ಗಾಳಿಪಟ 2 
ಸಿನಿಮಾ ಸುದ್ದಿ

'ಗಾಳಿಪಟ 2' ಪೋಸ್ಟ್ ಪ್ರೊಡಕ್ಷನ್ ಕೆಲಸ ಪ್ರಾರಂಭಿಸಿದ ಯೋಗರಾಜ್ ಭಟ್

ನಿರ್ದೇಶಕ ಯೋಗರಾಜ್ ಭಟ್ ಗಾಳಿಪಟ 2 ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಪುನರಾರಂಭಿಸಲಿದ್ದಾರೆ. ಕರ್ನಾಟಕ ಸರ್ಕಾರ ಚಿತ್ರೋದ್ಯಮದ ಕೆಲಸ ಪುನರಾರಂಭಿಸಲು ಅನುಮತಿ ನೀಡಿದ ನಂತರ ನಿರ್ದೇಶಕರು ಈ ನಿರ್ಧಾರ ಕೈಗೊಂಡಿದ್ದಾರೆ.

ನಿರ್ದೇಶಕ ಯೋಗರಾಜ್ ಭಟ್ ಗಾಳಿಪಟ 2 ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಪುನರಾರಂಭಿಸಲಿದ್ದಾರೆ. ಕರ್ನಾಟಕ ಸರ್ಕಾರ ಚಿತ್ರೋದ್ಯಮದ ಕೆಲಸ ಪುನರಾರಂಭಿಸಲು ಅನುಮತಿ ನೀಡಿದ ನಂತರ ನಿರ್ದೇಶಕರು ಈ ನಿರ್ಧಾರ ಕೈಗೊಂಡಿದ್ದಾರೆ. ಅನುಮತಿಯನ್ನು ಕೇವಲ ಪ್ರಿ ಪ್ರೊಡಕ್ಷನ್ ಹಾಗೂ ಪೋಸ್ಟ್ ಪ್ರೊಡಕ್ಷನ್  ಕೆಲಸಗಳಿಗೆ ಸೀಮಿತಗೊಳಿಸಲಾಗಿದೆ, ಮತ್ತು  ಯಾವ ಶೂಟಿಂಗ್ ಗಳನ್ನು ನಡೆಸಬಾರದೆಂದು ಹೇಳಲಾಗಿದೆ. ಇದು ನಿರ್ಮಾಣದ ಕಡೇ ಹಂತದಲ್ಲಿರುವ ಚಿತ್ರಗಳಿಗೆ ಆಶಾದಾಯಕವಾಗಿದೆ.

"ಗಾಳಿಪಟ  2 ಈ ವಾರ ಡಬ್ಬಿಂಗ್ ಹಂತವನ್ನು ಪ್ರವೇಶಿಸಲಿದೆ, ಮತ್ತು ಕಲಾವಿದರು ನನ್ನೊಂದಿಗೆ ಒಬ್ಬೊಬ್ಬರಾಗಿ ಸೇರಿಕೊಳ್ಳುತ್ತಿದ್ದಾರೆ. ಪೂರ್ಣಗೊಂಡ ಭಾಗಗಳನ್ನು ಡಬ್ ಮಾಡಲು ನಾನು ಬಯಸುತ್ತೇನೆ" ಎಂದು ನಿರ್ದೇಶಕರು ಹೇಳುತ್ತಾರೆ. ರೋಮ್ಯಾಂಟಿಕ್  ಕಾಮಿಡಿ ಡ್ರಾಮಾವನ್ನು ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದಾರೆ. ಇದರಲ್ಲಿ ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ಮುಖ್ಯ ಪಾತ್ರದಲ್ಲಿದ್ದಾರೆ.

ಬಹು-ತಾರಾಗಣದಲ್ಲಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮೀಲಾ ಮಾಂಡ್ರೆ ಮತ್ತು ನಿಶ್ವಿಕ ನಾಯ್ಡು  ಸಹ ಇರುವ ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ. ಜತೆಗೆ ಸಂತೋಷ್ ರೈ ಪತ್ತಾಜೆ ಛಾಯಾಗ್ರಹಣವಿದೆ.

