ಸಿನಿಮಾ ಸುದ್ದಿ

ಬೆಂಗಳೂರು ಚಲನಚಿತ್ರೋತ್ಸವದ ಖರ್ಚು ವೆಚ್ಚ ಎಷ್ಟು? ಆರ್ ಟಿಐ ಮೊರೆ ಹೋದ ಮದನ್ ಪಟೇಲ್ 

Nagaraja AB

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ  ಉದ್ಘಾಟನೆಗೆ ಇನ್ನು 6 ದಿನಗಳು ಮಾತ್ರ ಬಾಕಿ ಉಳಿದಿವೆ ಇದರ ನಡುವೆಯೇ ಪಾಸ್ ವಿತರಣೆಯಿಂದ ಹಿಡಿದು ಕನ್ನಡ ಚಲನಚಿತ್ರ ಆಯ್ಕೆಯವರೆಗೂ ಸಾಕಷ್ಟು ಗೊಂದಲ ಹಾಗೂ ಆರೋಪ ಕೇಳಿಬಂದಿದ್ದು, ಕನ್ನಡ ಚಲನಚಿತ್ರ ಮಂಡಳಿಯ ಬಗ್ಗೆ ಸಿನಿ ಮಾಧ್ಯಮದ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. 

ಕನ್ನಡ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ ಸುನಿಲ್ ಪುರಾಣಿಕ್ ಪದಗ್ರಹಣ ಮಾಡುತ್ತಿದ್ದಂತೆಯೇ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜವಾಬ್ದಾರಿ ಹೆಗಲೇರಿದ್ದು, ಈ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ತೋರಿಸಲು ಶ್ರಮಿಸುತ್ತಿದ್ದಾರೆ 

ಆದರೆ, ಇದೇ ಸಂದರ್ಭದಲ್ಲಿ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಆನ್ ಲೈನ್ ವ್ಯವಸ್ಥೆ ಮಾಡಿ ಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿ, ಪ್ರತಿಭಟನೆಯ ಬಳಿಕ ಆನ್ ಲೈನ್ ಜತೆಗೆ ಹಿಂದಿನ ವ್ಯವಸ್ಥೆಯನ್ನೂ ಮುಂದುವರಿಸುವ ತೀರ್ಮಾನ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗುವ ಹಂತಕ್ಕೆ ಬಂದಿದ್ದ ಚಿತ್ರಗಳನ್ನು ಕನ್ನಡ ನೆಲದಲ್ಲೇ ಕಡೆಗಣಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ 

‘ಕಾಳಿದಾಸ ಕನ್ನಡ ಮೇಷ್ಟ್ರ’ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಚಿತ್ರವಾದರೂ, ಅದನ್ನು ಮನರಂಜನಾತ್ಮಕ ಚಿತ್ರಗಳ ಸಾಲಿಗೆ ಸೇರಿಸಿರುವುದು ಸರಿಯಲ್ಲ ಎಂಬುದು ನಿರ್ದೇಶಕ ಕವಿರಾಜ್ ಅಂಬೋಣ  ಕನ್ನಡ ಚಿತ್ರಗಳ ಆಯ್ಕೆಗೆ ಮಾನದಂಡಗಳೇನು?  ರಾಜ್ಯ ಸರ್ಕಾರ ಮತ್ತು ಕನ್ನಡ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ನಡೆಯಲಿರುವ 12ನೇ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ವಿಶ್ವದ 60 ರಾಷ್ಟ್ರಗಳ 200 ಸಿನಿಮಾಗಳಲ್ಲಿ ಕನ್ನಡ ಚಿತ್ರಗಳೂ ಸೇರಿವೆ  ಆದರೆ ಇವುಗಳ ಆಯ್ಕೆಯ ಮಾನದಂಡಗಳೇನು ಎಂಬುದನ್ನು ಬಹಿರಂಗಪಡಿಸಬೇಕು ಎಂದು ನಟ, ನಿರ್ಮಾಪಕ, ನಿರ್ದೇಶಕ ಮದನ್ ಪಟೇಲ್ ಪ್ರಶ್ನಿಸಿದ್ದಾರೆ

