ಸಾರಾ ವೆಂಕಟೇಶ್ 
ಸಿನಿಮಾ ಸುದ್ದಿ

ಕನ್ನಡಿ ನನ್ನ ಅತ್ಯುತ್ತಮ ಶಿಕ್ಷಕ: ಸಾರಾ ವೆಂಕಟೇಶ್

ಸೇಂಟ್ ಮಾರ್ಕ್ಸ್ ರೋಡ್ ಚಿತ್ರದ ಮೂಲಕ ಕನ್ನಡ ಪ್ರತಿಭೆ ಸಾರಾ ವೆಂಕಟೇಶ್ ಅವರು ಬಣ್ಣದ ಲೋಕಕ್ಕೆ ಪರಿಚಯಗೊಳ್ಳುತ್ತಿದ್ದು, ಇದು ಅವರ ಮೊದಲ ಸಿನಿಮಾವಾಗಿದೆ. 

ಸೇಂಟ್ ಮಾರ್ಕ್ಸ್ ರೋಡ್ ಚಿತ್ರದ ಮೂಲಕ ಕನ್ನಡ ಪ್ರತಿಭೆ ಸಾರಾ ವೆಂಕಟೇಶ್ ಅವರು ಬಣ್ಣದ ಲೋಕಕ್ಕೆ ಪರಿಚಯಗೊಳ್ಳುತ್ತಿದ್ದು, ಇದು ಅವರ ಮೊದಲ ಸಿನಿಮಾವಾಗಿದೆ. 

ಚೊಚ್ಚಲ ಪ್ರಯತ್ನದಲ್ಲಿಯೇ ಏಕಕಾಲಕ್ಕೆ ಕನ್ನಡ ಮತ್ತು ತಮಿಳು ಸಿನಿಪ್ರಿಯರನ್ನು ರಂಚಿಸುವ ಅವಕಾಶ ಸಾರಾ ವೆಂಕಟೇಶ್ ಅವರಿಗೆ ಸಿಕ್ಕಿದೆ. ಚಿತ್ರದಲ್ಲಿ ಸಾರಾ ವೆಂಕಟೇಶ್ ಅವರನ್ನು ಕಥೆಗೆ ಟ್ವಿಸ್ಟ್ ನೀಡುವ ಪಾತ್ರವಾಗಿದೆ ಎಂದು ತಿಳಿದುಬಂದಿದೆ. 

ನಟನೆ ಬಗ್ಗೆ ನನ್ನಲ್ಲಿರುವ ಉತ್ಸಾಹ ಬಣ್ಣದ ಲೋಕಕ್ಕೆ ನಾನು ಕಾಲಿಡುವಂತೆ ಮಾಡಿತು. ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಬೆಳ್ಳಿ ಪರದೆ ಮೇಲೆ ನನ್ನನ್ನು ನೋಡಿಕೊಳ್ಳಲು ಕಾತರಳಾಗಿದ್ದೇನೆಂದು ಸಾರಾ ವೆಂಕಟೇಶ್ ಅವರು ಹೇಳಿದ್ದಾರೆ. 

ಗ್ಲಾಮರಸ್, ಬೋಲ್ಡ್ ಮತ್ತು ಪರ್ಫಾರ್ಮೆನ್ಸ್ ಓರಿಯೆಂಟೆಡ್ ಪಾತ್ರಗಳಿಗೆ ನಡುವೆ ಒಂದು ಸಣ್ಣ ಗೆರೆಯಿರುತ್ತದೆ. ನನ್ನ ಆಸಕ್ತಿ ಹೆಚ್ಚಾಗಿ ಎರಡನೆಯದಾಗಿರುತ್ತದೆ. ಸಿನಿಮಾಗಾಗಿ ನನ್ನ ಬಳಿ ಬರುವ ಚಿತ್ರ ನಿರ್ಮಾಣಕಾರರಿಗೆ ಇದನ್ನು ನಾನು ಸ್ಪಷ್ಟಪಡಿಸುತ್ತೇನೆ. ಕನ್ನಡಿ ನನ್ನ ಅತ್ಯುತ್ತಮ ಶಿಕ್ಷಕವಾಗಿದೆ ಎಂದು ತಿಳಿಸಿದ್ದಾರೆ. 

ಸೇಂಟ್ ಮಾರ್ಕ್ಸ್ ರೋಡ್ ಹಾರಲ್, ಥ್ರಿಲ್ಲರ್ ಎಳೆಯನ್ನು ಹೊಂದಿರುವ ಸಿನಿಮಾವಾಗಿದ್ದು, ಬೆಂಗಳೂರಿನ ಸೇಂಟ್ ಮಾರ್ಕ್ಸ್ ರೋಡ್ ಮನೆಯೊಂದರ ಸುತ್ತ ಕಥೆ ಸಾಗಲಿದೆ. ಸೇಂಟ್ ಮಾರ್ಕ್ಸ್ ರೋಡ್ ಸಿನಿಮಾವನ್ನು ಮಗ್ವೇನ್ ನಿರ್ದೇಶನ ಮಾಡಲಿದ್ದು, ಇದು ಅವರ ಮೊದಲ ಸಿನಿಮಾವಾಗಿದೆ. ಸಿನಿಮಾದಲ್ಲಿ 6 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ನೈಜಘಟನೆಯ ಆಧಾರಿತ ಸಿನಿವಾಗಿದ್ದು, ಚಿತ್ರತಂಡ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನವೊಂದನ್ನು ಮಾಡಲು ಹೊರಟಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!