ಸಿನಿಮಾ ಸುದ್ದಿ

ಗಾನ ಗಂಧರ್ವ ಯೇಸುದಾಸ್ 80ನೇ ಜನ್ಮದಿನ: ಪ್ರಧಾನಿ ಮೋದಿ ಹಾರೈಕೆ

Nagaraja AB

ನವದೆಹಲಿ: ಖ್ಯಾತ ಹಿನ್ನೆಲೆ ಗಾಯ ಕೆ ಜೆ ಯೇಸುದಾಸ್ ಅವರ 80 ನೇ ಹುಟ್ಟುಹಬ್ಬದಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶುಭಾಶಯ ಕೋರಿದ್ದು, ಭಾರತೀಯ ಸಂಸ್ಕೃತಿಗೆ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಶ್ಲಾಘಿಸಿದ್ದಾರೆ

ಬಹುಮುಖ ಪ್ರತಿಭೆಯ ಕೆ ಜೆ ಯೇಸುದಾಸ್ ಜಿ ಅವರಿಗೆ 80ನೇ ಹುಟ್ಟುಹಬ್ಬದ ಶುಭಾಶಯಗಳು. ಅವರ ಸುಮಧುರ ಸಂಗೀತ ಮತ್ತು ಭಾವಪೂರ್ಣವಾದ ಚಿತ್ರಣಗಳು ಅವರನ್ನು ಎಲ್ಲಾ ವಯಸ್ಸಿನ ಜನರಲ್ಲಿ ಜನಪ್ರಿಯಗೊಳಿಸಿವೆ. ಅವರು ಭಾರತೀಯ ಸಂಸ್ಕೃತಿಗೆ ಅಮೂಲ್ಯವಾದ ಕೊಡುಗೆಗಳನ್ನು ನೀಡಿದ್ದಾರೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.ಇದೇ ವೇಳೆ ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಹಾರೈಸುತ್ತೇನೆ ಎಂದು ಟ್ವಿಟರ್ ಮೂಲಕ ತಿಳಿಸಿದ್ದಾರೆ.

1940 ಜನವರಿ 10 ರಂದು ಜನಿಸಿದ, ಬಹುಮುಖ ಸಂಗೀತಗಾರ ಮತ್ತು ಹಿನ್ನೆಲೆ ಗಾಯಕನಿಗೆ 1975 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ್ ಮತ್ತು 2017 ರಲ್ಲಿ ಮೋದಿ ಸರ್ಕಾರವು ಕಲೆಗಳಿಗೆ ನೀಡಿದ ಕೊಡುಗೆಗಳಿಗಾಗಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ್ ನೀಡಿ ಗೌರವಿಸಲಾಗಿದೆ.

ಮಲಯಾಳಂ, ತಮಿಳು, ತೆಲುಗು, ಹಿಂದಿ, ಕನ್ನಡ, ಬಂಗಾಳಿ, ಒಡಿಯಾ ಮತ್ತು ಅರೇಬಿಕ್, ಇಂಗ್ಲಿಷ್, ಲ್ಯಾಟಿನ್ ಮತ್ತು ರಷ್ಯನ್ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ 5 ದಶಕಗಳ ಕಾಲ 80 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ದಾಖಲೆಯನ್ನು ಯೇಸುದಾಸ್ ಸಲ್ಲುತ್ತದೆ. ಯೇಸುದಾಸ್ ಎಂಟು ಬಾರಿ ರಾಷ್ಟ್ರಮಟ್ಟದ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಗೆ ಭಾಜನರಾಗಿದ್ದಾರೆ

SCROLL FOR NEXT