ಕಿಚ್ಚ ಸುದೀಪ್ ಗೆ ಸಲ್ಮಾನ್ ಖಾನ್ ಕೊಟ್ರು ದುಬಾರಿ ಗಿಫ್ಟ್! 
ಸಿನಿಮಾ ಸುದ್ದಿ

ಕಿಚ್ಚ ಸುದೀಪ್ ಗೆ ಸಲ್ಮಾನ್ ಖಾನ್ ಕೊಟ್ರು ದುಬಾರಿ ಗಿಫ್ಟ್!

ಸಲ್ಮಾನ್ ಖಾನ್ ಕಿಚ್ಚ ಸುದೀಪ್ ಗೆ ಬಿಎಂಡಬ್ಲ್ಯೂ ಎಂ5 ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಇದರಿಂದ ಖುಷಿಯಾಗಿರುವ ಕಿಚ್ಚ ತಮ್ಮ ಸಂತೋಷವನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

ನಟ ಕಿಚ್ಚ ಸುದೀಪ್ ಗೆ ಇದು ಸಂಭ್ರಮದ ಕಾಲ! "ದಬಾಂಗ್​-3" ಸಿನಿಮಾದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಜತೆ ಅಭಿನಯಿಸಿದ್ದ ಕ್ಷಣ ಅತ್ಯದ್ಭುತವಾಗಿತ್ತು ಎಂದ್ದಿದ್ದ ಸುದೀಪ್ ಆ ವೇಳೆಯಿಂದ ತಮ್ಮ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಿದೆ ಎಂದೂ ಹೇಳಿಕೊಂಡಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಬಾಲಿವುಡ್ ಸ್ಟಾರ್ ಸಲ್ಮಾನ್ ಕಿಚ್ಚ ಸುದೀಪ್ ಗೆ ಭರ್ಜರಿ ಗಿಫ್ಯ್ ಒಂದನ್ನು ನೀಡಿದ್ದಾರೆ.

ಸಲ್ಮಾನ್ ಖಾನ್ ಕಿಚ್ಚ ಸುದೀಪ್ ಗೆ ಬಿಎಂಡಬ್ಲ್ಯೂ ಎಂ5 ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಇದರಿಂದ ಖುಷಿಯಾಗಿರುವ ಕಿಚ್ಚ ತಮ್ಮ ಸಂತೋಷವನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

"ನಾವು ಒಳ್ಳೆಯದನ್ನು ಮಾಡಿದರೆ ನಮಗೂ ಯಾವಾಗಲೂ ಒಳ್ಳೆಯದೇ ಆಗುತ್ತದೆ ಎಂಬ ಸಾಲನ್ನು ನಾನು ಇನ್ನಷ್ಟು ನಂಬುವಂತೆ ಮಾಡಿದ್ದು ನಟ ಸಲ್ಮಾನ್ ಖಾನ್! ಅವರು ಹೊಚ್ಚ ಹೊಸ ಬಿಎಂಡಬ್ಲ್ಯೂ ಎಂ5 ಕಾರಿನೊಡನೆ ನನ್ನ ಮನೆಗೆ ಆಗಮಿಸಿದಾಗ ನನಗೆ ನಿಜಕ್ಕೂ ಅಚ್ಚರಿಯಾಗಿತ್ತು.

"ನನ್ನ ಕುಟುಂಬದ ಮೇಲೆ ಸಲ್ಮಾನ್ ಖಾನ್ ಈ ಪರಿ ಪ್ರೀತಿ ತೋರಿಸುತ್ತಿರುವುದಕ್ಕೆ ಧನ್ಯವಾದಗಳು! ನಿಮ್ಮ ಜತೆಗೆ ಕೆಲಸ ಮಾಡಿರುವುದು ನನಗೊಂದು ಗೌರವ ಹಾಗೂ ನೀವು ನನ್ನ ಮನೆಗೆ ಭೇಟಿ ನೀಡಿರುವುದು ನನ್ನ ಪಾಲಿಗೆ ದೊಡ್ಡ ಉಡುಗೊರೆ" ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

ಇನ್ನು ಇತ್ತೀಚೆಗೆ ಸಲ್ಮಾನ್ ಖಾನ್ ಹುಟ್ಟುಹಬ್ಬದಂದು ನಡೆದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಕುಟುಂಬ ಭಾಗವಹಿಸಿತ್ತು. ಕಳೆದ ಬಾರಿ ಸಲ್ಮಾನ್ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಅವರು ನಟನ ತಂದೆ-ತಾಯಿಯನ್ನು ಸಹ ಭೇಟಿಯಾಗಿದ್ದರು.ಅಲ್ಲದೆ ಸಲ್ಮಾನ್ ಈ ಹಿಂದೆ ಕಿಚ್ಚ ಸುದೀಪ್ ಗೆ ತಮ್ಮ ಪ್ರೀತಿಯ ಣಾಯಿಯ ಚಿತ್ರ ಪೇಂಟ್ ಮಾಡಿರುವ ಟಿ ಶರ್ಟ್ ಒಂದನ್ನು ಸಹ ಗಿಫ್ಟ್ ಕೊಟ್ಟಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