ಸಿನಿಮಾ ಸುದ್ದಿ

ರಕ್ಷಿತ್ ಸಿನಿಪಯಣಕ್ಕೆ 10 ವರ್ಷದ ಸಂಭ್ರಮ

ಕನ್ನಡದ ಮಹತ್ವದ ನಾಯಕ ನಟರಲ್ಲಿ ಒಬ್ಬರಾದ ಕರಾವಳಿ ಮೂಲದ ಪ್ರತಿಭೆ ರಕ್ಷಿತ್ ಶೆಟ್ಟಿ ಸ್ಯಾಂಡಲ್ ವುಡ್ ಪ್ರವೇಶಿಸಿ ಇಂದಿಗೆ ಹತ್ತು ವರ್ಷ ಪೂರೈಸಿದೆ.

ಕನ್ನಡದ ಮಹತ್ವದ ನಾಯಕ ನಟರಲ್ಲಿ ಒಬ್ಬರಾದ ಕರಾವಳಿ ಮೂಲದ ಪ್ರತಿಭೆ ರಕ್ಷಿತ್ ಶೆಟ್ಟಿ ಸ್ಯಾಂಡಲ್ ವುಡ್ ಪ್ರವೇಶಿಸಿ ಇಂದಿಗೆ ಹತ್ತು ವರ್ಷ ಪೂರೈಸಿದೆ.

ಕನ್ನಡ ಚಿತ್ರರಂಗದಲ್ಲಿ ಹತ್ತು ವರ್ಷ ಪೂರೈಸಿದ ಬಗ್ಗೆ ಖುಷಿ ವ್ಯಕ್ತಪಡಿಸಿರುವ ನಟ ರಕ್ಷಿತ್ ಶೆಟ್ಟಿ ಟ್ವಿಟ್ಟರ್ ನಲ್ಲಿ ತಮ್ಮ ವೃತ್ತಿಬದುಕಿನ ಪ್ರಾರಂಭದ ದಿನಗಳನ್ನು ಸ್ಮರಿಸಿದ್ದಾರೆ.

"ನಮ್ ಏರಿಯಾಲ್ ಒಂದಿನ- ಬಿಡುಗಡೆಯಾಗಿ ಇಂದಿಗೆ ಹತ್ತು ವರ್ಷ. ನನ್ನ ವೃತ್ತಿಜೀವನಕ್ಕೆ ಅಡಿಪಾಯವಾದ ಚಿತ್ರವದು. ನಿನ್ನೆ-ಮೊನ್ನೆ ತಾನೇ ತೆರೆ ಕಂಡಂತಿದೆ. ಆ ಚಿತ್ರ ಬಿಡುಗಡೆ ಮಾಡಲು ಗಾಂಧಿನಗರದಲ್ಲಿ ಓಡಾದಿದ್ದು ಇಂದಿಗೂ ನೆನಪಿದೆ. ಇಂದಿನ ಈ ಯಶಸ್ಸಿಗೆ ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಕಾರಣ" ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

"ಈ ಸಮಯದಲ್ಲಿ ನನ್ನೊಂದಿಗೆ ನನ್ನೊಂದು ಅದ್ಭುತ ತಂಡವಿದೆ.  ನಾವು ಉತ್ತಮವಾಗಿ ಪ್ರಾರಂಭ ಕಾಣಬೇಕು,  ಹೊಸ ಅನುಭವಕ್ಕಾಗಿ ಎದುರು ನೋಡುತ್ತಿದ್ದೇವೆ.

"ಒಂದು ದಶಕದ ನಂತರ, ನಾನು ಮತ್ತೆಹೊಸ ಪ್ರಾರಂಭಕ್ಕೆ ಕಾಯುತ್ತಿದ್ದೇನೆ ಎಂದೆನಿಸುತ್ತಿದೆ, ಸ್ನೇಹಿತರನ್ನು ಒಟ್ಟುಗೂಡಿಸಿ, ಚರ್ಚೆ, ನೈಟ್ ಔಟ್, ಎಷ್ಟು ಚೆನ್ನಾಗಿತ್ತು. ಏನು ಅದ್ಭುತ ಮೋಜು. ಆ ಶಾರ್ಟ್ ಫಿಲ್ಮ್ಸ್ ನ ದಿನಗಳು,  ಅತ್ಯುತ್ತಮವಾದವು. ಅನೇಕ ಉತ್ತಮ ಸ್ನೇಹಿತರು ಸಿಕ್ಕರು.  ನಮ್ಮ ನಡುವಿನ ಸಾಮಾನ್ಯ ವಿಷಯವೆಂದರೆ ಸಿನಿಮಾ ಮಾತ್ರವಾಗಿತ್ತು." ಎಂದು ರಕ್ಷಿತ್ ಹೇಳಿದ್ದಾರೆ. 

ಸಧ್ಯ ರಕ್ಷಿತ್ ಶೆಟ್ಟಿ ಅವರ ೭೭೭ ಚಾರ್ಲಿ ಹಾಗೂ ಸಪ್ತಸಾಗರದಾಚೆ ಎಲ್ಲೋ ಎಂಬ ಚಿತ್ರಗಳ ಕೆಲಸ ನಡೆಯುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT