ಸಿನಿಮಾ ಸುದ್ದಿ

'ದಿಯಾ' ನನಗೆ ಚಿತ್ರೋದ್ಯಮದಲ್ಲಿ ಒಂದು ಸ್ಥಾನವನ್ನು ನೀಡಿದೆ: ನಿರ್ದೇಶಕ ಕೆ.ಎಸ್.ಅಶೋಕ್

Raghavendra Adiga

ಕನ್ನಡ  ಚಿತ್ರ "ದಿಯಾ" ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರಆಗಿ ಜನಮೆಚ್ಚುಗೆ ಗಳಿಸಿದ ಬಳಿಕ ನಿರ್ದೇಶಕ ಕೆ ಎಸ್ ಅಶೋಕ್ ಅವರ ಮುಂದಿನ ಯೋಜನೆಗಳ ಬಗ್ಗೆ ತಿಳಿಯಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.

"ಹಾರರ್ ಥ್ರಿಲ್ಲರ್  6-5 = 2 ರ ನಂತರ, ಬಂದ ಲವ್ ಥ್ರಿಲ್ಲರ್ ದಿಯಾ ನಂತರ, ನನ್ನ ಮುಂದಿನ ಮತ್ತು ಮೂರನೆಯ ಯೋಜನೆ ಸೈಕೋ ಥ್ರಿಲ್ಲರ್ ಆಗಿರಲಿದೆ".ನಿರ್ದೇಶಕ ಬಹಿರಂಗಪಡಿಸಿದ್ದಾರೆ. ಇದಕ್ಕಾಗಿ ನಿರ್ದೇಶ ಇದೀಗ ಕಥೆಯನ್ನು ಸಿದ್ದಗೊಳಿಸುತ್ತಿದ್ದಾರೆ. “ನಾನು ವೈಯಕ್ತಿಕವಾಗಿ ಸೀರಿಯಲ್ ಕಿಲ್ಲರ್  ಕಥೆಗಳ ದೊಡ್ಡ ಅಭಿಮಾನಿ. ಇದು ಚಲನಚಿತ್ರ ನಿರ್ಮಾಪಕರು ಹೆಚ್ಚು ಬಳಸದ ಒಂದು ಪ್ರಕಾರವಾಗಿದೆ.ನನ್ನ ಎಂದಿಗೂ ಮರೆಯದ ಚಿತ್ರ ಕೊರಿಯನ್ ಲನಚಿತ್ರ, ಮೆಮೊರೀಸ್ ಆಫ್ ಮರ್ಡರ್-ಪ್ಯಾರಾಸೈಟ್ ನಿರ್ದೇಶಕ ಬಾಂಗ್ ಜೂಹ್-ಹೋ ಅವರ ಕ್ರೈಂ ಥ್ರಿಲ್ಲರ್ ಡ್ರಾಮಾ ಆಗಿದೆ. 

"ನಾನು ನೋಡಲೇಬೇಕಾದ ಚಿತ್ರದ ಲಿಸ್ಟ್ ನಲ್ಲಿ ನಿಗೂಢ ಥ್ರಿಲ್ಲರ್ ಕಥಾನಕ ಜ್ಯೂಡಿಕ್ ಸಹ ಸೇರಿದೆ. ಇದು ನಿಜ ಜೀವನದ ಘಟನೆಗಳನ್ನು ಆಧರಿಸಿದೆ ಮತ್ತು ಚಲನಚಿತ್ರ ಗಳಲ್ಲಿ ತೋರಿಸಲಾಗಿರುವ  ಅದ್ಭುತ ಏಳು ಸಂಗತಿಗಳಲ್ಲಿ ಒಂದಾಗಿದೆ. ಇದ;ಲ್ಲದೆ ತಮಿಳಿನ ಸೈಕಾಲಜಿಕಲ್ ಕ್ರೈಂ ಥ್ರಿಲ್ಲರ್ ರತ್ಸಾಸನ್ ಸಹ ನನಗಿಷ್ಟ. ಅಂತಹ ಚಲನಚಿತ್ರಗಳಿಗೆ ಸಾಕಷ್ಟು ಹೋಮ್ ವರ್ಕ್ ಬೇಕು,. ನಾವು ಸರಿಯಾದ ಸಂಗತಿಗಳನ್ನು ಸಂಗ್ರಹಿಹಿಸಬೇಕಿದೆ. ಪರಿಕಲ್ಪನೆಯ ಯಿಂದ ತೊಡಗಿ ಅದಕ್ಕೆ ಸಿನಿಮೀಯ ಅನುಭವವನ್ನು ನೀಡುವುದು ಹೇಗೆ ಎಂಬ ಯೋಜನೆ ಹಳ ಮುಖ್ಯ. ಇವೆಲ್ಲವೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ”ಎಂದು ಅವರು ಹೇಳುತ್ತಾರೆ.

