ಶ್ರದ್ಧಾ ಶ್ರೀನಾಥ್ 
ಸಿನಿಮಾ ಸುದ್ದಿ

ನೆಟ್ ಫ್ಲಿಕ್ಸ್ ನಲ್ಲಿ 'ಕೃಷ್ಣ ಆಂಡ್ ಹಿಸ್ ಲೀಲಾ' ಹೆಚ್ಚು ವೀಕ್ಷಣೆ: ಶ್ರದ್ಧಾ ಶ್ರೀನಾಥ್

ಶ್ರದ್ಧಾ ಶ್ರೀನಾಥ್ ಅಭಿನಯದ ಬಹು ನಿರೀಕ್ಷಿತ ತೆಲುಗು ಚಿತ್ರ 'ಕೃಷ್ಣ ಆಂಡ್ ಹಿಸ್ ಲೀಲಾ' ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾದ ನಂತರ ಅವರ ಸಾಮಾಜಿಕ ಜಾಲತಾಣ ಖಾತೆಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

 ಶ್ರದ್ಧಾ ಶ್ರೀನಾಥ್ ಅಭಿನಯದ ಬಹು ನಿರೀಕ್ಷಿತ ತೆಲುಗು ಚಿತ್ರ 'ಕೃಷ್ಣ ಆಂಡ್ ಹಿಸ್ ಲೀಲಾ' ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾದ ನಂತರ ಅವರ ಸಾಮಾಜಿಕ ಜಾಲತಾಣ ಖಾತೆಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

'ಸಿನೆಮಾ, ಅದು ಯಾವುದೇ ರೂಪದಲ್ಲಿರಲಿ, ಎದುರುನೋಡಬೇಕಾದ ವಿಷಯ. ನಾವು ಸಮಯಕ್ಕೆ ಹೊಂದಿಕೊಳ್ಳುತ್ತಿದ್ದೇವೆ,
ಇದು ಎಲ್ಲರಿಗೂ ಒಳ್ಳೆಯದು. 'ಕೃಷ್ಣ ಆಂಡ್ ಹಿಸ್ ಲೀಲಾ'  ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ ಅನ್ನಿಸುತ್ತಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನ ಥಿಯೇಟರ್ ಗೆ ಹೋದಾಗ ಆಗುವ ಥ್ರಿಲ್ಲಿಂಗ್ ಕಳೆದುಕೊಂಡಿದ್ದೇನೆ. ಆದರೆ, ಸ್ಟ್ರೀಮಿಂಗ್ ಫ್ಲಾಟ್ ಫಾರ್ಮ್ ಗಳಲ್ಲಿ ಚಿತ್ರ ವೀಕ್ಷಣೆ ತನ್ನದೇ ಆದ ಮೋಡಿ ಮಾಡಿದೆ ಎಂದು ಶ್ರದ್ಧಾ ಶ್ರೀನಾಥ್ ಹೇಳಿದ್ದಾರೆ.

ಕೃಷ್ಣಾ ಆಂಡ್ ಹಿಸ್ ಲೀಲಾದಂತಹ ಹಾಸ್ಯಮಯ ಚಿತ್ರಗಳು ತೆಲುಗಿನಲ್ಲಿ ಅಪರೂಪ. ಮೂರು ವರ್ಷಗಳ ವಿಳಂಬವಾದರೂ ಒಟಿಟಿ ಬ್ಲಾಕ್ ಬೂಸ್ಟರ್ ಎಂದು ಬಣ್ಣಿಸಲಾಗುತ್ತಿದೆ.ಜನರಿಗೆ ಸಿನಿಮಾ ಹಿಡಿಸುತ್ತದೆ ಎಂದು ಊಹಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ತಮಿಳು ಚಿತ್ರ ಚಕ್ರದ ಬಿಡುಗಡೆಗಾಗಿ ಶ್ರದ್ಧಾ ಶ್ರೀನಾಥ್ ಕಾಯುತ್ತಿದ್ದಾರೆ. ಇದನ್ನು ಎಂಎಸ್ ಆನಂದನ್ ನಿರ್ದೇಶಿಸಿದ್ದು, ವಿಶಾಲ್ ಮತ್ತು ರೆಜಿನಾ ಕಸ್ಸಂದ್ರ ಕೂಡಾ ಅಭಿನಯಿಸಿದ್ದಾರೆ.ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಟ್ರೈಲರ್ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.ಟ್ರೈಲರ್ ಅಭಿಮಾನಿಗಳಿಗೆ ಖುಷಿ ನೀಡಲಿದೆ ಎಂದಿರುವ ಶ್ರದ್ಧಾ ಶ್ರೀನಾಥ್, ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಾರೆ.

ಸರ್ಕಾರ ಅನುಮತಿ ನೀಡಿದ್ದರೂ ಕೂಡಾ ಇದು ಹೆಚ್ಚು ಕೆಲಸ ಮಾಡುವ ಋತುವಲ್ಲಾ, ಅಪಾಯವಿಲ್ಲದ ರೀತಿಯಲ್ಲಿ ಚಿತ್ರೀಕರಣ ಮಾಡಲು ನಾವು ಸಜ್ಜುಗೊಂಡಿದ್ದೇವೆ ಎಂದು ಅನ್ನಿಸುತ್ತಿಲ್ಲ.ಅದನ್ನು ಕಾಯುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಗಳಿಲ್ಲ.ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿದಿನ ಹೊಸ ವಿಷಯಗಳನ್ನು ಹುಡುಕುತ್ತಿದೆ. ನಾನು ವಿಶ್ರಾಂತಿ ಪಡೆಯುತ್ತಿದ್ದೇನೆ, ಚಲನಚಿತ್ರಗಳನ್ನು ನೋಡುತ್ತಿರುತ್ತೇನೆ ಎಂದು ಶ್ರದ್ಧಾ ಶ್ರೀನಾಥ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

SCROLL FOR NEXT