ಕಾಶ್ಮೀರ ಪರದೇಶಿ 
ಸಿನಿಮಾ ಸುದ್ದಿ

ನಿಖಿಲ್ ಹೊಸ ಚಿತ್ರದ ಮೂಲಕ ಕಾಶ್ಮೀರ ಪರದೇಶಿ ಸ್ಯಾಂಡಲ್ ವುಡ್ ಪ್ರವೇಶ?

ಗುಂಡೆ ಜಾರಿ ಗಲ್ಲಂತೈಯಿಂದೆ ಖ್ಯಾತಿಯ ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ಸ್ಯಾಂಡಲ್ ವುಡ್ ನಟ ನಿಖಿಲ್ ಕುಮಾರ್ ಅಭಿನಯದ ಚಿತ್ರದ ಮೂಲಕ ಕನ್ನಡ ಚಿತ್ರ ನಿರ್ದೇಶಕಕ್ಕೆ ತೊಡಗಲಿದ್ದಾರೆ.ವಿಶೇಷವೆಂದರೆ ಜನವರಿ 31ರಿಂಡಲೇ ಚಿತ್ರೀಕರಣ ಪ್ರಾರಂಬಗೊಂಡಿದ್ದು ಇದೊಂದು ಸ್ಪೋರ್ಟ್ಸ್ ಡ್ರಾಮಾ ಎಂದು ಹೇಳಲಾಗಿದೆ. ಚಿತ್ರವನ್ನು ಟಿ ಸಿರೀಸ್ ಸಹಯೋಗದಲ್ಲಿ ಲಹರಿ ಪ್ರೊಡಕ್ಷನ್ ನಿರ

ಗುಂಡೆ ಜಾರಿ ಗಲ್ಲಂತೈಯಿಂದೆ ಖ್ಯಾತಿಯ ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ಸ್ಯಾಂಡಲ್ ವುಡ್ ನಟ ನಿಖಿಲ್ ಕುಮಾರ್ ಅಭಿನಯದ ಚಿತ್ರದ ಮೂಲಕ ಕನ್ನಡ ಚಿತ್ರ ನಿರ್ದೇಶಕಕ್ಕೆ ತೊಡಗಲಿದ್ದಾರೆ.ವಿಶೇಷವೆಂದರೆ ಜನವರಿ 31ರಿಂಡಲೇ ಚಿತ್ರೀಕರಣ ಪ್ರಾರಂಬಗೊಂಡಿದ್ದು ಇದೊಂದು ಸ್ಪೋರ್ಟ್ಸ್ ಡ್ರಾಮಾ ಎಂದು ಹೇಳಲಾಗಿದೆ. ಚಿತ್ರವನ್ನು ಟಿ ಸಿರೀಸ್ ಸಹಯೋಗದಲ್ಲಿ ಲಹರಿ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ.. ಹಿಂದಿ, ತಮಿಳು, ತೆಲುಗು ಮತ್ತು ಮರಾಠಿ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಕಾಶ್ಮೀರ ಪರದೇಶಿ ಇನ್ನೂ ಹೆಸರಿಡದ ಈ ಚಿತ್ರದಲ್ಲಿ ನಿಖಿಲ್ ಗೆ ಜೋಡಿಯಾಗಲಿದ್ದಾರೆ.

ಅಕ್ಷಯ್ ಕುಮಾರ್ ಅಭಿನಯದ ಮಿಷನ್ ಮಂಗಲ್ ಜೊತೆಗೆ ವಿದ್ಯಾ ಬಾಲನ್, ನಿತ್ಯಾ ಮೆನೆನ್, ಮತ್ತು ತಾಪ್ಸಿ  ಪನ್ನು ಅವರೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದ ಈ ನಟಿ ಸಿದ್ಧಾರ್ಥ್ ಅಭಿನಯದ ಸಿವಪ್ಪು ಮಂಜಲ್ ಪಚೈ ಎಂಬ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿಯೂ ಹೆಸರಾಗಿದ್ದಾರೆ.ಇಷ್ಟೇ ಅಲ್ಲದೆ ರಾಂಪಥ್ ಎಂಬ ಮರಾಠಿ ಚಿತ್ರ ಮತ್ತು ತೆಲುಗು ಚಿತ್ರ, ನರ್ತನಸಲದಲ್ಲಿ ಸಹ ಈ ನಟಿ ಅಭಿನಯಿಸಿದ್ದಾರೆ. ಇದೀಗ ನಿಖಿಲ್ ಕುಮಾರ್ ಅವರ ಚಿತ್ರ ಇವರಿಗೆ ಚೊಚ್ಚಲ ಕನ್ನಡ ಚಿತ್ರಆಗಿರಲಿದ್ದು ವಿವಿಧ ಕಲಾವಿದರೊಂದಿಗೆ ಹಲವಾರು ಸುತ್ತಿನ ಚರ್ಚೆಯ ನಂತರ ಚಿತ್ರತಂಡ ಈಕೆಯ ಹೆಸರನ್ನು ಅಂತಿಮವಾಗಿಸಿದೆ ಎಂದು ಮಾಹಿತಿ ಇದೆ. ಆದರೆ ಇದನ್ನಿನ್ನೂ ನಿರ್ಮಾಪಕರು ಅಧಿಕೃತವಾಗಿ ಹೇಳಿಲ್ಲ ಎಂಬುದು ಗಮನಾರ್ಹ.

ನಿಖಿಲ್ ಅವರ ಸ್ಪೋರ್ಟ್ಸ್ ಡ್ರಾಮಾದಲ್ಲಿ ಎರಡನೇ ನಾಯಕಿಯಾಗಿ ಸಂಪದ ಆಯ್ಕೆಯಾಗಿದ್ದಾರೆ "ಮಿಥುನ ರಾಶಿ" ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಹೆಸರು ಗಳಿಸಿರುವ ನಟಿ  ಈಗ ಬೆಳ್ಳಿ ಪರದೆಯತ್ತ ಬಂದಿದ್ದಾರೆ.ಸಂಪದ ಸಿಇಒ ಒಬ್ಬರ ಪುತ್ರಿಯಾಗಿ ಕಾಣಿಸಿಕೊಳ್ಲಲಿದ್ದು ನಿಖಿಲ್ ಅವರೊಂದಿಗೆ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಇನ್ನು ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್