ಸಿನಿಮಾ ಸುದ್ದಿ

ಹೊಸ ಇತಿಹಾಸ ಬರೆಯ ಹೊರಟ ಪಿಆರ್​ಕೆ ಪ್ರೊಡಕ್ಷನ್: ಒಟಿಟಿಯಲ್ಲಿ 2 ಚಲನಚಿತ್ರಗಳ ಬಿಡುಗಡೆಗೆ ತಯಾರಿ

ಸ್ಯಾಂಡಲ್ ವುಡ್ ಇದೀಗ ಹೊಸ ದಾಖಲೆಯೊಂದಕ್ಕೆ ಸಿದ್ದವಾಗುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಡೆತನದ ಪಿಆರ್​ಕೆ ಪ್ರೊಡಕ್ಷನ್ಸ್ ಸಂಸ್ಥೆಯಲ್ಲಿ ನಿರ್ಮಾಣವಾದ ಎರಡು ಚಲನಚಿತ್ರಗಳನ್ನು ನೇರವಾಗಿ ಒಟಿಟಿ ಪ್ಲಾಟ್ ಫಾರಂಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ. 

ಸ್ಯಾಂಡಲ್ ವುಡ್ ಇದೀಗ ಹೊಸ ದಾಖಲೆಯೊಂದಕ್ಕೆ ಸಿದ್ದವಾಗುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಡೆತನದ ಪಿಆರ್​ಕೆ ಪ್ರೊಡಕ್ಷನ್ಸ್ ಸಂಸ್ಥೆಯಲ್ಲಿ ನಿರ್ಮಾಣವಾದ ಎರಡು ಚಲನಚಿತ್ರಗಳನ್ನು ನೇರವಾಗಿ ಒಟಿಟಿ ಪ್ಲಾಟ್ ಫಾರಂಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ. 

ಕೊರೋನಾವೈರಸ್ ಹಾವಳಿ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಜನರು ಮನೆಯಿಂದ ಹೊರಬಂದು ಚಿತ್ರಮಂದಿರಗಳತ್ತ ಮುಖಮಾಡುವುದು ಸಧ್ಯಕ್ಕಂತೂ ಅಸಾಧ್ಯವೇನೋ ಎಂಬಂತಾಗಿದ್ದು ಇದಕ್ಕೆ ಪರಿಹಾರವಾಗಿ ನಿರ್ಮಾಣ ಸಂಸ್ಥೆಗಳು ಆನ್​ಲೈನ್‌ ಪ್ಲಾಟ್​ಫಾರ್ಮ್​ಗಳ ಮೊರೆ ಹೋಕ್ಕಿದೆ.  ತಮಿಳು, ಹಿಂದಿ ಸೇರಿ ಎಲ್ಲಾ ಭಾಷೆಗಳಲ್ಲಿ ಚಿತ್ರಗಳು ನೇರವಾಗಿ ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ತೆರೆ ಕಾಣಲು ಸಿದ್ದತೆ ನಡೆದಿದೆ. ಅಂತೆಯೇ ಕನ್ನಡದಲ್ಲಿ ಪಿಆರ್​ಕೆ ಸಂಸ್ಥೆ ಈ ಸಾಹಸಕ್ಕೆ ಸಿದ್ದವಾಗಿದೆ.

ಡ್ಯಾನೀಶ್ ಸೇಥ್ ಅಭಿನಯದ ’ಫ್ರೆಂಚ್ ಬಿರಿಯಾನಿ’ ಹಾಗೂ ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಅಭಿನಯದ ಲಾ’ಚಿತ್ರಗಳು ನೇರವಾಗಿ ಅಮೇಜಾನ್​ನಲ್ಲಿ ಬಿಡುಗಡೆಯಾಗಲಿದೆ. ಜೂನ್ 26ಕ್ಕೆ "ಲಾ" ಹಾಗೂ ಜುಲೈ 24ಕ್ಕೆ "ಫ್ರೆಂಚ್ ಬಿರಿಯಾನಿ" ಚಿತ್ರಗಳಲ್ಲಿ ಒಟಿಟಿ ಮೂಲಕ ಬಿಡುಗಡೆ ಮಾಡುವುದಾಗಿ ನಿರ್ಮಾಣ ಸಂಸ್ಥೆ ಟ್ವೀಟ್ ಮೂಲಕ ಘೋಷಿಸಿದೆ. ಇದರೊಡನೆ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಆನ್​​​ಲೈನ್ ವೇದಿಕೆ ಮುಖಾಂತರ ಚಿತ್ರ ಬಿಡುಗಡೆ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT