ನಿಖಿಲ್ ಮತ್ತು ರೇವತಿ 
ಸಿನಿಮಾ ಸುದ್ದಿ

ಫೆಬ್ರವರಿ 10 ಕ್ಕೆ ನಿಖಿಲ್ ಕುಮಾರ್- ರೇವತಿ ನಿಶ್ಚಿತಾರ್ಥ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ, ಜೆಡಿಎಸ್ ಯುವ ಘಟಕದ ಅಧ್ಯಕ್ಷ, ನಟ ಸ್ಯಾಂಡಲ್‌ವುಡ್ ಜಾಗ್ವಾರ್ ನಿಖಿಲ್ ಕುಮಾರಸ್ವಾಮಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ, ಜೆಡಿಎಸ್ ಯುವ ಘಟಕದ ಅಧ್ಯಕ್ಷ, ನಟ ಸ್ಯಾಂಡಲ್‌ವುಡ್ ಜಾಗ್ವಾರ್ ನಿಖಿಲ್ ಕುಮಾರಸ್ವಾಮಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಶಾಸಕ ಲೇಔಟ್​ ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳು ರೇವತಿ ಅವರೊಂದಿಗೆ ಫೆ.10ಕ್ಕೆ ನಿಶ್ಚಿತಾರ್ಥ ನಡೆಯಲಿದ್ದು, ಏಪ್ರಿಲ್‌ನಲ್ಲಿ ವಿವಾಹ ನಡೆಯುವ ಸಾಧ್ಯತೆಯಿದೆ.

ಕೆಲವು ದಿನಗಳ ಹಿಂದೆ ನಿಖಿಲ್ ಕುಟುಂಬ ಜ್ಞಾನಭಾರತಿಯಲ್ಲಿರುವ ಹುಡುಗಿ ರೇವತಿ ಅವರ ಮನೆಗೆ ಹೋಗಿ ಹೆಣ್ಣು ನೋಡುವ ಶಾಸ್ತ್ರ ಮಾಡಿದ್ದರು. ಗುರುವಾರ ಕೃಷ್ಣಪ್ಪ ಕುಟುಂಬಸ್ಥರು ನಿಖಿಲ್ ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ವಿವಾಹದ ಮಾತುಕತೆ ನಡೆಸಿದರು.

ಸಂಪ್ರದಾಯಗಳ ಪ್ರಕಾರ, ವಿವಾಹ ಕಾರ್ಯಕ್ರಮಗಳು ನಡೆಯಲಿವೆ. ಹುಡುಗಿ ಮನೆಯವರು ಇಂದು ನಮ್ಮಗೆ ಮನೆಗೆ ಬಂದಿದ್ದರು. ಸದ್ಯದಲ್ಲೇ ನಿಶ್ಚಿತಾರ್ಥ ಮತ್ತು ಮದುವೆ ದಿನಾಂಕ ಹೇಳುತ್ತೇವೆ. ಬಹುಶಃ ಫೆ.10ಕ್ಕೆ ನಿಶ್ವಿತಾರ್ಯ ನಡೆಯಲಿದೆ. ಏಪ್ರಿಲ್‌ನಲ್ಲಿ ಮದುವೆ ನಿಗದಿಯಾಗಲಿದೆ.

ನಾವು ಮೊದಲಿನಿಂದಲೂ ದೇವರನ್ನು ಹಾಗೂ ಶಾಸ್ತ್ರ ಸಂಪ್ರದಾಯದ ಮೇಲೆ ನಂಬಿಕೆ ಇಟ್ಟುಕೊಂಡು ಬಂದವರು. ಪ್ರತಿಯೊಂದನ್ನು ಶಾಸ್ತ್ರೋಕ್ತವಾಗಿ ಮಾಡಬೇಕು ಎಂಬುದು ನಮ್ಮ ಅಭಿಲಾಷೆ. ಒಳ್ಳೆಯ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ನಿಶ್ಚಯಮಾಡಲಿದ್ದೇವೆ. ಶೀಘ್ರದಲ್ಲೇ ಸಂಪೂರ್ಣ ಮಾಹಿತಿ ನೀಡಲಿದ್ದೇವೆ' ಎಂದು ಕುಮಾರಸ್ವಾಮಿ ಹೇಳಿದರು

ಈ ಹಿಂದೆಯೇ ನಿಖಿಲ್​ ಅವರಿಗೆ ನಿಶ್ಚಿತಾರ್ಥವಾಗಿ ಮುರಿದು ಬಿದ್ದಿತ್ತು. ಅದು ನಿರ್ಮಾಪಕ ಕೆ.ಸಿ.ಎನ್​. ಮೋಹನ್​ ಅವರ ಮಗಳೊಂದಿಗೆ ಆಗಿದ್ದ ನಿಶ್ಚಿತಾರ್ಥ ಕಾರಣಾಂತರಗಳಿಂದ ಮುರಿದುಬಿತ್ತು. ನಂತರ ಆಂಧ್ರದ ಉದ್ಯಮಿಯೊಬ್ಬರ ಮಗಳೊಂದಿಗೆ ನಿಖಿಲ್​ ವಿವಾಹ ನಡೆಯಲಿದೆ ಎನ್ನೋ ಸುದ್ದಿ ಹಬ್ಬಿತ್ತು. ಅಲ್ಲದೆ ನಟಿ ರಚಿತಾ ರಾಮ್​ ಹಾಗೂ ನಿಖಿಲ್​ ಮದುವೆ ಸುದ್ದಿ ಸಹ ಗಾಸಿಪ್ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