ಕೊರೋನಾ ವೈರಸ್ ಚಿತ್ರದ ಟ್ರೈಲರ್ 
ಸಿನಿಮಾ ಸುದ್ದಿ

ಲಾಕ್ ಡೌನ್ ನಡುವೆಯೇ ಕೊರೋನಾ ವೈರಸ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ರಾಮ್ ಗೋಪಾಲ್ ವರ್ಮಾ

ಬಾಲಿವುಡ್ ನ ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಕೊರೋನಾ ವೈರಸ್ ಕುರಿತಂತೆ ಚಿತ್ರ ತಯಾರಿಸುತ್ತಿದ್ದು, ಈ ಸಂಬಂಧ ಇಂದು ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.

ಮುಂಬೈ: ಬಾಲಿವುಡ್ ನ ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಕೊರೋನಾ ವೈರಸ್ ಕುರಿತಂತೆ ಚಿತ್ರ ತಯಾರಿಸುತ್ತಿದ್ದು, ಈ ಸಂಬಂಧ ಇಂದು ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.

ಹೌದು..ಕೊರೊನಾ ವೈರಸ್ ಸಾಂಕ್ರಾಮಿಕವು ಜನರನ್ನು ಹೈರಾಣಾಗಿಸಿದೆ. ಸತತ ಲಾಕ್ ಡೌನ್ ಆರ್ಥಿಕ ಚಟುವಟಿಕಗಳ ಕುಸಿತ ಜನ ಜೀವನದ ಮೇಲೆ ಪರಿಣಾಮ ಬೀರಿದ್ದು, ಇದೇ ಕಥಾ ಹಂದರವಿರುವ ಚಿತ್ರವನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಯಾರಿಸುತ್ತಿದ್ದಾರೆ. ರಾಮ್  ಗೋಪಾಲ್ ವರ್ಮಾ ಈ ಸಾಂಕ್ರಾಮಿಕ ರೋಗದ ಬಗ್ಗೆ 'ಕೊರೊನಾ ವೈರಸ್' ಹೆಸರಿನ ಚಿತ್ರವೊಂದನ್ನು ಸಿದ್ಧಪಡಿಸುತ್ತಿದ್ದು, ಇಂದು ಅವರು ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.

ರಾಮ್‌ ಗೋಪಾಲ್ ವರ್ಮಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಿತ್ರದ ಟ್ರೈಲರ್ ಹಂಚಿಕೊಂಡಿದ್ದು, "ಕೊರೋನಾ ವೈರಸ್ ಚಿತ್ರದ ಟ್ರೈಲರ್ ಇಲ್ಲಿದೆ. ಈ ಕಥೆಯು ಲಾಕ್‌ಡೌನ್ ಹಿನ್ನೆಲೆಯದ್ದಾಗಿದ್ದು, ಮತ್ತು ಚಿತ್ರವನ್ನು ಲಾಕ್‌ಡೌನ್‌ ನಲ್ಲಿಯೇ ಚಿತ್ರೀಕರಿಸಲಾಗಿದೆ. ನಿಮ್ಮ ಕೆಲಸವನ್ನು ಯಾರೂ  ತಡೆಯಲು ಸಾಧ್ಯವಿಲ್ಲ ಎಂದು ನಾನು ಸಾಬೀತುಪಡಿಸಲು ಬಯಸಿದ್ದೆ,  ಹಾಗೇಯೇ ಟ್ರೈಲರ್ ಅನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಚಿತ್ರ ಒಂದು ಕುಟುಂಬದ ಕಥೆಯನ್ನು ಒಳಗೊಂಡಿದ್ದು, ಸುದ್ದಿಯಿಂದ ಹಿಡಿದು ಸಾಮಾಜಿಕ ಮಾಧ್ಯಮಗಳವರೆಗೆ ಕೊರೋನಾ  ಹೇಗೆ ಎಲ್ಲೆಡೆ ಆವರಿಸಿದೆ  ಎಂಬುದನ್ನು ನೋಡಬಹುದು ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು: ಡಿಎಂಕೆಗೆ SIR ಹೊಡೆತ: ಕರಡು ಮತದಾರರ ಪಟ್ಟಿಯಿಂದ 97 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಡಿಲೀಟ್!

ಬೇಡಿಕೆ ಈಡೇರಿದೆ, ನನ್ನ-ಸಿಎಂ ನಡುವೆ ಒಪ್ಪಂದವಾಗಿದೆ; ಹೈಕಮಾಂಡ್ ಅವರ ಪರ ಇರೋದ್ರಿಂದಲೇ ಅವರು ಸಿಎಂ: ಡಿ.ಕೆ ಶಿವಕುಮಾರ್

AQI ಏರಿಕೆಗೂ ಶ್ವಾಸಕೋಶ ಕಾಯಿಲೆಗೂ ಸಂಬಂಧವಿದೆ ಎನ್ನಲು ನಿರ್ಣಾಯಕ ದತ್ತಾಂಶವಿಲ್ಲ: ಕೇಂದ್ರ ಸರ್ಕಾರ

Load shedding In bangalore: ಡಿ.20 ರಂದು ನಗರದ ಈ ಏರಿಯಾಗಳಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೂ ವಿದ್ಯುತ್ ಕಡಿತ

ಅಮಿತ್ ಶಾ 'ನಾಲಾಯಕ್ ಹೋಮ್ ಮಿನಿಸ್ಟರ್' ಎಂದ ಪ್ರಿಯಾಂಕ್ ಖರ್ಗೆ! ಕ್ಷಮೆಗೆ ಪಟ್ಟು, ಬಿಜೆಪಿ ಪ್ರತಿಭಟನೆ

SCROLL FOR NEXT