ಸಿನಿಮಾ ಸುದ್ದಿ

ರಿಷಬ್ ಶೆಟ್ಟಿಯ 'ಪೆಡ್ರೋ'ಗೆ ಒಲಿದ ಅದೃಷ್ಟ: ಗೋಸ್ ಟು ಕೇನ್ಸ್ ಚಿತ್ರೋತ್ಸವಕ್ಕೆ ಆಯ್ಕೆ

Raghavendra Adiga

ಚಿತ್ರ ನಿರ್ಮಾಪಕ, ನಿರ್ದೇಶಕ, ನಟ ರಿಷಬ್ ಶೆಟ್ಟಿ ತಮ್ಮ ಹೋಂ ಬ್ಯಾನರ್  ರಿಷಬ್ ಶೆಟ್ಟಿ ಫಿಲ್ಮ್ಸ್ ಅಡಿಯಲ್ಲಿ "ಪೆಡ್ರೊ" ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಈ ಚಿತ್ರ ಪ್ರತಿಷ್ಠಿತ  ಗೋಸ್ ಟು ಕೇನ್ಸ್ ಗಾಗಿ (Goes to Cannes) ಆಯ್ಕೆಗೊಂಡಿದೆ.

ಈ ಖುಷಿಯ ವಿಚಾರವನ್ನು ತಮ್ಮ ಟ್ವೀಟ್ ಮೂಲಕ ಹಂಚಿಕೊಂಡಿರುವ ಶೆಟ್ತಿ "ಪೆಡ್ರೋ ನನ್ನ ಸ್ವಂತ ಬ್ಯಾನರ್ ನಲ್ಲಿ ತಯಾರಾದ ಚಿತ್ರ, ನಟೇಶ್ ಹೆಗ್ಡೆ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಭಡ್ತಿ ಪಡೆಯಲಿದ್ದಾರೆ. ಚಿತ್ರವು ಗೋಸ್ ಟು ಕೇನ್ಸ್ ಗಾಗಿ ಆಯ್ಕೆಯಾಗಿದ್ದು ಅದೊಂದು ವಿಶ್ವದ ಅತಿದೊಡ್ಡ ಚಲನಚಿತ್ರ ಮಾರುಕಟ್ಟೆಗಳಲ್ಲಿ ಒಂದಾಗಿದೆ ಮತ್ತು ಕೇನ್ಸ್ ಚಲನಚಿತ್ರೋತ್ಸವದ ಪ್ರತಿರೂಪವಾಗಿದೆ." ಎಂದಿದ್ದಾರೆ.

ಚಿತ್ರದ ಶೂಟಿಂಗ್ ಪೂರ್ಣವಾಗಿದೆ. . ಲಾಕ್‌ಡೌನ್‌ಗಾಗಿ ಇಲ್ಲದಿದ್ದರೆ, ಈ ವರ್ಷದ ಗೋಸ್ ಟು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಇದನ್ನು ಪ್ರದರ್ಶಿಸಲಾಗುತ್ತಿತ್ತು. ಇದನ್ನು ಈಗ 2021 ಕ್ಕೆ ಮುಂದೂಡಲಾಗಿದೆ ಎಂದು ರಿಷಬ್  ಹೇಳಿದ್ದಾರೆ.

ಫಿಲ್ಮ್ ಬಜಾರ್‌ನಲ್ಲಿ ಆಯ್ಕೆಯಾದ ಏಷ್ಯಾದ ಐದು ಚಿತ್ರಗಳಲ್ಲಿ ಪೆಡ್ರೊ ಕೂಡ ಸೇರಿದೆ. ಈಗ ಇದು ಗೋಸ್ ಟು ಕೇನ್ಸ್ ಗಾಗಿ ಆಯ್ಕೆಯಾದ 20 ಜಾಗತಿಕ ಚಲನಚಿತ್ರಗಳಲ್ಲಿ ಒಂದಾಗಿದೆ ಮತ್ತು ಸ್ಪರ್ಧೆಗೆ ನೇರವಾಗಿ ಆಯ್ಕೆಯಾದ ಮೊದಲ ಕನ್ನಡ ಚಿತ್ರವಿದು ಎನ್ನುವುದು ಹೆಮ್ಮೆಯ ಸಂಗತಿ. 

ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಚಿತ್ರಿತವಾಗಿರುವ ಈ ಸಿನಿಮಾ  ದೂರದ ಹಳ್ಳಿಯ ಮಧ್ಯವಯಸ್ಕ ಎಲೆಕ್ಟ್ರಿಷಿಯನ್ ಒಬ್ಬನ ಕಥೆ ಹೊಂದಿದೆ. ಆಕಸ್ಮಿಕವಾಗಿ ಆತನೆಸಗುವ ಒಂದು ಕೃತ್ಯಕ್ಕೆ ಅವನ ಹಳ್ಳಿಯ ಜನ ಯಾವ ಬಗೆಯ ಪ್ರತಿಕ್ರಿಯೆ ತೋರುತ್ತಾರೆ ಎನ್ನುವುದು ಕಥೆಯ ತಿರುಳಾಗಿರಲಿದೆ. 

SCROLL FOR NEXT