ಸಿನಿಮಾ ಸುದ್ದಿ

'ಬನಾರಸ್'  ಸಿನಿಮಾದಲ್ಲಿ ರಮಣೀಯ ಸಂಗೀತದ ದೃಶ್ಯ ಕಾವ್ಯ

Shilpa D

ನಿರ್ದೇಶಕ ಜಯತೀರ್ಥ ಬನಾರಸ್ ಸಿನಿಮಾದ ಶೇ.80 ರಷ್ಟು ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಸಂಗೀತ ಮತ್ತು  ದೃಶ್ಯದ ಮೂಲಕ  ಆ ಸ್ಥಳದ ಸಂಪೂರ್ಣ ಸ್ಥಳದ ನೋಟ ಮತ್ತು ಭಾವನೆಯನ್ನು ಜೀವಂತವಾಗಿ ತರಲು ಪ್ರಯತ್ನಿಸುತ್ತಿದ್ದೇನೆ ಎಂದು ನಿರ್ದೇಶಕ ಜಯತೀರ್ಥ ತಿಳಿಸಿದ್ದಾರೆ.

ಜಮೀರ್ ಪುತ್ರ ಜೈದ್ ಖಾನ್ ಮೊದಲ ಸಿನಿಮಾ ಇದಾಗಿದ್ದು, ಸೋನಾಲ್ ಮಾಂಟೇರಿಯೋ ಜೈದ್ ಗೆ ನಾಯಕಿಯಾಗಿದ್ದಾರೆ.

ಸಿನಿಮಾದಲ್ಲಿ 64 ಘಾಟ್ ಗಳನ್ನು ಚಿತ್ರೀಕರಿಸಲಾಗಿದೆ. ಜೊತೆಗೆ ಅತ್ಯದ್ಭುತ ಸಂಗೀತ ಇದೆ.

ಹಿಂದೂಸ್ತಾನಿ ಗಾಯಕ ಸುಚರಿತಾ ಗುಪ್ತಾ, ಬಿಸ್ಮಿಲ್ಲಾ ಖಾನ್ ಮೊಮ್ಮಗ ಫತೇ ಅಲಿ ಖಾನ್  ಬೋಮಿನ್ ನಶಾದ್ ಸೇರಿದಂತೆ ಹಲವು  ಪ್ರಸಿದ್ದ ಗಾಯಕರು ಹಾಡಿದ್ದಾರೆ.  ವೇದಭ್ರ ಸಂಸ್ಕೃತ ಶಾಲೆಯ ಮಕ್ಕಳು ಶ್ಲೋಕಗಳನ್ನು ಹಾಡಿದ್ದಾರೆ.

ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ನಡೆದಿದೆ, ಹೊಸ ಸ್ಥಳ ಇದಕ್ಕಾಗಿ ಅಗತ್ಯ ಸಂಗೀತ ನೀಡಲಾಗಿದೆ.

ಸದ್ಯ ಸಿನಿಮಾ ತಂಡ ಹಾಡೊಂದರ ಶೂಟಿಂಗ್ ಗಾಗಿ  ಗುರುವಾರ ಶ್ರೀಲಂಕಾಗೆ ತೆರಳಲಿದೆ. ಸಿಂಗಾಪೂರ್ ಗೆ ಹೋಗಬೇಕಿತ್ತು, ಆದರೆ ಕರೋನಾ ವೈರಸ್ ಸಮಸ್ಯೆಯಿಂದಾಗಿ ಪ್ಲಾನ್ ಚೇಂಜ್ ಆಗಿದೆ ಎಂದು ಜಯತೀರ್ಥ ತಿಳಿಸಿದ್ದಾರೆ. 

SCROLL FOR NEXT