ಸಚಿನ್ ಚೆಲುವರಾಯಸ್ವಾಮಿ 
ಸಿನಿಮಾ ಸುದ್ದಿ

ರಾಜಕೀಯ ಹಿನ್ನೆಲೆಯಿಂದ ಬಂದ ನಟನಿಗೆ ವಿಭಿನ್ನ ಸವಾಲುಗಳಿರುತ್ತವೆ: ಸಚಿನ್ ಚೆಲುವರಾಯಸ್ವಾಮಿ

ಮಹೇಶ್ ಸುಖಧರೆ ಅವರ "ಹ್ಯಾಪಿ ಬರ್ತಡೇ" ಚಿತ್ರದ ಮೂಲಕ ಸ್ಯಾಂಡಲ್ ವುಡ್ ಎಂಟ್ರಿ ಕೊಟ್ಟಿದ್ದ ಸಚಿನ್ ಚೆಲುವರಾಯಸ್ವಾಮಿ ನಾಲ್ಕು ವರ್ಷಗಳ ನಂತರ ಮತ್ತೊಮ್ಮೆ ಹೊಸ ಅವತಾರದಲ್ಲಿ ತೆರೆಗೆ ಬರಲು ಸಿದ್ದವಾಗಿದ್ದಾರೆ.  

ಮಹೇಶ್ ಸುಖಧರೆ ಅವರ "ಹ್ಯಾಪಿ ಬರ್ತಡೇ" ಚಿತ್ರದ ಮೂಲಕ ಸ್ಯಾಂಡಲ್ ವುಡ್ ಎಂಟ್ರಿ ಕೊಟ್ಟಿದ್ದ ಸಚಿನ್ ಚೆಲುವರಾಯಸ್ವಾಮಿ ನಾಲ್ಕು ವರ್ಷಗಳ ನಂತರ ಮತ್ತೊಮ್ಮೆ ಹೊಸ ಅವತಾರದಲ್ಲಿ ತೆರೆಗೆ ಬರಲು ಸಿದ್ದವಾಗಿದ್ದಾರೆ. 

"ಬೆಂಗಳೂರು ಬಾಯ್ಸ್ " ಎಂಬ ಮಲ್ಟಿಸ್ಟಾರ್ ಚಿತ್ರದಲ್ಲಿ ಖಾಣಿಸಿಕೊಳ್ಳಲಿರುವ ಸಚಿನ್ ಮತ್ತೊಂದು ಪ್ರಾಜೆಕ್ಟ್‌ಗಾಗಿ ಮಾತುಕತೆ ನಡೆಸುತ್ತಿದ್ದು, ಕಥೆಯನ್ನು ಅಂತಿಮಗೊಳಿಸಿದ ನಂತರ ಅಧಿಕೃತ ಘೋಷಣೆ ಮಾಡಲಾಗುತ್ತದೆ.ತಮ್ಮ ವೃತ್ತಿಬದುಕಿನ ಬಗ್ಗೆ ಗಂಭೀರ ಆಲೋಚನೆ ಹೊಂದಿದ್ದರೂ ವಿವಿಧ ಕಾರಣಗಳಿಂದಾಗಿ ಸುದೀರ್ಘ ವಿರಾಮ ಕಾಣಿಸಿದೆ."ನಾನು ಒಂದೆರಡು ಯೋಜನೆಗಳನ್ನು ಕೈಯಲ್ಲಿ ಹೊಂದಿದ್ದೆ, . ಅವೆಲ್ಲವೂ ಬಹುತೇಕ ಫ್ಲೋರ್ ಗೆ ಹೋಗುವ ಕಡೇ ಗಳಿಗೆಯಲ್ಲಿ ಕೈಬಿಡಬೇಕಾಗಿತ್ತು. ಈ ಮಧ್ಯೆ, ನನ್ನನ್ನು ಕೆಲವು ಸ್ಕ್ರಿಪ್ಟ್‌ಗಳೊಂದಿ ಹಲವರು ಸಂಪರ್ಕಿಸಿದ್ದಾರೆ. ಆದರೆ ನನಗೆ ಅವು ಯಾವುದು ಸಹ ಇಷ್ಟವಾಗಿಲ್ಲ. ನನಗೆ ಸೂಕ್ತವಾದ ಯಾವುದನ್ನಾದರೂ ಕಥೆ ಸಿಕ್ಕುವವರೆಗೆ ನಾನು ಕಾಯಲು ನಿರ್ಧರಿಸಿದ್ದೆ.ಇದೀಗ ಅದೃಷ್ಟವಶಾತ್ ಅಂತಹಾ ಒಂದೆರಡು ಕಥೆ ಸಿಗುತ್ತಿದೆ."

