ಭಜರಂಗಿ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಭಜರಂಗಿ -2 ಸಿನಿಮಾ ಸೆಟ್ ಗೆ ಬೆಂಕಿ ಹಿನ್ನೆಲೆ: ರಿಲೀಸ್ ದಿನಾಂಕ ಮುಂದೂಡಿಕೆ

ಶಿವರಾಜ್ ಕುಮಾರ್ ನಟನೆಯ ಭಜರಂಗಿ ಸಿನಿಮಾ ಸೆಟ್ ಗೆ ಜನವರಿ 16 ರಂದು ಆಕಸ್ಮಿಕ ಬೆಂಕಿ ಹೊತ್ತಿಕೊಂಡಿತ್ತು,  ಜನವರಿ ಅಂತ್ಯದೊಳಗೆ ಸಿನಿಮಾ ರಿಲೀಸ್ ಆಗಬೇಕಿತ್ತು, ಆದರೆ ಸೆಟ್ ಗೆ ಬೆಂಕಿ ಬಿದ್ದ ಪರಿಣಾಮ ರಿಲೀಸ್ ಡೇಟ್ ಮುಂದೂಡಲಾಗಿದೆ ಎಂದು ನಿರ್ದೇಶಕ  ಹರ್ಷ ಹೇಳಿದ್ದಾರೆ.

ಶಿವರಾಜ್ ಕುಮಾರ್ ನಟನೆಯ ಭಜರಂಗಿ ಸಿನಿಮಾ ಸೆಟ್ ಗೆ ಜನವರಿ 16 ರಂದು ಆಕಸ್ಮಿಕ ಬೆಂಕಿ ಹೊತ್ತಿಕೊಂಡಿತ್ತು,  ಜನವರಿ ಅಂತ್ಯದೊಳಗೆ ಸಿನಿಮಾ ರಿಲೀಸ್ ಆಗಬೇಕಿತ್ತು, ಆದರೆ ಸೆಟ್ ಗೆ ಬೆಂಕಿ ಬಿದ್ದ ಪರಿಣಾಮ ರಿಲೀಸ್ ಡೇಟ್ ಮುಂದೂಡಲಾಗಿದೆ ಎಂದು ನಿರ್ದೇಶಕ  ಹರ್ಷ ಹೇಳಿದ್ದಾರೆ.

ಮೊದಲ ಹಂತದಲ್ಲಿ ಅಂದರೆ ಸೆಟ್ ಗೆ ಬೆಂಕಿ ಬೀಳುವ ವರೆಗೆ ಶೇ. 80 ರಷ್ಟು ಶೂಟಿಂಗ್ ಮುಗಿದಿತ್ತು,  ಆದರೆ ಉಳಿದ ಭಾಗದ ಶೂಟಿಂಗ್ ಗಾಗಿ ಆರ್ಟ್ ಡಿಪಾರ್ಟ್ ಮೆಂಟ್ ಮತ್ತೆ ಸೆಟ್ ಅನ್ನು ಮರು ಸೃಷ್ಟಿಸುತ್ತಿದೆ.  ಮೋಹನ್ ಬಿ ಕೆರೆ ಮೊದಲ ಬಾರಿ 26 ದಿನಗಳಲ್ಲಿ ಸೆಟ್ ಅಪ್ ಮಾಡಿದ್ದರು. ಈಗ ಇನ್ನು ಕಡಿಮೆ ಅವಧಿಯಲ್ಲಿ ಸೆಟ್ ನಿರ್ಮಾಣ ವಾಗಲಿದೆ.  ಹೀಗಾಗಿ ಕೆಲಸ ಬೇಗ ಮುಗಿಯಲಿದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಈ ರೀತಿಯ ಆಕಸ್ಮಿಕ ಬೆಂಕಿ ಉಂಟಾಗದಂತೆ  ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹರ್ಷ ತಿಳಿಸಿದ್ದಾರೆ.

ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಕಲಾಗಿದ್ದ ಗುಹೆ ಸೆಟ್‌ನಲ್ಲಿ, ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಂತೆ ಎಲ್ಲಾ ಸುಸೂತ್ರವಾಗೇ ನಡಿಯುತ್ತಿತ್ತು. ಈ ವೇಳೆ ನಟ ಶಿವರಾಜ್ ಕುಮಾರ್ ಸೇರಿದಂತೆ 200 ಜನ ಜ್ಯೂನಿಯರ್ ಆರ್ಟಿಸ್ಟ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆಗ ಇದ್ದಕ್ಕಿದ್ದಂತೆ ಸೆಟ್‍ಗೆ ಬೆಂಕಿ ಬಿದ್ದಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಸೆಟ್ ಹೊತ್ತಿ ಉರಿದಿತ್ತು.

ಕನ್ನಡ ಸೇರಿದಂತೆ ತೆಲುಗು, ಮಲಯಾಳಂ, ತಮಿಳು, ಹಿಂದಿ ಭಾಷೆಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಅರ್ಜುನ್ ಜನ್ಯಾ ಸಂಗೀತ ಈ ಚಿತ್ರಕ್ಕಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!