ಸಿನಿಮಾ ಸುದ್ದಿ

ಪಟಾಕಿ ಹೊಡೆಯಬೇಡಿ, ಕ್ಯಾಲರೀಸ್ ಬರ್ನ್ ಮಾಡಿ : ಪುನೀತ್ ರಾಜ್ ಕುಮಾರ್ ದೀಪಾವಳಿ ಸಂದೇಶ

Raghavendra Adiga

ದೀಪಾವಳಿಗೆ ಪಟಾಕಿ ಹೊಡೆಯಬೇಡಿ, ಕ್ಯಾಲರೀಸ್ ಬರ್ನ್ ಮಾಡಿ ಎಂದು ಸ್ಯಾಂಡಲ್ ವುಡ್ ದೊಡ್ಮನೆ ಹುಡುಗ ಪುನೀತ್ ರಾಜ್ ಸಂದೇಶ ರವಾನಿಸಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್, ಸಮಸ್ತ ನಾಡಿನ ಜನತೆಗೆ ಹಾಡಿನ ಮೂಲಕ ದೀಪಾವಳಿಯ ಶುಭಾಷಯ ತಿಳಿಸಿದ್ದಾರೆ.

ದೀಪಾವಳಿಯಂದು ಟ್ವಿಟ್ತರ್ ನಲ್ಲಿ ವಿಡಿಯೋ ಮೂಲಕ ಶುಭ ಕೋರಿದ ಪವರ್ ಸ್ಟಾರ್ ಪುನೀತ್ ಡಾ. ರಾಜ್ ಹಾಡಿದ್ದ "ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ ಹಾಡನ್ನು ಗುನುಗಿದ್ದಾರೆ,

ಇದಲ್ಲದೆ ದೀಪಾವಳಿಯಂದು ಯಾರೂ ಪಟಾಕಿ ಹಚ್ಚೋದು ಬೇಡ, ನಮ್ಮಲ್ಲಿರೋ ಕ್ಯಾಲೋರಿ ಸುಟ್ಟುಬಿಡಿ, ಅಕ್ಕಪಕ್ಕದಲ್ಲಿದ್ದವರಿಗೆ ಸಾಧ್ಯವಾದಷ್ಟು ಸಹಾಯ ಮಾಡಿ, ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂದಿದ್ದಾರೆ.

SCROLL FOR NEXT