Melobba mayavi poster 
ಸಿನಿಮಾ ಸುದ್ದಿ

ಬಿಡುಗಡೆಗೆ ಸಿದ್ಧವಾಗಿರುವ 'ಮೇಲೊಬ್ಬ ಮಾಯವಿ'ಗೆ 'ಎ' ಸರ್ಟಿಫಿಕೇಟ್

ಅ್ಯಕ್ರೊಮೊಟಾಪ್ಸಿಯಾ (Achromatopsia) ನ್ಯೂನತೆ ಮತ್ತು ಹಲವು ಸಾವು ನೋವುಗಳಿಗೆ ಇಂದಿಗೂ ಸಾಕ್ಷಿಯಾಗಿರುವ ಮಾಫಿಯಾದ ವಿಭಿನ್ನ ಕಥಾಹಂದರ ಹೊಂದಿರುವ, ನೈಜ ಘಟನೆಗಳ ಕುರಿತಾದ ವಿನೂತನ ಹೆಸರಿನ ‘ಮೇಲೊಬ್ಬ ಮಾಯಾವಿ’ ತೆರೆಗೆ ಬರಲು ಸಿದ್ಧವಾಗಿದೆ.

ಬೆಂಗಳೂರು: ಅ್ಯಕ್ರೊಮೊಟಾಪ್ಸಿಯಾ (Achromatopsia) ನ್ಯೂನತೆ ಮತ್ತು ಹಲವು ಸಾವು ನೋವುಗಳಿಗೆ ಇಂದಿಗೂ ಸಾಕ್ಷಿಯಾಗಿರುವ ಮಾಫಿಯಾದ ವಿಭಿನ್ನ ಕಥಾಹಂದರ ಹೊಂದಿರುವ, ನೈಜ ಘಟನೆಗಳ ಕುರಿತಾದ ವಿನೂತನ ಹೆಸರಿನ ‘ಮೇಲೊಬ್ಬ ಮಾಯಾವಿ’ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರ ವೀಕ್ಷಿಸಿರುವ ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ಯಾವುದೇ ಕಟ್ ನೀಡದೆ, ಸೌಂಡ್ ಮ್ಯೂಟ್ ಸಹ ನೀಡದೆ ‘ಎ’ ಪ್ರಮಾಣಪತ್ರ ನೀಡಿದೆ.

ಈ ಸಿನಿಮಾದ ವಿಶೇಷತೆ ಎಂದರೆ, ಎಲ್.ಎನ್ ಶಾಸ್ತ್ರೀ ಗಾಯನ  ಈ ಚಿತ್ರಕ್ಕಿದೆ.  ‘ಜನುಮದ ಜೋಡಿ’ಯ ಕೋಲುಮಂಡೆ ಜಂಗಮದೇವ ಹಾಡಿನ ಮೂಲಕ ಖ್ಯಾತರಾಗಿದ್ದ ಗಾಯಕ, ಸಂಗೀತ ಸಂಯೋಜಕ, ರಾಜ್ಯ ಪ್ರಶಸ್ತಿ ವಿಜೇತ ದಿವಂಗತ ಎಲ್.ಎನ್.ಶಾಸ್ತ್ರೀ ಅವರು ‘ಕಳ್ಳಕೊಳಲ ಹಿಡಿದವನೊಬ್ಬ ಗೋಪಾಲ’ ಗೀತೆಗೆ ಧ್ವನಿಯಾಗಿದ್ದರು. ಇದೇ ಕೊನೆಯ ಚಿತ್ರವಾಗಿದೆ.

ಸಿನಿಮಾ ಪತ್ರಕರ್ತ ಬಿ. ನವೀನ್​ಕೃಷ್ಣ ಕಥೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಕದ್ರಿ ಮಣಿಕಾಂತ್ ಅವರ ಹಿನ್ನಲೆ ಸಂಗೀತವಿದ್ದು, ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರಕ್ಕೆ ಸಹಾಯಕ ಸಂಕಲನಕಾರರಾಗಿದ್ದ ಕೆ.ಗಿರೀಶ್ ಕುಮಾರ್ ಸಂಕಲನ ಮಾಡಿದ್ದಾರೆ. ಛಾಯಾಗ್ರಹಣದ ಜವಾಬ್ದಾರಿಯನ್ನು ದೀಪಿತ್ ಹೊತ್ತಿದ್ದರೆ, ನೃತ್ಯ ಸಂಯೋಜನಯನ್ನು ರಾಮು ಮಾಡಿದ್ದಾರೆ.

ಸಿನಿಮಾದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಚಿತ್ರದ ನಾಯಕನಾದರೆ, ಅನನ್ಯ ಶೆಟ್ಟಿ ನಾಯಕಿಯಾಗಿ ಅಭಿನಯಕ್ಕೆ ಸವಾಲಾಗುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಪತ್ರಕರ್ತ, ಚಿಂತಕ, ಚಕ್ರವರ್ತಿ ಚಂದ್ರಚೂಡ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಚಿತ್ರಕ್ಕೆ ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದಿದ್ದಾರೆ. ಉಳಿದಂತೆ ಕೃಷ್ಣಮೂರ್ತಿ ಕವತ್ತಾರ್, ಎಂ.ಕೆ.ಮಠ, ಬೆನಕ ನಂಜಪ್ಪ, ನವೀನ್​ ಕುಮಾರ್, ಲಕ್ಷೀ ಅರ್ಪಣ್, ಪವಿತ್ರಾ ಜಯರಾಮ್, ಮುಖೇಶ್ ಮುಂತಾದವರು ನಟಿಸಿದ್ದಾರೆ. ಪುತ್ತೂರು ಭರತ್ ಮತ್ತು ತನ್ವಿ ಅಮಿನ್ ಕೊಲ್ಯ ಜಂಟಿಯಾಗಿ ಶ್ರೀಕಟೀಲ್ ಸಿನಿಮಾಸ್ ಮೂಲಕ ನಿರ್ಮಾಣ ಮಾಡಿರುವುದು ಪ್ರಥಮ ಅನುಭವ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT