ನಿರ್ದೇಶಕ ಮಂಸೋರೆ 
ಸಿನಿಮಾ ಸುದ್ದಿ

‘ಆಕ್ಟ್ 1978’ರಲ್ಲಿ ಅನುಭವಿ ಸ್ಟಾರ್ ನಟ-ನಟಿಯರ ದೊಡ್ಡ ತಾರಾದಂಡು

ಸ್ಯಾಂಡಲ್ವುಡ್ ಅಂಗಳದಲ್ಲಿ ಭಾರೀ ಸದ್ಧು ಮಾಡುತ್ತಿರೋ, ಸುದ್ದಿಯಲ್ಲಿರೋ ಚಿತ್ರ ಮಂಸೋರೆ ನಿರ್ದೇಶನದ ‘ಆಕ್ಟ್ 1978’. ಒಂದು ಕಡೆ ಚಿತ್ರದ ಕಥಾಹಂದರ ಕುತೂಹಲ ಹುಟ್ಟುಹಾಕಿದ್ರೆ ಇನ್ನೊಂದು ಕಡೆ ಚಿತ್ರದ ತಾರಾಬಳಗ ಕೂಡ ಸಖತ್ ಸದ್ಧು ಮಾಡ್ತಿದೆ. 

ಸ್ಯಾಂಡಲ್ವುಡ್ ಅಂಗಳದಲ್ಲಿ ಭಾರೀ ಸದ್ಧು ಮಾಡುತ್ತಿರೋ, ಸುದ್ದಿಯಲ್ಲಿರೋ ಚಿತ್ರ ಮಂಸೋರೆ ನಿರ್ದೇಶನದ ‘ಆಕ್ಟ್ 1978’. ಒಂದು ಕಡೆ ಚಿತ್ರದ ಕಥಾಹಂದರ ಕುತೂಹಲ ಹುಟ್ಟುಹಾಕಿದ್ರೆ ಇನ್ನೊಂದು ಕಡೆ ಚಿತ್ರದ ತಾರಾಬಳಗ ಕೂಡ ಸಖತ್ ಸದ್ಧು ಮಾಡ್ತಿದೆ. 

ಯಜ್ಞಾ ಶೆಟ್ಟಿ

ಹೌದು, ‘ಆಕ್ಟ್ 1978’ ಚಿತ್ರದಲ್ಲಿ ಅತಿ ದೊಡ್ಡ ಅನುಭವಿ ಸ್ಟಾರ್ ನಟ-ನಟಿಯರ ತಾರಾ ದಂಡೇ ಇದೇ. ಯಜ್ಞಾ ಶೆಟ್ಟಿ, ದತ್ತಣ್ಣ, ಬಿ.ಸುರೇಶ್, ಅವಿನಾಶ್, ಶ್ರುತಿ, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಸಂಚಾರಿ ವಿಜಯ್, ಶೋಭರಾಜ್, ಸಂಪತ್ ಕುಮಾರ್, ಪ್ರಮೋದ್ ಶೆಟ್ಟಿ, ಶರಣ್ಯ ಸೇರಿದಂತೆ ನಟನೆಯ ಮೂಲಕವೇ ಚಿತ್ರರಂಗದಲ್ಲಿ ಅಚ್ಚೊತ್ತಿರೋ ಇಪ್ಪತ್ತಕ್ಕೂ ಹೆಚ್ಚು ಅನುಭವಿ ಕಲಾವಿದರ ದೊಡ್ಡ ದಂಡೇ ಈ ಚಿತ್ರದಲ್ಲಿದೆ. 

ಇದೂ ಕೂಡ ‘ಆಕ್ಟ್ 1978’ ಚಿತ್ರದ ಮೇಲಿನ ಸಿನಿರಸಿಕರ ಕುತೂಹಲ ಹೆಚ್ಚಾಗಲು ಮತ್ತೊಂದು ಕಾರಣ. ದೇವರಾಜ್. ಆರ್ ನಿರ್ಮಿಸಿರೋ ಈ ಚಿತ್ರಕ್ಕೆ ಖ್ಯಾತ ಕ್ಯಾಮೆರಾ ನಿರ್ದೇಶಕ ಸತ್ಯ ಹೆಗ್ಡೆ ಕ್ಯಾಮೆರಾ ಕೈಚಳವಿದೆ. 

ಯಜ್ಞಾ ಶೆಟ್ಟಿ, ಶ್ರುತಿ, ಶರಣ್ಯ

‘ಆಕ್ಟ್1978’ ಸೋಶಿಯಲ್ ಥ್ರಿಲ್ಲರ್ ಸಿನಿಮಾವಾಗಿದ್ದು ಚಿತ್ರಕ್ಕೆ ಪೂರಕವಾಗುವಂತಾ ಸಂಗೀತವನ್ನು ರೋನಡ ಬಕ್ಕೇಶ್, ರಾಹುಲ್ ಶಿವಕುಮಾರ್ ನೀಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಕೂಡ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿವೆ. 

ಸೆನ್ಸಾರ್ ಅಂಗಳದಲ್ಲಿ ‘ಯು’ ಸರ್ಟಿಫಿಕೇಟ್ ಪಡೆದಿರೋ ಈ ಚಿತ್ರ ಸದ್ಯದಲ್ಲಿ ಬಿಡುಗಡೆ ಭಾಗ್ಯವನ್ನು ಕಾಣಲು ಸಿದ್ದವಾಗಿದೆ. 

ಅವಿನಾಶ್, ಬಾಲಾ ರಾಜ್ವಾಡಿ, ಬಿ.ಸುರೇಶ್, ದತ್ತಣ್ಣ

ಚಿತ್ರದ ತುಣುಕುಗಳ ಬಗ್ಗೆ ಎಲ್ಲೆಡೆ ಕೇಳಿ ಬರ್ತಿರೋ ಉತ್ತಮ ಪ್ರತಿಕ್ರಿಯೆ ಹಾಗೂ ಬೆಂಬಲ ಕೇಳಿ ನಿರ್ದೇಶಕ ಮಂಸೋರೆ ಖುಷಿಯಾಗಿದ್ದು, ಸಿನಿಮಾ ಕೂಡ ಇನ್ನಷ್ಟು ಮನರಂಜನೆ ನೀಡಲಿದೆ ಎಂದು ಭರವಸೆ ನೀಡಿದ್ದಾರೆ. 

ಟೈಟಲ್, ಪೋಸ್ಟರ್, ಟ್ರೈಲರ್ ಹೀಗೆ ಪ್ರತಿಯೊಂದು ಅಂಶಗಳು ‘ಆಕ್ಟ್ 1978’ ಚಿತ್ರದ ಮೇಲಿನ ಎಲ್ಲರ ಗಮನ ಹೆಚ್ಚು ಮಾಡಿದ್ದು, ಚಿತ್ರದಲ್ಲೇನಿದೆ, ನಿರ್ದೇಶಕರು ಹೇಳ ಹೊರಟಿರೋದೇನು ಎಂಬ ಚಿತ್ರಪ್ರೇಮಿಗಳ ಪ್ರಶ್ನೆಗೆ ನವೆಂಬರ್ 20ಕ್ಕೆ ಉತ್ತರ ಸಿಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT