ರಚಿತಾ ರಾಮ್ 
ಸಿನಿಮಾ ಸುದ್ದಿ

ಸೈಕಲಾಜಿಕಲ್‌ ಮಿಸ್ಟ್ರಿ ಥ್ರಿಲ್ಲರ್‌ 'ಲಿಲ್ಲಿ' ಯಲ್ಲಿ ಗುಳಿಕೆನ್ನೆ ಬೆಡಗಿ ರಚಿತಾರಾಮ್?

ಸೈಕಲಾಜಿಕಲ್‌ ಮಿಸ್ಟ್ರಿ ಥ್ರಿಲ್ಲರ್‌ ಲಿಲ್ಲಿ ಎಂಬ ಸಿನಿಮಾದಲ್ಲಿ ರಚಿತಾ ರಾಮ್  ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.  ವಿಜಯ್ ಎಸ್ ಗೌಡ ಮೊದಲ ಬಾರಿಗೆ ಸಿನಿಮಾ ನಿರ್ದೇಶಿಸುತ್ತಿದ್ದಾರೆ. 

ಸೈಕಲಾಜಿಕಲ್‌ ಮಿಸ್ಟ್ರಿ ಥ್ರಿಲ್ಲರ್‌ ಲಿಲ್ಲಿ ಎಂಬ ಸಿನಿಮಾದಲ್ಲಿ ರಚಿತಾ ರಾಮ್  ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.  ವಿಜಯ್ ಎಸ್ ಗೌಡ ಮೊದಲ ಬಾರಿಗೆ ಸಿನಿಮಾ ನಿರ್ದೇಶಿಸುತ್ತಿದ್ದಾರೆ. 

ಒಂದೂವರೆ ವರ್ಷದಿಂದ  ಸಿನಿಮಾಗಾಗಿ ಕಥೆ - ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಈ  ಹಿಂದೆ “ನೀರ್‌ದೋಸೆ’, “ಗೋವಿಂದಾಯ ನಮಃ’ (ತೆಲುಗು ವರ್ಷನ್‌), “ರಂಗಿತರಂಗ’ ಚಿತ್ರಗಳಲ್ಲಿ ಕೆಲಸ ಮಾಡಿದ್ದ ವಿಜಯ್‌ ಎಸ್‌.ಗೌಡ, ಅನಿಮೇಷನ್‌ ಹಿನ್ನೆಲೆಯಿಂದ ಬಂದವರು.

8 ವರ್ಷಗಳ ಕಾಲ ಕಾರ್ಪೋರೇಟ್‌ ಕಂಪೆನಿಯಲ್ಲಿ ಕೆಲಸ ಮಾಡಿದ್ದ ಅವರು, ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಸಿನಿಮಾಗಳಿಗೆ ಸಂಬಂಧಿಸಿದ ಕೆಲಸ ಮಾಡಿಕೊಂಡಿದ್ದವರು. 

ಆ ಅನುಭವದ ಮೇಲೆ “ಲಿಲ್ಲಿ’ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ಹೇಳುವ ಅವರು, “ಮಕ್ಕಳನ್ನು ಪೋಷಕರು ಹೇಗೆ ಕಡೆಗಣಿಸುತ್ತಾರೆ, ಮೊಬೈಲ್‌ ಎಂಬುದು ಹೇಗೆಲ್ಲಾ ಮಾನವೀಯ ಸಂಬಂಧಗಳನ್ನು ದೂರ ಮಾಡಿದೆ.

ಮೊಬೈಲ್‌ ವ್ಯಾಮೋಹದಿಂದ ಮಾನವೀಯ ಮೌಲ್ಯಗಳು ಹೇಗೆ ಕುಸಿಯುತ್ತಿವೆ. ಮೊಬೈಲ್‌ನಿಂದ ಉಂಟಾಗುವ ಭಯಾನಕ ಕಾಯಿಲೆಯೊಂದು, ಆರೇಳು ವರ್ಷದ ಮಕ್ಕಳು ತಮ್ಮ ಹೆತ್ತವರನ್ನೇ ಕೊಲೆ ಮಾಡಬೇಕು ಎಂದು ನಿರ್ಧಾರಕ್ಕೆ ಬರುವಷ್ಟರ ಮಟ್ಟಿಗೆ ಮೊಬೈಲ್‌ ಕಾರಣವಾಗುತ್ತೆ ಎಂಬ ಸೂಕ್ಷ್ಮ ಅಂಶ ಚಿತ್ರದ ಹೈಲೈಟ್‌. 

ಚಿತ್ರವನ್ನು ನಾಗರಾಜ್‌ ಮತ್ತು ಎಸ್‌.ಸುಬ್ರಮಣಿ ನಿರ್ಮಾಣ ಮಾಡುತ್ತಿದ್ದಾರೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕರು.

ಈಗಾಗಲೇ ಸಿನಿಮಾ ಕಥೆಯನ್ನು ರಚಿತಾ ರಾಮ್ ಗೆ ತಿಳಿಸಿದ್ದು, ಅವರ ಕಡೆಯಿಂದ ಗ್ರೀನ್  ಸಿಗ್ನಲ್  ಸಿಗಬೇಕಿದೆ.  ಫೆಬ್ರವರಿಯಲ್ಲಿ  ಆಡಿಷನ್ ಆರಂಭವಾಗಲಿದ್ದು,  ಉಳಿದ ಕಲಾವಿದರ ಆಯ್ಕೆ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!