ಅದಿತಿ ಪ್ರಭುದೇವ 
ಸಿನಿಮಾ ಸುದ್ದಿ

ಓಲ್ಡ್ ಮಾಂಕ್ ಗೆ ಅದಿತಿ ಪ್ರಭುದೇವ ನಾಯಕಿ!

ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಅವಕಾಶಗಳನ್ನು ಗಿಟ್ಟಿಸಿಕೊಂಡು ಮುನ್ನುಗ್ಗುತ್ತಿರುವ ನಟಿ ಎಂದರೆ, ಅದು ಅದಿತಿ ಪ್ರಭುದೇವ. ಕಳೆದ ವರ್ಷ ಅವರು ಸಾಲು ಸಾಳು ಸಿನಿಮಾಗಳಲ್ಲಿ ನಟಿಸಿದ್ದರು.

ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಅವಕಾಶಗಳನ್ನು ಗಿಟ್ಟಿಸಿಕೊಂಡು ಮುನ್ನುಗ್ಗುತ್ತಿರುವ ನಟಿ ಎಂದರೆ, ಅದು ಅದಿತಿ ಪ್ರಭುದೇವ. ಕಳೆದ ವರ್ಷ ಅವರು ಸಾಲು ಸಾಳು ಸಿನಿಮಾಗಳಲ್ಲಿ ನಟಿಸಿದ್ದರು.

ಈ ವರ್ಷವೂ ಸಾಕಷ್ಟು ಸಿನಿಮಾಗಳನ್ನು ತಮ್ಮ ಖಾತೆಯಲ್ಲಿ ಇಟ್ಟುಕೊಂಡಿದ್ದಾರೆ. ಈ ಮಧ್ಯೆ ನಟ/ನಿರ್ದೇಶಕ ಶ್ರೀನಿ ಅವರ ಮುಂದಿನ ಸಿನಿಮಾ 'ಓಲ್ಡ್‌ ಮಾಂಕ್‌'ನಲ್ಲಿ ನಾಯಕಿಯಾಗಿ ಅವರು ಆಯ್ಕೆಯಾಗಿದ್ಧಾರೆ. 

ಶ್ರೀನಿವಾಸ ಕಲ್ಯಾಣ’, ‘ಬೀರ್​ಬಲ್’ ಸಿನಿಮಾಗಳಿಗೆ ಆಕ್ಷನ್-ಕಟ್ ಹೇಳಿ ನಾಯಕನಾಗಿಯೂ ಅಭಿನಯಿಸಿದ್ದ ಶ್ರೀನಿವಾಸ್ ಅವರ ನಿರ್ದೇಶನದ ಹೊಸ ಸಿನಿಮಾ

‘ಓಲ್ಡ್​ಮಾಂಕ್’ಗೆ ನಟಿ ಅದಿತಿ ಪ್ರಭುದೇವ ನಾಯಕಿ. ಈ ಸಿನಿಮಾದಲ್ಲೂ ಶ್ರೀನಿ ನಿರ್ದೇಶನ ಮಾಡುವ ಜತೆಗೆ ನಾಯಕರಾಗಿಯೂ ಅಭಿನಯಿಸಲಿದ್ದಾರೆ. ಇತ್ತೀಚೆಗಷ್ಟೇ ‘ಓಲ್ಡ್​ಮಾಂಕ್’ ಚಿತ್ರದ ಬಗ್ಗೆ ಘೋಷಣೆ ಮಾಡಿದ್ದ ಶ್ರೀನಿ, ಕೆಲವು ದಿನಗಳಿಂದ ರಾಜ್ಯದ ಕೆಲವೆಡೆ ಆಡಿಷನ್ ಮಾಡಿ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಸಿದ್ದರು. ಈ ಮಧ್ಯೆ ನಾಯಕಿಯ ಪಾತ್ರಕ್ಕೆ ಒಂದಷ್ಟು ಆಯ್ಕೆಗಳನ್ನು ಗಮನಿಸಿದ್ದ ಅವರು ಅಂತಿಮವಾಗಿ ಅದಿತಿ ಪ್ರಭುದೇವ ಅವರನ್ನು ತಮ್ಮ ಜೋಡಿ ಆಗಿಸಿಕೊಳ್ಳಲು ತೀರ್ವನಿಸಿದ್ದಾರೆ.