ಫೆಬ್ರವರಿ 7 ರಂದು ದಿಯಾ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಟಿಟಿ ಪ್ಲಾಟ್‌ಫಾರ್ಮ್ನಲ್ಲಿ ಬಿಡುಗಡೆಯಾದ ಎರಡು ತಿಂಗಳ ನಂತರ, ನಿರ್ದೇಶಕ ಹಾಗೂ ನಿರ್ಮಾಪಕರು ಜನರ ಮೆಚ್ಚುಗೆಯಿಂಡ ಖುಷಿಯಾಗಿದ್ದಾರೆ. ಚಿತ್ರದ ನಿರ್ಮಾಪಕರು ನಿರ್ದೇಶಕರೊಡನೆ ಇನ್ನೊಂದು ಯೋಜನೆ ಮಾಡಲು ಉತ್ಸುಕರಾಗಿದ್ದಾರೆ. 

“ಕೆಲವು ದಿನಗಳ ಹಿಂದೆ, ನಟ ಪೃಥ್ವಿ ಅಂಬರ್, ಸಂಗೀತ ನಿರ್ದೇಶಕ, ಅಜನೀಶ್ ಲೋಕನಾಥ್ ಮತ್ತು ನಾನು ಪುನೀತ್ ರಾಜ್‌ಕುಮಾರ್ ಅವರಿಂದ ಕರೆ ಸ್ವೀಕರಿಸಿದ್ದೆವು. ಅವರು ನಮ್ಮ ಬಗ್ಗೆ ಒಂದಷ್ಟು ಕೆಲ ಒಳ್ಳೆ ಮಾತುಗಳನ್ನು ಹೇಳಿದ್ದರು. ನನ್ನ ಕೆಲಸ ಮತ್ತು ಚಲನಚಿತ್ರದ ಬಗ್ಗೆ  ಅವರು ಮೆಚ್ಚುಗೆ ಮಾತನ್ನು ಹೇಳಿದಾಗ ನನಗೆ ಸಂತಸವಾಗಿತ್ತು. ಪಿಆರ್ ಕೆ ಪ್ರೊಡಕ್ಷನ್ಸ್ ಎಂಬ ಬ್ಯಾನರ್ ಅಡಿಯಲ್ಲಿ ಕೆಲಸ ಮಾಡಲು ಅವರು ನನಗೆ ಅವಕಾಶ ನೀಡಿದ್ದಾರೆ ”ಎಂದು  ಅಶೋಕ್ ಹೇಳೀದ್ದಾರೆ. ತಮಿಳು ಹಿರಿಯ ಚಲನಚಿತ್ರ ನಿರ್ಮಾಪಕ ಪಿ ಭಾರತಿರಾಜ ಸಹ ಅಶೋಕ್ ಅವರಿಗೆ ಕರೆ ಮಾಡಿದ್ದಾರೆ."ನನ್ನನ್ನು ಅವರ ತಂಡವು ಫೇಸ್‌ಬುಕ್‌ನಲ್ಲಿ ಸಂಪರ್ಕಿಸಿದೆ ಮತ್ತು ಅದರ ನಂತ ಬಹು ಪ್ರಸಿದ್ದ ನಿರ್ಮಾಕರಿಂದ ಕರೆಗಳು ಬಂದಿದೆ.  ಪುಟ್ಟಣ್ಣ ಕಣಗಾಲ್ ಅವರ ಸ್ಥಾನದಲ್ಲಿರುವ ಅವರ ಬಾಯಿಯಿಂದ ಮೆಚ್ಚುಗೆ ಕೇಳಿದಾಗಲೂ ನಗೆ ತೃಪ್ತಿಯಾಯಿತು. ನಂತರ ನನ್ನ ಚಿತ್ರವನ್ನು ಮೆಚ್ಚಿದ ಸಾಲಾ ಖಾದೂಸ್ ಮತ್ತು ಇರುಧಿ ಸುಟ್ರು ಅವರ ನಿರ್ದೇಶಕರಾದ ಸುಧಾ ಕೊಂಗರಾ ಸಹ ನನಗೆ ಕರೆ ಮಾಡಿದ್ದರು. ಇವೆಲ್ಲವೂ ವಿವಿಧ ಮೂಲೆಗಳಿಂದ ನನಗೆ ಸಿಕ್ಕ ಪ್ರೋತ್ಸಾಹವಾಗಿದೆ."