ಮಹದೇಶ್ವರ ಬೆಟ್ಟಕ್ಕೆ ತೆರಳಿರುವ ಮದನ್ ಪಟೇಲ್ ಗುರುವಾರ ಅಲ್ಲಿಂದಲೇ ಯುಎನ್‍ಐ ಕನ್ನಡ ಸುದ್ದಿ ಸಂಸ್ಥೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಕನ್ನಡ ಚಲನಚಿತ್ರ ವಿಭಾಗದ ಆಯ್ಕೆ ಪ್ರಕ್ರಿಯೆಗೆ ಮಾನದಂಡಗಳೇನು, ಆಯ್ಕೆ ಸಮಿತಿಯನ್ನು ರಚಿಸಿದವರು ಯಾರು, ಆಯ್ಕೆ ಸಮತಿಯ ಸದಸ್ಯರುಗಳು ಯಾರು, ಅವರ ವಿವರಗಳೇನು, ಆಯ್ಕೆ ಪ್ರಕ್ರಿಯೆಗೆ ಮಾಡಿರುವ ಖರ್ಚು ವೆಚ್ಚಗಳೆಷ್ಟು ಎಂದು ಪ್ರಶ್ನಿಸುವ ಮೂಲಕ, ಕನ್ನಡ ಚಲನಚಿತ್ರ ಅಕಾಡೆಮಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ ಎಂದು ದೂರಿದ್ದಾರೆ 

 ಆಯ್ಕೆ ಸಮಿತಿ ಸದಸ್ಯರ ವಿವರಗಳನ್ನು ಗೌಪ್ಯವಾಗಿಟ್ಟಿರುವುದು ಏಕೆ, ಅವರು ಯಾವ ಯಾವ ದಿನಗಳಂದು ಯಾವ ಯಾವ ಸಿನಿಮಾಗಳನ್ನು ವೀಕ್ಷಿಸುತ್ತಾರೆ ಎಂಬುದಕ್ಕೆ ಉತ್ತರ ಸಿಗಬೇಕಿದೆ, ಈ ಬಗ್ಗೆ ಸುನಿಲ್ ಪುರಾಣಿಕ್ ಹಾಗೂ ಅಕಾಡೆಮಿಯ ಸಿಬ್ಬಂದಿಯನ್ನು ವಿಚಾರಿಸಿದಾಗ, ಆಯ್ಕೆ ಸಮಿತಿಯ ಸದಸ್ಯರುಗಳನ್ನು ಹೊರಗಿನಿಂದ ಕರೆಸಲಾಗಿದ್ದು, ವಿವರಗಳನ್ನು ಗೌಪ್ಯವಾಗಿಡಲಾಗಿದೆ ಎನ್ನುತ್ತಾರೆ  ಹೀಗಾಗಿ ಆರ್ ಟಿ ಐ ಮೂಲಕ ಮಾಹಿತಿಗೆ ಮುಂದಾಗಿರುವುದಾಗಿ ಮದನ್ ಪಟೇಲ್ ತಿಳಿಸಿದ್ದಾರೆ 

ಕರ್ನಾಟಕ ಸರ್ಕಾರದ ಹಣ ಸಾರ್ವಜನಿಕರ ಹಣವಾಗಿದ್ದು, ಬೆಂಗಳೂರು ಚಲನಚಿತ್ರೋತ್ಸವಕ್ಕೆ ಮಾಡುವ ಖರ್ಚಿನ ಲೆಕ್ಕ ಸರಿಯಾಗಿ ಸಿಗಲೇಬೇಕು ಎಂದು ಮದನ್ ಪಟೇಲ್ ಆಗ್ರಹಿಸಿದ್ದಾರೆ.

ವಿಶೇಷ ವರದಿ: ಎಸ್ .ಆಶಾ

SCROLL FOR NEXT