ಎನ್‌ಎಲ್‌ಎನ್ ಮೂರ್ತಿ 
ಸಿನಿಮಾ ಸುದ್ದಿ

'ಗ್ರಾಮಾಯಣ' ಚಿತ್ರ ನಿರ್ಮಾಪಕ ಎನ್‌ಎಲ್‌ಎನ್ ಮೂರ್ತಿ ನಿಧನ

ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಅಭಿನಯದ "ಗ್ರಾಮಾಯಣ" ಚಿತ್ರದ ನಿರ್ಮಾಪಕ ಎನ್.ಎಲ್.ಎನ್. ಮೂರ್ತಿ(39 ) ನಿಧನರಾಗಿದ್ದಾರೆ. 

ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಅಭಿನಯದ "ಗ್ರಾಮಾಯಣ" ಚಿತ್ರದ ನಿರ್ಮಾಪಕ ಎನ್.ಎಲ್.ಎನ್. ಮೂರ್ತಿ(39 ) ನಿಧನರಾಗಿದ್ದಾರೆ. 

ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಮೂರ್ತಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಇನ್ನು ಮೃತರ ತಾಯಿ ಸಹ ಗುರುವಾರವಷ್ಟೇ ನಿಧನರಾಗಿದ್ದು ಮೃತ ಮೂರ್ತಿ ಪತ್ನಿ, ಪುತ್ರ ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ.

ವಿನಯ್ ರಾಜ್ ಕುಮಾರ್ ಅವರ "ಗ್ರಾಮಾಯಣ" ಚಿತ್ರ ನಿರ್ಮಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ್ದ ಮೂರ್ತಿ ತಾವು ಮೊದಲ ಚಿತ್ರದ ಬಿಡುಗಡೆಗೂ ಮುನ್ನ ಸಾವಿನ ಮನೆಯ ಕದ ತಟ್ಟಿದ್ದಾರೆ. 

ಮೂರ್ತಿಯವರ ಕೊರೋನಾ ವರದಿ ಬಂದ ನಂತರ ಅವರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತದೆ. ನಂತರ ಬನಶಂಕರಿಯ ಚಿತಾಗಾರದಲ್ಲಿ ಮೃತರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಹೇಳಲಾಗಿದೆ.

ನಿರ್ಮಾಪಕ ಮೂರ್ತಿ ನಿಧನಕ್ಕೆ ನಟ ವಿನಯ್ ರಾಜ್ ಕುಮಾರ್ ಸಂತಾಪ ಸೂಚಿಸಿದ್ದಾರೆ. "ಒಳ್ಳೇ ಚಿತ್ರ ನಿರ್ಮಾಣದ ಕನಸು ಕಂಡಿದ್ದ ಮೂರ್ತಿಯವರ ಅಕಾಲಿಕ ಸಾವು ದುಃಖತಂದಿದೆ" ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT