ರಚಿತಾ ರಾಮ್ 
ಸಿನಿಮಾ ಸುದ್ದಿ

'ಲಿಲ್ಲಿ'ಯಾಗಿ ತೆರೆಮೇಲೆ ಬರಲು ಬುಲ್ ಬುಲ್ ಬೆಡಗಿ ರಚಿತಾ ರಾಮ್ ಸಿದ್ಧ!

ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ "ಲಿಲ್ಲಿ" ಆಗಲು ಹೊರಟಿದ್ದಾರೆ. ನಿರ್ದೇಶಕ ವಿಜಯ್ ಎಸ್ ಗೌಡ ಈ ವಿಚಾರ ಸ್ಪಷ್ಟಪಡಿಸಿದ್ದು ಅವರು ಸೈಕಲಾಜಿಕಲ್ ಮಿಸ್ಟ್ರಿ ಥ್ರಿಲ್ಲರ್  ಮೂಲಕ ನಿರ್ದೇಶಕ ಪಟ್ಟವನ್ನಲಂಕರಿಸಲು ಸಿದ್ದವಾಗುತ್ತಿದ್ದಾರೆ. 

ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ "ಲಿಲ್ಲಿ" ಆಗಲು ಹೊರಟಿದ್ದಾರೆ. ನಿರ್ದೇಶಕ ವಿಜಯ್ ಎಸ್ ಗೌಡ ಈ ವಿಚಾರ ಸ್ಪಷ್ಟಪಡಿಸಿದ್ದು ಅವರು ಸೈಕಲಾಜಿಕಲ್ ಮಿಸ್ಟ್ರಿ ಥ್ರಿಲ್ಲರ್  ಮೂಲಕ ನಿರ್ದೇಶಕ ಪಟ್ಟವನ್ನಲಂಕರಿಸಲು ಸಿದ್ದವಾಗುತ್ತಿದ್ದಾರೆ. 

:ಲಿಲ್ಲ್" ಚಿತ್ರದ ಅಭಿನಯಿಸಲು ರಚಿತಾ ರಾಮ್ ಒಪ್ಪಿದ್ದಾರೆ ಎಂದು ಹೇಳಿರುವ ನಿರ್ದೇಶಕ ರಾಜ್ ಫಿಲ್ಮ್ಸ್ ಮತ್ತು ಬೌನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಲಿಲ್ಲಿಯನ್ನು ನಾಗರಾಜ್ ಮತ್ತು ಸುಬ್ರಮಣಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. . ಕಥೆ, ಚಿತ್ರಕಥೆ ವಿಜಯ್ ಅವರದಾಗಿದ್ದು "ಯುವ ಪೀಳಿಗೆಗೆ ಸಂಬಂಧಿಸಿದ ಸಾಮಾಜಿಕ ಸಮಸ್ಯೆಗಳು ಮತ್ತು ಮಕ್ಕಳ ನಿರ್ಲಕ್ಷ್ಯ ಮತ್ತು ಮಕ್ಕಳ ಮೇಲೆ ತಂತ್ರಜ್ಞಾನದ ಪರಿಣಾಮದ ಬಗ್ಗೆ ಬೆಳಕು ಚೆಲ್ಲುವ ಈ ವಿಷಯ ಸ್ಯಾಂಡಲ್ ವುಡ್ ನಲ್ಲಿ ಹಿಂದೆಂದೂ ಬಂದಿರಲಿಲ್ಲ" ಎಂದಿದ್ದಾರೆ.

ಎನ್‌ಆರ್‌ಐ ಮನಶ್ಶಾಸ್ತ್ರಜ್ಞ ಡಾ.ಮಹಿ ಪಾತ್ರದಲ್ಲಿ ರಚಿತಾ ನಟಿಸಲಿದ್ದಾರೆ.ಇದು ಒಂದು ಆಸಕ್ತಿದಾಯಕ ಪಾತ್ರವಾಗಿದೆ. ಅಷ್ಟೇ ಅಲ್ಲದೆ ಮಹಿಳಾ ಕೇಂದ್ರಿತ ಚಿತ್ರವೊಂದರಲ್ಲಿ ರಚಿತಾ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಚಿತ್ರದ ಶೂಟಿಂಗ್ ನಡೆವ ಸ್ಥಳದ ಕುರಿತಂತೆ ಸಹ ನಿರ್ದೇಶಕರು ಇದಾಗಲೇ ತೀರ್ಮಾನ ತೆಗೆದುಕೊಂಡಿದ್ದಾರೆ.

ಕಲಾ ನಿರ್ದೇಶಕ ಸತೀಶ್ ರಚಿಸಿದ ಸೆಟ್ ನಲ್ಲಿ ಮೊದಲು ಶೂಟಿಂಗ್ ನಡೆಯಲಿದೆ. ಏತನ್ಮಧ್ಯೆ ನಟಿ ರಚಿತಾ ರಾಮ್ "100" ಚೊತ್ರದ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ ಪ್ರೇಮ್ ಅವರ ಏಕ್ ಲವ್ ಯಾ ಚಿತ್ರದ ಎರಡು ಹಾಡಿನ ಚಿತ್ರೀಕರಣವನ್ನೂ ಮುಗಿಸಬೇಕಿದೆ. "ನಾವು ಶೆಡ್ಯೂಲ್ ಪ್ರಕಾರ ಕೆಲಸ ಮಾಡುತ್ತಿದ್ದೇವೆ ಮತ್ತು ಅದನ್ನು ಒಂದೇ ಟೇಕ್ ನಲ್ಲಿ  ಚಿತ್ರೀಕರಿಸಲು ಯೋಜಿಸಿದ್ದೇವೆ. ದಿನಾಂಕಗಳನ್ನು ಅಂತಿಮಗೊಳಿಸಲಾಗುತ್ತಿದೆ"ವಿಜಯ್ ಹೇಳುತ್ತಾರೆ.

"ಲಿಲ್ಲಿ" ತಂಡದಲ್ಲಿ ರಂಗಿತರಂಗ ಖ್ಯಾತಿಯ  ಛಾಯಾಗ್ರಾಹಕ ವಿಲಿಯಂ ಡೇವಿಡ್ ಮತ್ತು ಗೋಧಿ ಬಣ್ಣ ಸಾಧಾರಣ ಮೈಕಟ್ಟು  ಹಾಗೂ ಬೀರ್ ಬಲ್  ಚಿತ್ರಗಳಲ್ಲಿ ಕೆಲಸ ಮಾಡಿದ  ಎಡಿಟರ್ ಶ್ರೀಕಾಂತ್ ಶ್ರಾಫ್ ಸೇರಿದ್ದಾರೆ. ಚಿತ್ರಕ್ಕೆ ವೀರೇಶ್ ಎಸ್ ಗೌಡ ಸಂಗೀತವಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!