ವಿನ್ನರ್ ರಾಕೇಶ್ ಪೂಜಾರಿ 
ಸಿನಿಮಾ ಸುದ್ದಿ

ರಾಕೇಶ್ ಪೂಜಾರಿಗೆ ‘ಕಾಮಿಡಿ ಕಿಲಾಡಿಗಳು 3’ ವಿನ್ನರ್ ಪಟ್ಟ, ಸಂತೋಷ್ ರನ್ನರ್ ಅಪ್

ಉಡುಪಿಯ ರಾಕೇಶ್ ಪೂಜಾರಿ ಅವರು ಜ಼ೀ ಕನ್ನಡ ವಾಹಿನಿಯ ಜನಪ್ರಿಯ ಹಾಸ್ಯ ಕಾರ್ಯಕ್ರಮ ‘ಕಾಮಿಡಿ ಕಿಲಾಡಿಗಳು 3’ರ ವಿನ್ನರ್ ಪಟ್ಟ ಗಿಟ್ಟಿಸಿದ್ದು, ಸಂತೋಷ್ ಅವರು ರನ್ನರ್ ಅಪ್ ಆಗಿದ್ದಾರೆ.

ಬೆಂಗಳೂರು: ಉಡುಪಿಯ ರಾಕೇಶ್ ಪೂಜಾರಿ ಅವರು ಜ಼ೀ ಕನ್ನಡ ವಾಹಿನಿಯ ಜನಪ್ರಿಯ ಹಾಸ್ಯ ಕಾರ್ಯಕ್ರಮ ‘ಕಾಮಿಡಿ ಕಿಲಾಡಿಗಳು 3’ರ ವಿನ್ನರ್ ಪಟ್ಟ ಗಿಟ್ಟಿಸಿದ್ದು, ಸಂತೋಷ್ ಅವರು ರನ್ನರ್ ಅಪ್ ಆಗಿದ್ದಾರೆ.

ಇಂದು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ನಟ ಜಗ್ಗೇಶ್ ಅವರು ಕಾಮಿಡಿ ಕಿಲಾಡಿಗಳು ಸೀಸನ್ 3 ರ ವಿನ್ನರ್ ಮತ್ತು ರನ್ನರ್ ಅಪ್ ಗಳನ್ನು ಘೋಷಿಸಿದರು. ಜೀ ಕನ್ನಡವತಿಯಿಂದ ವಿನ್ನರ್ 8 ಲಕ್ಷ ರೂಪಾಯಿ ಹಾಗೂ ರನ್ನರ್ ಅಪ್ ಗೆ 4 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗಿದೆ.

ಕೋಳಿ ಕಳ್ಳ ಖ್ಯಾತಿಯ ಮನೋಹರ್ ಹಾಗೂ ಬಾ ಮಲಿಕೋ ಖ್ಯಾತಿಯ ದಾನಪ್ಪ ಅವರು ಎರಡನೇ ರನ್ನರ್ ಅಪ್ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಈ ಮೂಲಕ 15 ಸ್ಪರ್ಧಿಗಳು ತೀವ್ರ ಪೈಪೋಟಿ ನೀಡುತ್ತ, 26 ವಾರಗಳು ಕಾಲ ನಡೆದ ಈ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ ಬಿದ್ದಿದೆ. 50 ಸಾವಿರಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಫಿನಾಲೆ ನಡೆಯಿತು. ಹಲವು ವಿಶೇಷಗಳಿಂದ ಕೂಡಿದ ಕಾಮಿಡಿ ಕಿಲಾಡಿಗಳು ಸೀಜ಼ನ್-3ರ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಶನಿವಾರ ಸಂಜೆ 6 ರಿಂದ ಜ಼ೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT