ಚಿತ್ರದ ಫೋಟೋ 
ಸಿನಿಮಾ ಸುದ್ದಿ

'ಶಿವಾಜಿ ಸುರತ್ಕಲ್' ಯಶಸ್ವಿ ಪ್ರದರ್ಶನ, ಭಾಗ 2 ಬರುತ್ತೆ ಎಂದ ರಮೇಶ್ ಅರವಿಂದ್!

ರಣ ರೋಚಕ ರಣಗಿರಿ ರಹಸ್ಯವನ್ನು ತೆರೆದಿಟ್ಟಿರುವ ‘ಶಿವಾಜಿ ಸುರತ್ಕಲ್ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶಿತವಾಗುತ್ತಿದ್ದು, ಜನರ ಮನಗೆದ್ದಿದೆ ಎಂದು ಚಿತ್ರತಂಡ ಸಂತಸ ಹಂಚಿಕೊಂಡಿದೆ.

ಬೆಂಗಳೂರು: ರಣ ರೋಚಕ ರಣಗಿರಿ ರಹಸ್ಯವನ್ನು ತೆರೆದಿಟ್ಟಿರುವ ‘ಶಿವಾಜಿ ಸುರತ್ಕಲ್ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶಿತವಾಗುತ್ತಿದ್ದು, ಜನರ ಮನಗೆದ್ದಿದೆ ಎಂದು ಚಿತ್ರತಂಡ ಸಂತಸ ಹಂಚಿಕೊಂಡಿದೆ.

ಚಿತ್ರದ ಯಶಸ್ಸಿನ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ನಟ ರಮೇಶ್ ಅರವಿಂದ್, “ಶಿವಾಜಿ ಸುರತ್ಕಲ್ ಪ್ರತಿಯೊಬ್ಬರೂ ನೋಡಲೇಬೇಕಾದಂತಹ ಚಿತ್ರ ಕುಟುಂಬ ಸಮೇತರಾಗಿ ಹೋಗಿ ಚಿತ್ರ ವೀಕ್ಷಿಸುತ್ತಿರುವುದಾಗಿ ಅಭಿಮಾನಿಗಳು ಫೋಟೋ ಸಹಿತ ಟ್ವೀಟ್ ಮಾಡ್ತಿದ್ದಾರೆ ತುಂಬ ಖುಷಿಯಾಗ್ತಿದೆ” ಎಂದರು.

“ಕ್ರಿಕೆಟಿಗ ರಾಹುಲ್ ದ್ರಾವಿಡ್ ಚಿತ್ರ ವೀಕ್ಷಿಸಿ ಬೆನ್ನು ತಟ್ಟಿದ್ದಾರೆ ಕಥೆ ಅಷ್ಟರಮಟ್ಟಿಗಿನ ಗಟ್ಟಿತನ ಹೊಂದಿದ್ದು ಶಿವಾಜಿ ಸುರತ್ಕಲ್ ಭಾಗ 2 ಖಚಿತ  ಶಿವಾಜಿಯ ‍ಫ್ಲ್ಯಾಷ್ ಬ್ಯಾಕ್ ಅಥವಾ ಮುಂದೇನು ಎಂಬುದರ ಮೇಲೆಯೂ ಕಥೆ ಹೆಣೆಯಬಹುದು” ಎಂದು ರಮೇಶ್ ಅರವಿಂದ್ ಹೇಳಿದರು.

ನಿರ್ದೇಶಕ ಶ್ರೀವತ್ಸ, “ಕನ್ನಡ ಚಿತ್ರ ಪ್ಯಾನ್ ಇಂಡಿಯಾ ಟ್ರಾವೆಲ್ ಮಾಡುತ್ತ 173 ಚಿತ್ರಮಂದಿರಗಳಲ್ಲಿ ಶಿವಾಜಿ ಸುರತ್ಕಲ್ ಯಶಸ್ವಿಯಾಗಿ ಪ್ರದರ್ಶಿತವಾಗುತ್ತಿದೆ ಚಿತ್ರಕಥೆಯ ಬಗ್ಗೆ ತಮಿಳು, ತೆಲುಗು ಚಿತ್ರರಂಗ ಹುಬ್ಬೇರಿಸಿದೆ  ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಹೌಸ್ ಫುಲ್ ಆಗಿದ್ದು, ನಿಜಕ್ಕೂ ರೋಮಾಂಚನವಾಯಿತು ಈ ಯಶಸ್ಸು ಇನ್ನಷ್ಟು ವಿಸ್ತರಣೆಗೆ ಅವಕಾಶ ನೀಡಲಿದೆ ಎಂಬ ಆಶಯವಿದೆ” ಎಂದರು.

ಬಿಗಿಯಾದ ನಿರೂಪಣೆ,  ಅಚ್ಚುಕಟ್ಟಾದ ಚಿತ್ರಕಥೆ ಜೊತೆಗೆ ರಮೇಶ್ ಅರವಿಂದ್ ಅಭಿನಯ. ಕೊನೆಯ ತನಕ ಎಲ್ಲೂ ಸುಳಿವು ಬಿಟ್ಟುಕೊಡದಂತೆ ಸಾಗುವ ಕಥೆ ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡಿಸುವಂತಿದ್ದು, ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಆಕರ್ಷಿಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Vladimir Putin ಭೇಟಿ ಮುನ್ನ ಭಾರತ-ರಷ್ಯಾ ಒಪ್ಪಂದಕ್ಕೆ ಸಹಿ: ಡಿ. 4ರಂದು ದೆಹಲಿಯಲ್ಲಿ 23ನೇ ಶೃಂಗಸಭೆ

ದಿತ್ವಾ ಚಂಡಮಾರುತಕ್ಕೆ ಶ್ರೀಲಂಕಾ ತತ್ತರ: ನೆರವು ನೀಡುವ ವಿಮಾನಗಳಿಗೆ ಅನುಮತಿ ವಿಳಂಬ, ಪಾಕ್ ಆರೋಪದ ವಿರುದ್ಧ ಭಾರತ ತೀವ್ರ ಕಿಡಿ

ಕುಡುಕರಿಗೊಬ್ಬ, ಬ್ಯಾಚುಲರ್‌ಗಳಿಗೆ ಮತ್ತೊಬ್ಬ ದೇವರು: ಹಿಂದೂಗಳಲ್ಲಿ ಎಷ್ಟು ದೇವರಿದ್ದಾರೆ: 3 ಕೋಟಿ ಇದ್ದಾರಾ? ವಿವಾದವೆಬ್ಬಿಸಿದ ರೇವಂತ್ ರೆಡ್ಡಿ ಹೇಳಿಕೆ

ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ: ಕಬ್ಬಿನ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ; ಸ್ಥಳದಲ್ಲೇ ನಾಲ್ವರು ಯುವಕರ ದುರ್ಮರಣ

ಬಳ್ಳಾರಿ: ಗಣಿಗಾರಿಕೆ ಚಟುವಟಿಕೆಗಳಿಂದ 'ದೇವದಾರು' ಅರಣ್ಯ ಉಳಿಸಲು ರೈತರಿಂದ 'ಅಪ್ಪಿಕೊ' ಚಳುವಳಿ !

SCROLL FOR NEXT