ಸಿನಿಮಾ ಸುದ್ದಿ

ಖಡ್ಗಕ್ಕಿಂತ ಲೇಖನಿ ಹರಿತ:  ಲಾಂಗು, ಮಚ್ಚು ಬಿಟ್ಟು ಪೆನ್ನು ಹಿಡಿದ 'ದ್ರೋಣ'

Shilpa D

ದ್ರೋಣ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಸರ್ಕಾರಿ ಶಾಲೆ ಶಿಕ್ಷಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೌದು  ಶಿವಣ್ಣ ಮಚ್ಚು ಬಿಟ್ಟು ಸೀಮೆಸುಣ್ಣ ಹಿಡಿದಿದ್ದಾರೆ.  ದ್ರೋಣ ಸಿನಿಮಾ ಮಾರ್ಚ್ 6 ರಂದು ರಿಲೀಸ್ ಆಗುತ್ತಿದೆ.

ಖಡ್ಗಕ್ಕಿಂತ ಲೇಖನಿ ಹರಿತ ಎಂಬುದನ್ನು ನಾವು ಈ ಸಿನಿಮಾ ಮೂಲಕ ತೋರಿಸಲು ಹೊರಟಿದ್ದೇವೆ. ಒಂದು ಪೆನ್ ನಿಂದ ಎಷ್ಟೆಲ್ಲಾ ಬದಲಾವಣೆ ತರಬಹುದು ಎಂಬುದಕ್ಕೆ ಈ ಸಿನಿಮಾ ಸಾಕ್ಷಿ ಎಂದು ಶಿವಣ್ಣ ಹೇಳಿದ್ದಾರೆ.

ಸಿನಿಮಾದಲ್ಲಿ ನಾನು ವಾಚ್ ಅನ್ನು ಎಡಗೈ ಬದಲಾಗಿ ಬಲಗೈ ಗೆ ಕಟ್ಟುತ್ತೇನೆ, ಇರ ಅರ್ಥ ನಾನು ಮಾಡುವ ಎಲ್ಲಾ ಕೆಲಸಗಳು ರೈಟ್ ಆಗಿರುತ್ತೆ ಎಂದು.  ಇದೊಂದು ಅದ್ಭುತವಾದ ಪಾತ್ರವಾಗಿದೆ, 

ಒಬ್ಬ ವ್ಯಕ್ತಿ ಪರಿಪೂರ್ಣ ಮತ್ತು ಅಚ್ಚುಕಟ್ಟಾಗಿ ಇದ್ದಾಗ ಮಾತ್ರ ಆತ ಸುಂದರವಾಗಿ ಕಾಣಲು ಸಾಧ್ಯ,  ಇದರಿಂದ ನಿಮ್ಮ ಸುತ್ತ ಮುತ್ತಲೂ ಇರುವವರು ಕೂಡ ಹಾಗೆಯೇ ಬದಲಾಗುತ್ತಾರೆ. 

ಈ ಸಿನಿಮಾದಲ್ಲಿ ಭೌತಶಾಸ್ತ್ರ ಶಿಕ್ಷಕನಾಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ,  ಆದರೆ ಶಿವಣ್ಣನ ಫೇವರಿಟ್ ಸಬ್ಜೆಕ್ಟ್ ಕೆಮಿಸ್ಟ್ರಿ, ತಮ್ಮ ಕಾಲೇಜು ದಿನಗಳ ಬಗ್ಗೆ ಮೆಲುಕು ಹಾಕಿದ ಶಿವಣ್ಣ,  ಪ್ರತಿ ಆಕ್ಷನ್ ಗೂ ರಿಯಾಕ್ಷನ್ ಇರುತ್ತದೆ ಎಂಬುದನ್ನು ಹೇಳುತ್ತಿದ್ದ ಕೆಮಿಸ್ಟ್ರಿ ಸಬ್ಜೆಕ್ಟ್ ಅನ್ನು ಬಳ ಇಷ್ಟ ಪಡುತ್ತಿದ್ದರಂತೆ. ದ್ರೋಣ ಸಿನಿಮಾದಲ್ಲಿ ಅವರು ವಿದ್ಯಾರ್ಥಿಗಳ ಬೆಳವಣಿಗೆ ಸೇರಿದಂತೆ ಮಾಪನಗಳ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚು ಮಾತನಾಡುತ್ತಾರೆ. ಇದೆಲ್ಲಾ ಮನರಂಜನೆಗಾಗಿ ಮಾಡಿದ್ದುಎಂದು ಶಿವಣ್ಣ ಹೇಳಿದ್ದಾರೆ.   

ಈ ಸಿನಿಮಾ ನಿರ್ದೇಶಿಸಿರುವುದು ಪ್ರಮೋದ್ ಚಕ್ರವರ್ತಿ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಅವರೇ ನಿಭಾಯಿಸಿದ್ದಾರೆ. ಛಾಯಾಗ್ರಹಣ  ಜೆ.ಎಸ್. ವಾಲಿ ಅವರದು. ರಾಮ್‍ಕ್ರಿಶ್ ಸಂಗೀತ ಸಂಯೋಜಿಸಿದ್ದಾರೆ. ಬಸವರಾಜ ಅರಸ್ ಅವರ ಸಂಕಲನವಿದೆ. ಡಿಫರೆಂಟ್ ಡ್ಯಾನಿ ಮತ್ತು ವಿಜಿ ಸಾಹಸ ಸಂಯೋಜಿಸಿದ್ದಾರೆ.

ಈ ಚಿತ್ರಕ್ಕೆ ವಿ. ಮನೋಹರ್, ನಾಗೇಂದ್ರ ಪ್ರಸಾದ್ ಸಾಹಿತ್ಯ ಹೊಸೆದಿದ್ದಾರೆ. ನಟ ಶಿವರಾಜ್ ಕುಮಾರ್‌ ಅವರು ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಇನಿಯಾ ನಾಯಕಿ. ಸ್ವಾತಿ ಶರ್ಮ, ರಂಗಾಯಣ ರಘು, ಬಾಬು ಹಿರಣ್ಣಯ್ಯ, ಶಂಕರ್ ರಾವ್, ರೇಖಾದಾಸ್, ರಾಮಸ್ವಾಮಿಗೌಡ, ಶ್ರೀನಿವಾಸ ಗೌಡ, ಆನಂದ್ ತಾರಾಗಣದಲ್ಲಿದ್ದಾರೆ. 

ದ್ರೋಣ ಒಂದು ಸಾಮಾಜಿಕ ಕಾಳಜಿ ಇರುವ ಸಿನಿಮಾ. ಶಿಕ್ಷಣ ಅವ್ಯವಸ್ಥೆ, ಸರ್ಕಾರಿ ಶಾಲೆಯಲ್ಲಿರುವ ಲೋಪಗಳು, ಶಿಕ್ಷಣ ಮಾಫಿಯಾ ವಿರುದ್ಧ ನಿಲ್ಲುವ ಕಥೆ ಇದಾಗಿದೆ. ಚಿತ್ರದಲ್ಲಿ ಶಿವಣ್ಣ ಶಿಕ್ಷಕನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೆ ರಿಲೀಸ್ ಆಗಿರುವ ಚಿತ್ರದ ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

SCROLL FOR NEXT