ಗುಟ್ತಾಗಿ ಹಸೆಮಣೆ ಏರಿದ್ರಾ 'ಹೆಬ್ಬುಲಿ' ನಟಿ ಅಮಲಾ ಪೌಲ್? 
ಸಿನಿಮಾ ಸುದ್ದಿ

ಗುಟ್ಟಾಗಿ ಹಸೆಮಣೆ ಏರಿದ್ರಾ 'ಹೆಬ್ಬುಲಿ' ನಟಿ ಅಮಲಾ ಪೌಲ್?

ಕನ್ನಡದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ಕಿಚ್ಚ ಸುದೀಪ್ ಅಭಿನಯದ "ಹೆಬ್ಬುಲಿ"ಯಲ್ಲಿ ನಟಿಸಿದ್ದ ಬಹುಭಾಷಾ ನಟಿ ಅಮಲಾ ಪೌಲ್ ಗುಟ್ಟಾಗಿ ಎರಡನೇ ಮದುವೆಯಾಗಿದ್ದಾರೆ! ಕೆಲವು ವಾರಗಳ ಹಿಂದೆ, ಅಮಲಾ ಪೌಲ್ ತಮ್ಮ ಗೆಳೆಯ ಭವನಿಂದರ್ ಸಿಂಗ್  ಅವರೊಡನೆ ವಿವಾಹವಾಗಿದ್ದು ಈ ವಿವಾಹ ಕಾರ್ಯಕ್ರಮದ ಚಿತ್ರಗಳು ಇದೀಗ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿವೆ.

ಕನ್ನಡದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ಕಿಚ್ಚ ಸುದೀಪ್ ಅಭಿನಯದ "ಹೆಬ್ಬುಲಿ"ಯಲ್ಲಿ ನಟಿಸಿದ್ದ ಬಹುಭಾಷಾ ನಟಿ ಅಮಲಾ ಪೌಲ್ ಗುಟ್ಟಾಗಿ ಎರಡನೇ ಮದುವೆಯಾಗಿದ್ದಾರೆ! ಕೆಲವು ವಾರಗಳ ಹಿಂದೆ, ಅಮಲಾ ಪೌಲ್ ತಮ್ಮ ಗೆಳೆಯ ಭವನಿಂದರ್ ಸಿಂಗ್  ಅವರೊಡನೆ ವಿವಾಹವಾಗಿದ್ದು ಈ ವಿವಾಹ ಕಾರ್ಯಕ್ರಮದ ಚಿತ್ರಗಳುಇದೀಗ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿವೆ.

ಭವನಿಂದರ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್‌ ನಲ್ಲಿ ಈ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. "Wedding pics #throwback (sic)." ಎಂಬ ಶೀರ್ಷಿಕೆಯಲ್ಲಿ ಅವರು ಮದುವೆ ಚಿತ್ರಗಳನ್ನು ಹಾಕಿಕೊಂಡಿದ್ದು ಅವು ವೈರಲ್ ಆಗುತ್ತಿದ್ದಂತೆ ತಕ್ಷಣ ಅಳಿಸಿ ಹಾಕಿದ್ದಾರೆ. ಆದರೆ ಅವರು ಹಾಗೆ ಅಳಿಸಿ ಹಾಕುವ ವೇಳೆಗೆ ಬಹಳ ತಡವಾಗಿದೆ. ಚಿತ್ರಗಳು ಈಗಾಗಲೇ ವೈರಲ್ ಆಗಿದ್ದವಾಗಿ ಹಲವಾರು ಅಭಿಮಾನಿ ಗಳು ಅವನ್ನು ತಮ್ಮ ಪೇಜ್ ನಲ್ಲಿ ಹಂಚಿಕೊಂಡಿದ್ದರು.

ಇನ್ನೊಂದೆಡೆ ಇದು ಗುಟ್ಟಾಗಿ ನಡೆದ ಮದುವೆ ಎನ್ನುವುದನ್ನು ನಟಿಯ ಆಪ್ತ ಮೂಲಗಳು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಅಮಲಾ ಪಾಲ್ ಅವರು ಮುಂಬೈ ಮೂಲದ ಗಾಯಕ ಭವನ್ಂದರ್ ಸಿಂಗ್  ಅವರನ್ನು ಈಗ ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಲ್ಲದೆ ವರದಿಗಳನ್ನೇ ನಂಬುವುದಾದರೆ ಅವರು ಲಿವಿ-ಇನ್ ರಿಲೇಷನ್ ಸಂಬಂಧವನ್ನು ಹೊಂದಿದ್ದರು.

2014 ರಲ್ಲಿ ಅಮಲಾ ಚಲನಚಿತ್ರ ನಿರ್ಮಾಪಕ ಎ.ಎಲ್.ವಿಜಯ್ ಅವರನ್ನು ಚೆನ್ನೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿವಾಹವಾಗಿದ್ದರು. ಆದರೆ ಇಬ್ಬರ ನಡುವೆ ಸರಿಪಡಿಸಲಾಗದ ಭಿನ್ನಾಭಿಪ್ರಾಯ ಉದ್ಭವಿಸಿದ್ದ ಕಾರಣ 2017 ರಲ್ಲಿ ವಿಚ್ಚೇದನ ಪಡೆದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BBMPಯಲ್ಲಿ ಭ್ರಷ್ಟಾಚಾರ: ನಾಗಮೋಹನ ದಾಸ್ ಆಯೋಗದಿಂದ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ

7 ವರ್ಷಗಳ ನಂತರ ಚೀನಾಗೆ ಆಗಮಿಸಿದ ಮೋದಿ; ಟಿಯಾಂಜಿನ್‌ನಲ್ಲಿ ಭಾರತ ಪ್ರಧಾನಿಗೆ ಭವ್ಯ ಸ್ವಾಗತ

Rahul Gandhi ವಿರುದ್ಧದ ದ್ವಿಪೌರತ್ವ ಪ್ರಕರಣ: ಬಿಜೆಪಿ ಕಾರ್ಯಕರ್ತನಿಗೆ ಭದ್ರತೆ ಒದಗಿಸಲು ಅಲಹಾಬಾದ್ ಹೈಕೊರ್ಟ್ ಸೂಚನೆ

Dharmasthala case: ಬಂಧಿತ ಸಾಕ್ಷಿ-ದೂರುದಾರ ಚಿನ್ನಯ್ಯನನ್ನು ಸ್ಥಳ ಮಹಜರಿಗೆ ಕರೆದೊಯ್ದ SIT

ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭ: ರಾಜ್ಯ ಪೊಲೀಸ್ ಇಲಾಖೆ ಬಗ್ಗೆ ರಾಜ್ಯಪಾರ ಶ್ಲಾಘನೆ; ದುರ್ಬಲ ವರ್ಗಗಳ ರಕ್ಷಣೆಗೆ ಸಿಎಂ ಕರೆ

SCROLL FOR NEXT