೇಕು.  ಇದು ಅವರ ಇರುವಿಕೆಯನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತದೆ.  ಹೀಗಾಗಿ ಅವರ ಪುತ್ಥಳಿ ಧ್ವಂಸ ಅಪಮಾನವಲ್ಲ, ಆಶೀರ್ವಾದವೆಂದು ಭಾವಿಸೋಣ” ಎಂದಿದ್ದಾರೆ.

ಇಡೀ ಚಿತ್ರರಂಗವೇ ಪುತ್ಥಳಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದೆ. ಇದಕ್ಕಾಗಿ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಆದರೆ ದುಷ್ಕೃತ್ಯ ಎಸಗಿದವರ ಬಗ್ಗೆ ಮಾತನಾಡದಿರುವುದೇ ಉತ್ತಮ ಎಂದು ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ. 

ಇದೇ ವೇಳೆ ವಿಷ್ಣು ಸ್ಮಾರಕದ ಕುರಿತು ಮಾತನಾಡಿ, ಸರ್ಕಾರದಿಂದ ಎಲ್ಲ ಬಗೆಯ ಸಹಕಾರ ದೊರಕಿದೆ. ಸ್ಮಾರಕ ನಿರ್ಮಾಣ ಮುಕ್ತಾಯವಾಗಿ ಅದು ಅಭಿಮಾನಿಗಳಿಗೆ ಕೊಡುಗೆಯಾದರೆ ಅದಕ್ಕಿಂತ ತೃಪ್ತಿ ಇನ್ನೊಂದಿಲ್ಲ ಎಂದು ತಿಳಿಸಿದ್ದಾರೆ.

SCROLL FOR NEXT