‘ಓಲ್ಡ್​ಮಾಂಕ್’ ಎಂಬ ಶೀರ್ಷಿಕೆ ಹಿನ್ನೆಲೆಯಲ್ಲಿ ಇಲ್ಲಿ ಅದಿತಿ ತೀರಾ ಫಾರ್ವರ್ಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದೆಲ್ಲ ಭಾವಿಸುವಂತಿಲ್ಲ. ಅಷ್ಟಕ್ಕೂ ಟೈಟಲ್​ಗೂ ಅವರ ಪಾತ್ರಕ್ಕೂ ತದ್ವಿರುದ್ಧ. ‘ಇಡೀ ಸಿನಿಮಾ ಕಾಮಿಡಿಯದ್ದಾದರೂ ನಾನಿಲ್ಲಿ ಪಕ್ಕಾ ಸಂಪ್ರದಾಯಸ್ಥ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನಾಯಕಿಯದ್ದು ಇಲ್ಲಿ ಸಂಪೂರ್ಣ ಸಂಸ್ಕೃತಿಭರಿತ ಮನಸ್ಥಿತಿ’ ಎನ್ನುತ್ತ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು ನಟಿ ಅದಿತಿ.

ನಾನು ಮೊದಲು ಕಥೆ ಕೇಳುತ್ತೇನೆ, ಆಮೇಲೆ ನನ್ನ ಪಾತ್ರದ ಬಗ್ಗೆ ಕೇಳುತ್ತೇನೆ. ಎರಡೂ ಓಕೆ ಅನಿಸಿದಾಗ ಒಪ್ಪಿಕೊಳ್ಳುತ್ತೇನೆ’ ಎನ್ನುವ ಅದಿತಿಗೆ, ಈ ಚಿತ್ರದ ಟೈಟಲ್ ಕೇಳಿ ಅಚ್ಚರಿ ಆಗಿತ್ತಂತೆ. ‘ಓಲ್ಡ್​ಮಾಂಕ್ ಎನ್ನುವುದು ಒಂದು ಡ್ರಿಂಕ್ಸ್ ಹೆಸರು ಅಂತ ನನಗೆ ಈ ಚಿತ್ರದ ಟೈಟಲ್ ಬಗ್ಗೆ ವಿವರಣೆ ಕೇಳಿದಾಗಲೇ ಗೊತ್ತಾಗಿದ್ದು. ಆದರೆ ಈ ಚಿತ್ರದಲ್ಲಿ 18 ವೃದ್ಧ ಜೋಡಿಗಳೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆ ನಿಟ್ಟಿನಲ್ಲೂ ಓಲ್ಡ್​ಮಾಂಕ್ ಟೈಟಲ್ ಸೂಕ್ತವಾಗುತ್ತದೆ’ ಎಂಬ ಅನಿಸಿಕೆಯನ್ನೂ ಅವರು ವ್ಯಕ್ತಪಡಿಸುತ್ತಾರೆ.

ಅಂದಹಾಗೆ ಅದಿತಿ ಪ್ರಭುದೇವ ಅಭಿನಯದ ‘ತೋತಾಪುರಿ’ ಸಿನಿಮಾದ ಶೂಟಿಂಗ್ ಒಂದಷ್ಟು ಬಾಕಿ ಇದೆ. ಸದ್ಯ ‘ಚಾಂಪಿಯನ್’, ‘ಒಂಬತ್ತನೇ ದಿಕ್ಕು’ ಚಿತ್ರಗಳ ಶೂಟಿಂಗ್ ಮುಗಿಸಿರುವ ಅವರು, ಶೀಘ್ರದಲ್ಲೇ ‘ಓಲ್ಡ್​ಮಾಂಕ್’ ಕೈಗೆತ್ತಿಕೊಳ್ಳಲಿದ್ದಾರೆ. ಅರ್ಥಾತ್ ಈ ಚಿತ್ರದ ಶೂಟಿಂಗ್​ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT