ಹಾಸ್ಯ, ಗಂಬೀರ, ಭಾವನಾತ್ಮಕ, ಪೋಷಕ ಪಾತ್ರ, ಆಕ್ಷನ್ - ಇನ್ನೂ ಯಾವುದೇ ರೀತಿಯ ಪಾತ್ರವಿದ್ದರೂ ತಮ್ಮದೇ ಮ್ಯಾನರಿಸಂ ಮೂಲಕ ನಗಿಸಿ ನಟಿಸುವ ನವರಸ ನಾಯಕ ಜಗ್ಗೇಶ್ ಅವರ ಕನ್ನಡ ಸಿನಿ ಪಯಣಕ್ಕೆ ಇಂದು ನಲವತ್ತು ವರ್ಷಗಳು ತುಂಬಿದೆ.
ಉಪೇಂದ್ರ ನಿರ್ದೇಶನದ "ತರ್ಲೆ ನನ್ ಮಗ" ಚಿತ್ರದ ಮೂಲಕ ನಾಯಕ ನಟನಾದ ಜಗ್ಗೇಶ್ ಅಲ್ಲಿಂದೀಚೆಗೆ ಹಿಂದಿರುಗಿ ನೋಡಿದ್ದೇ ಇಲ್ಲ.
ಕನ್ನಡ ಸಿನಿ ಪ್ರೇಮಿಗಳಿಗೆ ಹಾಸ್ಯರ ಹೊಸ ಲೋಕವನ್ನು ತೋರಿಸಿಕೊಟ್ಟ ಇತ್ತೀಚಿನ "ಪ್ರೀಮಿಯರ್ ಪದ್ಮಿನಿ" ಹಾಗೂ "ಕಾಳಿದಾಸ ಕನ್ನಡ ಮೇಷ್ಟ್ರು" ಸಾಕಷ್ಟು ಜನಮೆಚ್ಚುಗೆ ಗಳಿಸಿದ್ದವು.