ಅಮಿತಾಬ್, ಜಯ ಬಚ್ಚನ್, ಶಿವಣ್ಣ, ನಾಗಾರ್ಜುನ, ಪ್ರಭು 
ಸಿನಿಮಾ ಸುದ್ದಿ

ಬಿಗ್ ಬಿ ಅಮಿತಾಬ್ ಜೊತೆಗೆ ಶಿವರಾಜ್ ಕುಮಾರ್ , ಪೋಟೋ ವೈರಲ್ 

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಂದಿಗೆ  ದಕ್ಷಿಣ ಭಾರತದ ಸ್ಟಾರ್ ಗಳಾದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ನಾಗಾರ್ಜನ ಹಾಗೂ ಪ್ರಭು ಅವರ ಪೋಟೋ  ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಬೆಂಗಳೂರು: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಂದಿಗೆ  ದಕ್ಷಿಣ ಭಾರತದ ಸ್ಟಾರ್ ಗಳಾದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ನಾಗಾರ್ಜನ ಹಾಗೂ ಪ್ರಭು ಅವರ ಪೋಟೋ  ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಭಾರತೀಯ ಚಿತ್ರರಂಗದ ಮೂವರು ಲೆಜೆಂಡ್ ಸ್ಟಾರ್ ನಟರ ಮಕ್ಕಳೊಂದಿಗೆ ಕೆಲಸ ಮಾಡಿದದ್ದು, ಜಯ ಬಚ್ಚನ್ ಹಾಗೂ ತಮಗೆ ಐತಿಹಾಸಿಕ ಕ್ಷಣವಾಗಿದೆ ಎಂದು ಅಮಿತಾಬ್ ಬಚ್ಚನ್ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

ಅಂದಹಾಗೆ ಇದು ಕಲ್ಯಾಣ್ ಜ್ಯುವೆಲ್ಲರಿ ಆಡ್ ಗಾಗಿ ಮಾಡಿರುವ ಪೋಟೋ ಶೂಟ್ ಆಗಿದ್ದು, ಹಿಂದಿಯಲ್ಲಿ ಅಮಿತಾಬ್ ಬಚ್ಚನ್, ತೆಲುಗಿನಲ್ಲಿ ಅಕ್ಕಿನೆನಿ ನಾಗೇಶ್ವರ್ ರಾವ್ ಪುತ್ರ ನಾಗಾರ್ಜುನ, ಕನ್ನಡದಲ್ಲಿ ಡಾ. ರಾಜ್ ಕುಮಾರ್ ಪುತ್ರ ಡಾ. ಶಿವರಾಜ್ ಕುಮಾರ್ ಹಾಗೂ ತಮಿಳಿನಲ್ಲಿ ಶಿವಾಜಿ ಗಣೇಶನ್ ಪುತ್ರ ಪ್ರಭು ಬ್ರಾಂಡ್ ರಾಯಬಾರಿಯಾಗಿದ್ದಾರೆ.

ಇದಕ್ಕೂ ಮುನ್ನ ಜಯ ಬಚ್ಚನ್, ಕತ್ರಿನಾ ಕೈಫ್, ದಕ್ಷಿಣ ಭಾರತದ ನಟಿಯರಾದ ಮಂಜು ವಾರಿಯರ್, ರೆಗಿನಾ ಕ್ಯಾಸ್ಸಾಂದ್ರಾ, ರೆಬಾ ಮೊನಿಕಾ ಜಾನ್, ಮತ್ತು ನಿಧಿ ಅಗರ್ ವಾಲ್ ಅವರೊಂದಿಗೆ ಅಮಿತಾಬ್ ಬಚ್ಚನ್ ಪೋಟೋ ಶೂಟ್ ನಡೆದಿತ್ತು. ಇದು ಸಹ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿ ಸರ್ಕಾರದ ವಿರುದ್ಧ ಮಹಾಸಮರಕ್ಕೆ INDIA ಮೈತ್ರಿಕೂಟ ಸಜ್ಜು: ಭಿನ್ನಾಭಿಪ್ರಾಯಗಳ ನಡುವೆಯೂ ಬಲ ತುಂಬುವ ಯತ್ನ, ‘ಒಗ್ಗಟ್ಟೇ ನಮ್ಮ ಶಕ್ತಿ’ ಎಂದ ಮಲ್ಲಿಕಾರ್ಜುನ ಖರ್ಗೆ..!

ಬಿಜೆಪಿ, ದೇವೇಗೌಡರಿಗೆ ರಾಜ್ಯಸಭಾ ಸ್ಥಾನ ನಿರಾಕರಿಸಿದ ರೀತಿ ಕನ್ನಡಿಗರಿಗೆ ಮಾಡಿದ ಅವಮಾನ: ಕಾಂಗ್ರೆಸ್

ಸಿನಿಮಾ ಶೈಲಿ ಕಾರ್ಯಾಚರಣೆ: ಸಾಮಾನ್ಯ ಮಹಿಳೆಯಂತೆ ಪಬ್‌ಗೆ ತೆರಳಿ ಸೆಕ್ಸ್‌ ದಂಧೆ ಬಯಲಿಗೆಳೆದ IPS ಅಧಿಕಾರಿ!

INDIA Bloc Meeting Underway: ಬಂಗಾಳದಲ್ಲಿ ಬಿಜೆಪಿ ಗೆಲುವಿಗೆ ಚುನಾವಣಾ ಆಯೋಗ ನೆರವು- ಮಮತಾ ಬ್ಯಾನರ್ಜಿ ಆರೋಪ!

ಮುಂಬೈ: ಪೀಕ್ ಟ್ರಾಫಿಕ್ ಸಮಯದಲ್ಲಿ ವಾಹನಗಳಿಗೆ ಡಿಕ್ಕಿ ಹೊಡೆದ BEST Bus: ಓರ್ವ ಸಾವು!| video

SCROLL FOR NEXT