ಕೆಜಿಎಫ್-2: ಶೂಟಿಂಗ್ ಮುಗಿಸಿ ಮುಂಬೈಗೆ ತೆರಳಿದ ರವೀನಾ 
ಸಿನಿಮಾ ಸುದ್ದಿ

ಕೆಜಿಎಫ್-2: ಶೂಟಿಂಗ್ ಮುಗಿಸಿ ಮುಂಬೈಗೆ ತೆರಳಿದ ರವೀನಾ

‘ಕೆಜಿಎಫ್’ ಚಾಪ್ಟರ್ -2 ಎಂದೊಡನೆ ಕೇವಲ ಯಶ್ ಅಭಿಮಾನಿಗಳಷ್ಟೇ ಅಲ್ಲ ಚಿತ್ರರಂಗದ ಬಗೆಗೆ ಆಸಕ್ತಿ ಇರುವ ಪ್ರತಿಯೊಬ್ಬರ ಕಿವಿಯೂ ನಿಮಿರುತ್ತದೆ. ಇಂತಹಾ ಸಿನಿಮಾ ಚಿತ್ರೀಕರ ಇದೀಗ ಅಂತಿಮ ಹಂತ ತಲುಪಿದೆ ಎಂಬುದು ತಿಳಿದ ಸಂಗತಿ. ಅಂದಹಾಗೆ ಈ ಚಿತ್ರದಲ್ಲಿ ಬಾಲಿವುಡ್ ತಾರೆ ರವೀನಾ ಟಂಡನ್ ನಟಿಸಿದ್ದು ಇಅವ್ರೀಗ ತಮ್ಮ ಪಾಲಿನ ಚಿತ್ರೀಕರಣ ಮುಗಿಸಿ ಮುಂಬೈಗೆ ಹಿಂತಿರುಗಿದ್ದಾರೆ.

ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರೋದ್ಯಮದತ್ತ ನೋಡುವಂತೆ ಂಆಡಿದ್ದು ಕೆಜಿಎಫ್. ಇಂತಹಾ ಚಿತ್ರದ ಎರಡನೇ ಭಾಗ ಇದೀಗ ತಯಾರಾಗಿತ್ತಿದ್ದು ಇದರಲ್ಲಿ ಸಂಜಯ್ ದತ್, ರವೀನಾ ಟಂಡನ್ ಸೇರಿ ಹಲವಾರು ಖ್ಯಾತ ನಟ ನಟಿಯರು ಅಭಿನಯಿಸಿದ್ದಾರೆ. ಕೆಜಿಎಫ್ ಚಾಪ್ಟರ್ 2ನಲ್ಲಿ ಪ್ರಧಾನ ಮಂತ್ರಿ ರಮಿಕಾ ಸೇನ್ ಪಾತ್ರದಲ್ಲಿ ನಟಿಸಿರುವ ರವೀನಾ ತಮ್ಮ ಪಾಲಿನ ಚಿತ್ರೀಕರಣ ಮುಗಿಸಿ ಮುಂಬೈಗೆ ತೆರಳಿದ್ದಾರೆ.

ಝೈದರಾಬಾದ್ ನಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ರವೀನಾ ತಮ್ಮ ಪಾಲಿನ ಚಿತ್ರೀಕರಣದ ಕಡೇ ದಿನ ಇಡೀ ಚಿತ್ರತಂಡದ ಜತೆ ಫೋಟೋ ಸಹ ತೆಗೆಸಿಕೊಂಡಿದ್ದಾರೆ.ಇನ್ನು ವಿಶೇಷವೆಂದರೆ ಕೆಜಿಎಫ್ ಚಿತ್ರತಂಡ ಸಹ ಬಾಲಿವುಡ್ ನಟಿಗೆ ಅದ್ದೂರಿಯಾಗಿ ಬೀಲ್ಕೊಡುಗೆ ನೀಡಿ ಕಳುಹಿಸಿದೆ. 

ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಕೆಜಿಎಫ್ ಚಿತ್ರದಲ್ಲಿ ರವೀನಾ ಅವರ ಪ್ರಧಾನಿ ಪಾತ್ರ ಸಹ ಅಷ್ಟೇ ಕುತೂಹಲ ಹುಟ್ಟಿಸಿದೆ. ಈ ಚಿತ್ರ ಇದೇ ವರ್ಷ ಅಕ್ಟೋಬರ್ ನಲ್ಲಿ ತೆರೆಗೆ ಬರಲಿದೆ ಎಂದು ಮೂಲಗಳು ಹೇಳಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