ಕೊರೋನಾ ಕಾರಣ ವಿದೇಅದ ಶೂಟಿಂಗ್ ರದ್ದಾಗಿದೆ. ಕರ್ನಾಟಕದ ಕೆಲವು ಅಪರೂಪದ ಸ್ಥಳಗಳೊಂದಿಗೆ ಮುಂದುವರಿಯಲು ಯೋಚಿಸುತ್ತಿದ್ದಾರೆ, ಮತ್ತು ಅನುಮತಿ ನೀಡಿದರೆ ಅವರು ಉತ್ತರ ಭಾರತದಲ್ಲಿ ಚಿತ್ರೀಕರಣಕ್ಕೆ ಯೋಜಿಸಿದ್ದಾರೆ". ಮುಂದಿನ ವರ್ಷಕ್ಕೆ ನಾವು ವಿದೇಶಿ ಸ್ಥಳಗಳಲ್ಲಿ ಚಿತ್ರೀಕರಣಕ್ಕೆ ಅನುಮತಿ ಪಡೆಯಬಹುದೆಂದು ನಾನು ಭಾವಿಸಲಾರೆ. ನಾನು ಈಗ ವಿವಿಧ ಆವೃತ್ತಿಗಳೊಂದಿಗೆ ಬಂದಿದ್ದೇನೆ" ಎಂದು ಯೋಗರಾಜ್ ಭಟ್ ಹೇಳುತ್ತಾರೆ. "ನನ್ನ ಆರಂಭಿಕ ಸ್ಕ್ರಿಪ್ಟ್ ನನಗೆ ರಾಜ್ಯದೊಳಗಿನ ಸ್ಥಳಗಳಲ್ಲಿ ಶೂಟಿಂಗ್ ನಡೆಸಲು ಅವಕಾಶ ನಿಡಿದೆ.  ಆದರೆ ನಂತರ ನಾವು ವೈವಿಧ್ಯತೆಯನ್ನು ಹೊಂದುವ ಕಾರಣ ಬೇರೆ ಸ್ಥಳಗಳ ಆಯ್ಕೆ ಮಾಡಿದ್ದೆವು.  ಜಾರ್ಜಿಯಾ, ಸ್ಕಾಟ್ಲೆಂಡ್  ಹಾಗೂ ದ ಕೆಲವು ಸ್ಥಳಗಳ ಬಗ್ಗೆ ನಾನು ಉತ್ಸುಕನಾಗಿದ್ದೆ. ಆದರೆ ಈಗ ನಾನು ಕರ್ನಾಟಕದ ಅತ್ಯುತ್ತಮ ಸ್ಥಳಗಳಲ್ಲಿ ಕೆಲವು ಸುಂದರವಾದ ಸ್ಥಳಗಳನ್ನು ಕಂಡುಕೊಂಡಿದ್ದೇನೆ. ಹಿಮಾಚಲ ಪ್ರದೇಶ ಮತ್ತು ಉತ್ತರ ಭಾರತದ ಇತರ ಸ್ಥಳಗಳಲ್ಲಿಯೂ ನಾನು ಚಿತ್ರೀಕರಣ ಮಾಡಲು ಬಯಸುತ್ತೇನೆ

ಗಾಳಿಪಟ-2 ನಲ್ಲಿ ನಾವು ತೋರಿಸಬಹುದಾದ ಅತ್ಯುತ್ತಮ ತಾಣಗಳು ನಮ್ಮ ದೇಶದಲ್ಲಿಯೇ ಇದೆ. "ನಾನು ಇತ್ತೀಚೆಗೆ ಬೆಂಗಳೂರಿನಲ್ಲಿ ಕರೋನಾ ಹಾಡನ್ನು ಚಿತ್ರೀಕರಿಸಿದಾಗಿನಿಂದ, ಶೂಟಿಂಗ್ ಪ್ರಕ್ರಿಯೆಯಲ್ಲಿ ನಾವು ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ನಾನು ಕಂಡುಕೊಂಡೆ.  ನಾನು ಗಾಳಿಪಟ-2 ಚಿತ್ರೀಕರಣವನ್ನು ಪುನರಾರಂಭಿಸಿದಾಗ ನಾನು ಅದನ್ನು ಅನುಕರಿಸುತ್ತೇನೆ. ನಾನು ಕೂಡ ಸುರಕ್ಷತಾ ಸಲಹೆಗಾರನಾಗಿದ್ದೇನೆ. ಹಾಡಿನ ಚಿತ್ರೀಕರಣದ ನಂತರ ಬಹಳಷ್ಟು ಚಲನಚಿತ್ರ ನಿರ್ಮಾಪಕರು ನನ್ನನ್ನು ಸಂಪರ್ಕಿಸಿದರು, ಮತ್ತು ನನ್ನ ಎಲ್ಲ ಸಹೋದ್ಯೋಗಿಗಳಿಗೆ ನನ್ನ ಸಲಹೆಯೆಂದರೆ ಸರ್ಕಾರದ ನಿಯಮಗಳನ್ನು ಪಾಲಿಸಿ ಎಂದಾಗಿದೆ. ಜೀವನಕ್ಕಿಂತ ದೊಡ್ಡದು ಏನೂ ಇಲ್ಲ. ತಾಳ್ಮೆಯನ್ನು ಹೊಂದಿರಬೇಕು, ನಮಗೆ ಮತ್ತು ನಮ್ಮ ಸುತ್ತಮುತ್ತಲಿನ ಜನರಿಗೆ ಬದುಕಲು ಅದು ನೆರವಾಗಲಿದೆ"ಅವರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT