ಸಿನಿಮಾ ಸುದ್ದಿ

ಪಂಜಾಬಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ ಮಂಗಳೂರು ಚೆಲುವೆ ಸೋನಾಲ್ ಮಾಂಟೆರೊ

Raghavendra Adiga

ನಟಿ ಸೋನಾಲ್ ಮಾಂಟೆರೊ ಸಧ್ಯ  ಪಂಜಾಬಿ ಚಲನಚಿತ್ರಗಳನ್ನು ನೋಡುವುದು ಮತ್ತು ಪಂಜಾಬಿ ಭಾಷೆಯನ್ನು ಗ್ರಹಿಸುವ ಕಾರ್ಯದಲ್ಲಿ ನಿರತವಾಗಿದ್ದಾರೆ. 

ತುಳು ಚಿತ್ರರಂಗದಲ್ಲಿ ಹೆಸರಾಗಿದ್ದ ನಟಿ ನ್ನಡ ಚಿತ್ರರಂಗದಲ್ಲಿ ನಟಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದ್ದಾರೆ. ನಂತರ ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷಿಸಿದ್ದ ನಟಿ ಇದೀಗ ಪಂಜಾಬಿ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ.

ತಾನು ಹೊಸ ಭಾಷೆ ಕಲಿಯಲು ಉತ್ಸಾಹದಿಂದ್ದ್ದೇನೆ ಎಂದು ನಟಿ ಸ್ವತಃ ಹೇಳಿದ್ದು ಇದಕ್ಕಾಗಿ ಆಕೆ ಲಾಕ್ ಡೌನ್ ಧಿಯನ್ನು ಸಂಪೂರ್ಣವಾಗಿ ಬಳಸಿಕೊಂಡಿರುವುದಾಗಿ ಹೇಳಿದ್ದಾರೆ. ಮಂಗಳೂರಿನಲ್ಲಿರುವ ತನ್ನ ಸ್ವಂತ ಊರಿನಲ್ಲಿ ತನಗೆ ದೊರೆತ ವಿರಾಮದ ವೇಳೆ ತನ್ನ ಪಂಜಾಬಿ ಚೊಚ್ಚಲ ಚಿತ್ರಕ್ಕಾಗಿ ಸಹಿ ಮಾಡಲು ಬುಧವಾರ ಬೆಂಗಳೂರಿಗೆ ಆಗಮಿಸಿದ್ದಾರೆ."ನನ್ನ ಸಂದರ್ಶನಗಳಲ್ಲಿ ನಾನು ಯಾವಾಗಲೂ ನಟಿಯಾಗಿ ಒಂದೇ ಭಾಷೆಯಲ್ಲಿ ನೆಲೆಸಲು ಬಯಸುವುದಿಲ್ಲ, ಮತ್ತು ಸಾಧ್ಯವಾದಷ್ಟು ಬೇರೆ ಬೇರೆ ಭಾಷೆಗಳಲ್ಲಿ ತೊಡಗಿಸಿಕೊಳ್ಳಲು ಬಯಸುತ್ತೇನೆ" 

ಜನಪ್ರಿಯ ನಟ ಗುರುದಾಸ್ ಮನ್, ರಾಜವೀರ್ ಸಿಂಗ್ ಮತ್ತು ಅವ್ಜಿಂದರ್ ಗ್ರೆವಾಲ್ ಅವರೊಂದಿಗೆ ಸೋನಾಲ್ ನಟಿಸಲಿದ್ದಾರೆ. ಆಕೆ ತುಳುವಿನಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದಾಗ ಇನ್ನಷ್ಟು ಕನ್ನಡ ಕಲಿಯಬೇಕಾಗಿತು. "ಈಗ ನಾನು ಈ ಖ್ಯಾತಿಯನ್ನು ಪಂಜಾಬ್‌ಗೆ ಕೊಂಡೊಯ್ಯಬಹುದು, ಅಲ್ಲಿ ನಾನು ಸ್ವಲ್ಪ ಹೆಚ್ಚು ಅನುಭವವನ್ನು ಪಡೆಯಬಹುದು ಮತ್ತು ಹೊಸ ಭಾಷೆಯನ್ನು ಕಲಿಯಬಹುದು" ಎಂದು ಅವರು ಹೇಳುತ್ತಾರೆ.

ಇನ್ನು ಸಧ್ಯ ಸೋನಾಲ್ ಅಭಿನಯದ ಬನಾರಸ್ ಚಿತ್ರದಲ್ಲಿ ಒಂದು ಹಾಡಿನ ಶೂಟಿಂಗ್ ಮಾತ್ರ ಬಾಕಿ ಇದೆ. ಈ ನಡುವೆ ನಟಿ  ತನ್ನ ಮುಂದಿನ ಚಿತ್ರವಾದ ರಾಬರ್ಟ್ ಬಿಡುಗಡೆಯನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾಳೆ. ಈ ಚಿತ್ರದಲ್ಲಿ ಆಶಾ ಭಟ್ ಜೊತೆಗೆ ದರ್ಶನ್ ಮುಖ್ಯ ಪಾತ್ರದಲ್ಲಿದ್ದಾರೆ ಮತ್ತು  ಸೋನಾಲ್ ಕೂಡ ಮುಖ್ಯ ಪಾತ್ರಧಾರಿಯಾಗಿದ್ದಾರೆ. ಇನ್ನು ನಟಿ ವಸಿಷ್ಠ ಸಿಂಹ ಮುಖ್ಯ ಪಾತ್ರದಲ್ಲಿ ನಟಿಸಿರುವ ತಳವಾರ ಪೇಟೆ ಚಿತ್ರದಲ್ಲಿ ಸಹ ಕಾಣಿಸಿಕೊಳ್ಲುತ್ತಿದ್ದು "ಪಂಜಾಬಿ ಚಲನಚಿತ್ರದ ತಯಾರಕರು ಡಿಸೆಂಬರ್ ನಲ್ಲಿ ಫ್ಲೋರ್ ಗೆ ತೆರಳಲು  ಯೋಜಿಸಿದ್ದಾರೆ" ಎಂದರು.

ಲಾಕ್‌ಡೌನ್ ಸೋನಾಲ್ ತನ್ನ ಶಾಲಾ ದಿನಗಳನ್ನು ಮೆಲುಕು ಹಾಕುವಂತೆ ಮಾಡಿತು

ಏತನ್ಮಧ್ಯೆ ಲಾಕ್‌ಡೌನ್ ಸಮಯವು ಸೋನಾಲ್ ಗೆ ತನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಲು ಸಹಾಯ ಮಾಡಿದೆ, “ನಾನು ಕಳ್ಳ ಪೋಲೀಸ್, , ಬ್ಯಾಡ್ಮಿಂಟನ್, ಲಗೋರಿಗಳನ್ನು ಆಡುತ್ತಿದ್ದೆ. ನಾನು ಶಾಲೆಯಲ್ಲಿ ಆಡಿದ ಎಲ್ಲಾ ಆಟಗಳು.  ಆ ಸಮಯ ನೆನೆಯಲು,  ನನ್ನ ಕುಟುಂಬದೊಂದಿಗೆ ಸಾಕಷ್ಟು ಸಮಯ ಕಳೆಯಲು  ಈ ಅವಧಿ ನನಗೆ ಸಹ್ಕರಿಸಿದೆ. ನಾನು ನನ್ನ ಸ್ನೇಹಿತರನ್ನು ಭೇಟಿಯಾಗಲು ಸಾಧ್ಯವಾಗಿದೆ. ವು ಒಟ್ಟಿಗೆ ಸಾಕಷ್ಟು ಸದ್ದು ಮಾಡಿದೆವು." ನಟಿ ಹೇಳಿದ್ದಾರೆ. 

SCROLL FOR NEXT