ಇದಲ್ಲದೆ, ಅಶೋಕ ತೆಲುಗು ಫಿಲ್ಮ್ ಬ್ಯಾನರ್ ವೈಜಯಂತಿ ಮೂವೀಸ್ ಜೊತೆ ಮಾತುಕತೆ ನಡೆಸಿದ್ದು ಇದಾಗಲೇ ಈ ಬ್ಯಾನರ್ ಅಡಿಯಲ್ಲಿ  ಮಹರ್ಷಿ ಮತ್ತು ಶಕ್ತಿಯಂತಹ ಚಲನಚಿತ್ರಗಳು ಬಂದಿದೆ."ಆರಂಭಿಕ ಚರ್ಚೆ ನಡೆದಿದೆ, ಮತ್ತು ಅವರು ನನ್ನನ್ನು ಹೈದರಾಬಾದ್‌ಗೆ  ಬರಲು ಹೇಳಿದ್ದರು. ಆದರೆ ಲಾಕ್‌ಡೌನ್ ಪ್ರಾರಂಭಆಗಿ ಹೋಗಲಾಗಲಿಲ್ಲ ಎಂದು ಅಶೋಕ್ ಹೇಳಿದ್ದಾರೆ.

 ದಿಯಾ ನನಗೆ ಚಿತ್ರೋದ್ಯಮದಲ್ಲಿ ಒಂದು ಸ್ಥಾನವನ್ನು ನೀಡಿದೆ. ಇಂದು, ಕೆಎಸ್ ಅಶೋಕ್ ಎನ್ನುವ ನಿರ್ದೇಶಕನೊಬ್ಬನಿದ್ದಾನೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.  ಇದಲ್ಲದೆ, ಇಡೀ ಜಗತ್ತು ಚಿತ್ರವನ್ನು ವೀಕ್ಷಿಸಿದೆ ಮತ್ತು ಅದರ ಕಲಾತ್ಮಕ ಅಂಶಗಳ ಬಗ್ಗೆ ಮಾತನಾಡಿದೆ  ಎಂದು ಹೇಳಲು ಸಂತಸವಾಗುತ್ತದೆ. ರಿಮೇಕ್ ಹಕ್ಕುಗಳಿಗಾಗಿ ನಿರ್ಮಾಪಕ ಕೃಷ್ಣ ಚೈತನ್ಯ ಇನ್ನೂ ವಿವಿಧ ಭಾಷೆಗಳ ನಿರ್ಮಾಪಕರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. 

SCROLL FOR NEXT