ಜಗ್ಗೇಶ್ 
ಸಿನಿಮಾ ಸುದ್ದಿ

ನನಗೂ ಒಬ್ಬ ಜಗವರಿಯದ ದೇವರ ಮಗ ತಮ್ಮನಿದ್ದಾನೆ ಅವನ ಮಗುವಂತೆ 55ವರ್ಷದಿಂದ ಸಾಕುತ್ತಿದ್ದೇವೆ!

ಮಂಡ್ಯದಲ್ಲಿ ನಟ ಹುಚ್ಚ ವೆಂಕಟ್ ಮೇಲಾದ ಹಲ್ಲೆಯನ್ನು ಖಂಡಿಸಿ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.ಮಂಡ್ಯ ಶ್ರೀರಂಗಪಟ್ಟಣದಲ್ಲಿ ಕೆಲವರು ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 

ಬೆಂಗಳೂರು: ಮಂಡ್ಯದಲ್ಲಿ ನಟ ಹುಚ್ಚ ವೆಂಕಟ್ ಮೇಲಾದ ಹಲ್ಲೆಯನ್ನು ಖಂಡಿಸಿ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.ಮಂಡ್ಯ ಶ್ರೀರಂಗಪಟ್ಟಣದಲ್ಲಿ ಕೆಲವರು ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 

ಹಲ್ಲೆಯ ವಿಡಿಯೋ ಜಗ್ಗೇಶ್ ಗಮನಕ್ಕೆ ಬಂದಿದ್ದು, ಹುಚ್ಚ ವೆಂಕಟ್ ಪರಿಸ್ಥಿತಿ ಕಂಡು ಮರುಗಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಹುಚ್ಚ ವೆಂಕಟ್ ಬಗ್ಗೆ ಕೆಲವು ಸಾಲುಗಳನ್ನು ಬರೆದುಕೊಂಡು ಚಿಕಿತ್ಸೆಯ ಅಗತ್ಯವಿದೆ ಎಂದಿದ್ದಾರೆ.

ವಿಡಿಯೋ ನೋಡಿ ತುಂಬಾ ದುಃಖವಾಯಿತು. ಸೆಲ್ಫಿ ಪ್ರಚಾರಕ್ಕಾಗಿ ಈ ರೀತಿ ಹಲ್ಲೆ ನಡೆಸೋದು ಎಷ್ಟು ಸರಿ? ಹುಚ್ಚ ವೆಂಕಟ್ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರೋ ಮನೋರೋಗಿ ಎಂದು ಇಡೀ ಕರ್ನಾಟಕಕ್ಕೆ ತಿಳಿದಿದೆ. ಸಾಧ್ಯವಾದ್ರೆ ಸಹಾಯ ಮಾಡಿ, ಇಲ್ಲವಾದ್ರೆ ಪೊಲೀಸರಿಗೆ ಮಾಹಿತಿ ನೀಡಿ. ಹೀಗೆ ಮೃಗೀಯವಾಗಿ ಕೈ ಮಾಡಿ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿ ಆನಂದಿಸದಿರಿ. ಇದು ಬುದ್ಧಿ ಇರೋ ಮನುಜರ ಲಕ್ಷಣವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರ

ನಿಮ್ಮ ಮನೆಯಲ್ಲಿ ಒಬ್ಬ ಅಣ್ಣ, ತಮ್ಮ ಅಥವಾ ತಂದೆ ವೆಂಕಟ್ ರೀತಿ ಮಾನಸಿಕ ರೋಗಿ ಆಗಿದ್ದರೆ ಅವರ ಮೇಲೆ ಕೈ ಮಾಡಿದ್ರೆ ನೋವು ಆಗುತ್ತೆ ಅಲ್ವಾ ಎಂದು ಹಲ್ಲೆ ನಡೆಸಿದ ಹುಡುಗರಿಗೆ ಜಗ್ಗೇಶ್ ಪ್ರಶ್ನೆ ಮಾಡಿದ್ದಾರೆ. ನನಗೂ ಒಬ್ಬ ಜಗವರಿಯದ ದೇವರ ಮಗ ತಮ್ಮನಿದ್ದಾನೆ. 55 ವರ್ಷದಿಂದ ಅವನನ್ನು ಮಗುವಂತೆ ಸಾಕುತ್ತಿದ್ದೇವೆ. ವೆಂಕಟ್ ಬಂಧುಗಳೇ ಸ್ವಾರ್ಥಬಿಟ್ಟು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್