ಲಂಡನಲ್ಲಿ ಲಂಬೋದರ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಬಂದಿದ್ದ ರಾಜ್ ಸೂರ್ಯ  ಬೆಂಗಳೂರು ಬಾಯ್ಸ್ ನ ನಿರ್ದೇಶಕರಾಗಿದ್ದಾರೆ.  ಸಚಿನ್ ಜೊತೆಗೆ ರೋಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಚಂದನ್ ಆಚಾರ್, ಶ್ರೀ ಮಹಾದೇವ ಮತ್ತು ವೈನಿಧಿ ಜಗದೀಶ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ."ಈ ಯೋಜನೆಗಾಗಿ ನನ್ನನ್ನು ಆರಿಸಿದ ನಿರ್ಮಾಪಕ ರಾಕ್ಲೈನ್ ​​ವೆಂಕಟೇಶ್ ಅವರಿಗೆ ಧನ್ಯವಾದಗಳು, ನನಗೆ ಈ ಅವಕಾಶ ಸಿಕ್ಕಿದ್ದು ಖುಷಿಯಾಗಿದೆ. "

"ಉತ್ತಮ ಕಥಾನಕ ಹೊಂದಿರುವ ಚಿತ್ರಕ್ಕೆ ನಾನು ಒಪ್ಪಿಗೆ ಸೂಚಿಸುತ್ತೇನೆ. ಚೊಚ್ಚಲ ಚಿತ್ರದ ನಂತರ ನಾನು ಕಲಿತ ಪಾಠವಿದಾಗಿದೆ. ಮಲ್ಟಿ ಸ್ಟಾರ್‌ ಚಿತ್ರದಲ್ಲಿ ಕೆಲಸ ಮಾಡುವ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿಯಲು ನಾನು ಉತ್ಸುಕನಾಗಿದ್ದೇನೆ.ಬೆಂಗಳೂರು ಬಾಯ್ಸ್ ಒಂದು  ಹಾಸ್ಯ ಚಿತ್ರಎಂದು ಹೇಳಲಾಗುತ್ತದೆ, ಅದರ ವಿವರಗಳನ್ನು ಮೊದಲ ಮಾಧ್ಯಮ ಸಂವಾದದ ಸಮಯದಲ್ಲಿ ನಿರ್ದೇಶಕರು ಬಹಿರಂಗಪಡಿಸಲು ಯೋಜಿಸಿದ್ದಾರೆ ”ಎಂದು ಸಚಿನ್ ಹೇಳುತ್ತಾರೆ, ಶೂಟಿಂಗ್ ಪ್ರಾರಂಭಿಸುವ ಸಲುವಾಗಿ ಲಾಕ್‌ಡೌನ್ ಕೊನೆಗೊಳ್ಳುವವರೆಗೆ  ಕಾಯಬೇಕಿದೆ.

ರಾಜಕಾರಣಿ ಚೆಲುವರಾಯಸ್ವಾಮಿಯವರ ಪುತ್ರ ಸಚಿನ್ “ಪ್ರತಿಯೊಬ್ಬರೂ ತಮ್ದೇ ಆದ ಹೋರಾಟದ ಹಿನ್ನೆಲೆ ಹೊಂದಿದ್ದಾರೆ. ಅಂತಹ ಹಿನ್ನೆಲೆ ಇಲ್ಲದ ಯಾರೂ ಮುಂದುವರಿಯುವುದಿಲ್ಲ. ನನ್ನ ಹೋರಾಟ ವಿಭಿನ್ನವಾಗಿದೆ. ನಾವು ಸರಿಯಾದ ಜನರನ್ನು ತಿಳಿದಿದ್ದರೂ ಸಹ, ಸರಿಯಾದ ಯೋಜನೆಯನ್ನು ಪಡೆಯುವುದು ಮತ್ತು ನಾವು ಪಾತ್ರಕ್ಕೆ ಹೊಂದಿಕೊಳ್ಳುವುದು ಮುಖ್ಯ. ಎಕ್ಸ್ ವೈ ಝೆಡ್ ಯೋಜನೆಗಳು ಎಂದಿಗೂ ಕೆಲಸ ಮಾಡುವುದಿಲ್ಲ. ನೀವು ನಟನಾ ವೃತ್ತಿಯನ್ನು ಮುಂದುವರಿಸಲು ಉತ್ಸುಕರಾಗಿದ್ದರೆ, ಅದು ಉತ್ತಮ ಚಿತ್ರಗಳೊಂದಿಗೆ ಇರಬೇಕು. ಉಪಯುಕ್ತವಲ್ಲದ ಯಾವುದನ್ನಾದರೂ ಮಾಡುವುದು ನಮ್ಮಲ್ಲಿನ ಸಾಮರ್ಥ್ಯವನ್ನು ವ್ಯರ್ಥ ಮಾಡಿದಂತೆ. ಸರಿಯಾದ ಯೋಜನೆಯೊಂದಿಗೆ ಹಿಂತಿರುಗಲು ನಾನು ಸಾಕಷ್ಟು ಸಮಯ ತೆಗೆದುಕೊಂಡದ್ದು ಸಹ ಇದುವೇ ಕಾರಣವಾಗಿದೆ.

"ಕೆಲವು ಚಲನಚಿತ್ರ ನಿರ್ಮಾಪಕರು ನನ್ನನ್ನು ಸಂಪರ್ಕಿಸಿ ಅವರ ಕಥೆಗಳೀಗೆ ಅಭಿನಯಿಸಲು ಹೇಳಿದ್ದಾರೆ. ಆದರೆ ನಾನು ನನ್ನ ಅನುಭವವನ್ನು ಎರಕ ಹೊಯ್ದು ಅವರಿಗೆ ನಯವಾದ ಉತ್ತರದಿಂದ ನಿರಾಕರಿಸಿದ್ದೆ. ನನ್ನ ಮೊದಲ ಚಿತ್ರದಲ್ಲಿ ಮಾಡಿದ ತಪ್ಪನ್ನೇ ಪುನರಾವರ್ತಿಸಲು ಬರುವುದಿಲ್ಲ. "ಸಚಿನ್ ಹೇಳೀದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT