3 ದೇವಿ 
ಸಿನಿಮಾ ಸುದ್ದಿ

ಲಾಕ್ ಡೌನ್ ಅನ್ ಲಾಕ್ ಬಳಿಕ ಶೂಟಿಂಗ್ ಪ್ರಾರಂಭಿಸಿದ '3 ದೇವಿ'

ಲಾಕ್ ಡೌನ್ ನಂತರ ಶೂಟಿಂಗ್ ಪುನಾರಂಭಕ್ಕೆ ಅನುಮತಿ ಸಿಕ್ಕ ಬಳಿಕ ಚಿತ್ರೀಕರಣ ಪ್ರಾರಂಭಿಸಿರುವ ಮೊದಲ ಕನ್ನಡ ಚಿತ್ರಗಳ ಪೈಕಿ "3 ದೇವಿ" ಸಹ ಇದೆ. ಮೊದಲ ಬಾರಿಗೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿರುವ ನಟಿ ಶುಭಾ ಪೂಂಜಳಿದ ದೃಶ್ಯಗಳ ಚಿತ್ರೀಕರಣವನ್ನು ಪ್ರಾರಂಭಿಸಲು ಈ ವಾರ ಕೊಡಗಿಗೆ ತೆರಳಲು ಯೋಜಿಸುತ್ತಿದ್ದಾರೆ.

ಲಾಕ್ ಡೌನ್ ನಂತರ ಶೂಟಿಂಗ್ ಪುನಾರಂಭಕ್ಕೆ ಅನುಮತಿ ಸಿಕ್ಕ ಬಳಿಕ ಚಿತ್ರೀಕರಣ ಪ್ರಾರಂಭಿಸಿರುವ ಮೊದಲ ಕನ್ನಡ ಚಿತ್ರಗಳ ಪೈಕಿ "3 ದೇವಿ" ಸಹ ಇದೆ. ಮೊದಲ ಬಾರಿಗೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿರುವ ನಟಿ ಶುಭಾ ಪೂಂಜಳಿದ ದೃಶ್ಯಗಳ ಚಿತ್ರೀಕರಣವನ್ನು ಪ್ರಾರಂಭಿಸಲು ಈ ವಾರ ಕೊಡಗಿಗೆ ತೆರಳಲು ಯೋಜಿಸುತ್ತಿದ್ದಾರೆ. "ಮಾರ್ಗಸೂಚಿಗಳು ಮತ್ತು ಸೂಚನೆಗಳನ್ನು ಅನುಸರಿಸಿ, ನಾವು 12 ಸದಸ್ಯರ ತಂಡದೊಂದಿಗೆ ಹೋಗಲು ನಿರ್ಧರಿಸಿದ್ದೇವೆ" ಎಂದು ಶುಭಾ ಹೇಳುತ್ತಾರೆ.

ಈ ಚಿತ್ರವನ್ನು ಅಶ್ವಿನ್ ಮ್ಯಾಥ್ಯೂ ನಿರ್ದೇಶಿಸುತ್ತಿದ್ದು ನಿರ್ಮಾಣ ಸಹ ಅವರದ್ದೇ ಆಗಿದೆ ಈಗಾಗಲೇ 70 ಪ್ರತಿಶತದಷ್ಟು ಚಿತ್ರೀಕರಣ ವಯನಾಡಿನಲ್ಲಿ ಮುಗಿದಿದೆ. ಉಳಿದ 30 ಪ್ರತಿಶತವನ್ನು ಕೊಡಗಿನಲ್ಲಿ ಮಾಡಲಾಗುವುದು. “ಇದು ಆಕ್ಷನ್ ಥ್ರಿಲ್ಲರ್, ಚಿತ್ರವಾಗಿದ್ದು ಚಿತ್ರದ ಪ್ರಮುಖ ಭಾಗಗಳನ್ನು ನಾವು ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ಮಾಡಬೇಕಾಗಿತ್ತು, ಇದನ್ನು ನಾವು ವಯನಾಡಿನಲ್ಲಿ ಮಾಡಲಿದ್ದೆವು  ಆದರೆ ಪ್ರಸ್ತುತ ಪರಿಸ್ಥಿತಿಯೊಂದಿಗೆ, ನಾವು ಕೇರಳಕ್ಕೆ ತೆರಳಲು ಸಾಧ್ಯವಿಲ್ಲ ಆದ್ದರಿಂದ ಕೊಡಗಿನಲ್ಲಿ ಶೂಟಿಂಗ್ ಮುಂದುವರಿಸಲು ತೀರ್ಮಾನಿಸಿದ್ದೇವೆ.  ”ಎಂದು ಶುಭಾ ಹೇಳುತ್ತಾರೆ.

"3 ದೇವಿ"  ಮೂರು ನಾಯಕಿಯರಿರುವ ಚಿತ್ರವಾಗಿದ್ದು ಶುಭಾ ಜೊತೆಗೆ ಜ್ಯೋಥ್ಸ್ನಾ ರೋ ಮತ್ತು ಸಂಧ್ಯಾಕೂಡ ಇರಲಿದ್ದಾರೆ. “ಸಂಧ್ಯಾ ಮಾಡೆಲಿಂಗ್ ಹಿನ್ನೆಲೆಯಿಂದ ಬಂವಳು. ಆದರೆ ಭಾರತಿ ವಿಷ್ಣುವರ್ಧನ ಸಹೋದರಿಯ ಮಗಳಾದ ಜ್ಯೋಥ್ಸ್ನಾ ರಂಗಭೂಮಿ ಹಿನ್ನೆಲೆ ಹೊಂದಿದ್ದಾರೆ. ನಾವು ಅವರನ್ನು ಗುರುತಿಸಿ ನಮ್ಮ ತಂಡದಲ್ಲಿ ಸೇರಿಸಿದ್ದೇವೆ. ಈ ಸಿನಿಮಾ ಅವರ ಪಾಲಿಗೆ ಚೊಚ್ಚಲ ಚಿತ್ರವಾಗಿದೆ. ನಾನು ಮೊಗ್ಗಿನ ಮನಸು ಸೇರಿ ಹಲವು ಚಿತ್ರದಲ್ಲಿ ಮೂವರು ನಾಯಕಿಯರೊಂದಿಗೆ ಮಾಡಿದ್ದೇನೆ.

"ಆದರೆ ಅವು ಸಾಮಾನ್ಯವಾಗಿ ಕಥೆಗಳ ಭಾವನಾತ್ಮಕತೆ ಮೇಲೆ ಹೋಗುತ್ತದೆ.ಹಾಗಾಗಿ ಅಂತಹ ಚಿತ್ರವನ್ನು ಮತ್ತೆ ನನಗೆ ನೀಡಿದಾಗ, ನಾನು ವಿಭಿನ್ನ ಪರಿಕಲ್ಪನೆಯೊಂದಿಗೆ ಕಾಣಿಸಲು ಬಯಸಿದೆ. ಈಗ ನಾವು ಆಕ್ಷನ್ ಥ್ರಿಲ್ಲರ್ ನೊಂದಿಗೆ ಬರುತ್ತಿದ್ದೇವೆ. 

 “ಚಿತ್ರೀಕರಣದ ಸಂಪೂರ್ಣ ಪ್ರಕ್ರಿಯೆಯ ನಿರ್ದೇಶಕ-ನಿರ್ಮಾಪಕ ಅಶ್ವಿನ್ ಮ್ಯಾಥ್ಯೂ ಅವರದ್ದು ಅವರೊಡನೆ ನಾನು ಸಹ ಜವಾಬ್ದಾರಿ ಹಂಚಿಕೊಳ್ಳುತ್ತೇನೆ.ಇದು ಕಲಿಕೆಯ ಪ್ರಕ್ರಿಯೆ. ಈ ಚಿತ್ರವು ಸ್ವಲ್ಪ ಮಟ್ಟಿಗೆ ಯಶಸ್ವಿಯಾದರೆ, ನಾನು ಪೂರ್ಣ ಸಮಯದ ನಿರ್ಮಾಪಕಿಯಾಗಿ ಬದಲಾಗಲು ಖಂಡಿತವಾಗಿಯೂ ಸಾಧ್ಯವಾಗಲಿದೆ."

ಆಲ್ಟರ್ಡ್ ಅಹಂನ ಬ್ಯಾನರ್ ಅಡಿಯಲ್ಲಿ ತಯಾರಿಸಿದ "3 ದೇವಿ" ಚಿತ್ರಕ್ಕೆ ಕುಂಜುನ್ನಿ ಎಸ್ ಕುಮಾರ್ ಅವರ ಛಾಯಾಗ್ರಹಣ  ಫೆಡೆಲ್ ಅಶೋಕ್ ಸಂಗೀತ ಸಂಯೋಜನೆ ಇದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT