ಇಂದ್ರಜಿತ್ ಲಂಕೇಶ್ 
ಸಿನಿಮಾ ಸುದ್ದಿ

ಡ್ರಗ್ಸ್ ಕೇಸ್ ಬಳಿಕ ಸೆಲೆಬ್ರಿಟಿಗಳು ಅಗತ್ಯ ಪಾಠಗಳನ್ನು ಕಲಿಯುತ್ತಿದ್ದಾರೆ: ಇಂದ್ರಜಿತ್ ಲಂಕೇಶ್

ಸ್ಯಾಂಡಲ್'ವುಡ್ ನಟ-ನಟಿಯರಿಗೆ ಡ್ರಗ್ಸ್ ನಂಟಿರುವ ಬಗ್ಗೆ ತಿಳಿಯುತ್ತಿದ್ದಂತೆಯೇ ಸಾಕಷ್ಟು ನೋವಾಗಿತ್ತು. ಹೀಗಾಗಿ ಈ ಬಗ್ಗೆ ಮಾತನಾಡಲು ನಿರ್ಧರಿಸಿದ್ದೆ. ಚಿತ್ರೀಕರಣ ವೇಳೆ ಕೆಲ ನಟ-ನಟಿಯರು ಮತ್ತಿನಲ್ಲಿಯೇ ಬರುತ್ತಿದ್ದರು. ಆದರೆ, ಈ ಬಗ್ಗೆ ಚಿತ್ರಮಂಡಳಿಯ ಯಾವೊಬ್ಬರೂ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿರಲಿಲ್ಲ ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದಾರೆ. 

ಸ್ಯಾಂಡಲ್'ವುಡ್ ನಟ-ನಟಿಯರಿಗೆ ಡ್ರಗ್ಸ್ ನಂಟಿರುವ ಬಗ್ಗೆ ತಿಳಿಯುತ್ತಿದ್ದಂತೆಯೇ ಸಾಕಷ್ಟು ನೋವಾಗಿತ್ತು. ಹೀಗಾಗಿ ಈ ಬಗ್ಗೆ ಮಾತನಾಡಲು ನಿರ್ಧರಿಸಿದ್ದೆ. ಚಿತ್ರೀಕರಣ ವೇಳೆ ಕೆಲ ನಟ-ನಟಿಯರು ಮತ್ತಿನಲ್ಲಿಯೇ ಬರುತ್ತಿದ್ದರು. ಆದರೆ, ಈ ಬಗ್ಗೆ ಚಿತ್ರಮಂಡಳಿಯ ಯಾವೊಬ್ಬರೂ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿರಲಿಲ್ಲ ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದಾರೆ. 

ಚಿತ್ರರಂಗದಲ್ಲಿ ಇಂತಹ ಬೆಳವಣಿಗೆಗಳು ನಿಲ್ಲಬೇಕು. ಎಲ್ಲರಿಗೂ ಈ ಪ್ರಕರಣ ಎಚ್ಚರಿಕೆ ಗಂಟೆಯಾಗಬೇಕೆಂದು ನಿರ್ಧರಿಸಿದ್ದೆ. ಇದೀಗ ಕಲಾವಿದರಿಗೆ ತಲುಪುತ್ತಿರುವ ಸಂದೇಶಗಳು ನನಗೆ ತೃಪ್ತಿ ತಂದಿದೆ. ಸಾಕಷ್ಟು ಯುವಕ ಹಾಗೂ ಯುವತಿಯರು ಚಿತ್ರರಂಗ ನಾಯಕ-ನಾಯಕಿಯರನ್ನು ತಮ್ಮ ರೋಲ್ ಮಾಡೆಲ್ ಗಳೆಂದು ತಿಳಿದಿರುತ್ತಾರೆ. ಇಂತಹ ಘಟನೆಗಳು ಅವರನ್ನು ತಪ್ಪಿ ಹಾದಿಗೆಳೆಯುವಂತೆ ಮಾಡಬಾರದು. ಕನ್ನಡ ಚಿತ್ರ ಹಾಗೂ ಭಾಷೆಯನ್ನು ಉಳಿಸಲು ನಮ್ಮ ಹಿರಿಯರು ಸಾಕಷ್ಟು ಶ್ರಮಪಟ್ಟಿದ್ದಾರೆ. ಆದರೆ, ಇತ್ತೀಚಿನ ಚಿತ್ರರಂಗಕ್ಕೆ ಕಾಲಿಡುತ್ತಿರುವ 3ನೇ ತಲೆಮಾರಿನ ಜನರು ಹಾಗೂ ಹೊರಗಿನಿಂದ ಬರುತ್ತಿರುವವರು ಅದನ್ನು ಹಾಳು ಮಾಡುತ್ತಿದ್ದಾರೆ. ಭಾಷೆಯ ಇತಿಹಾಸ ಹಾಗೂ ಅದರ ಪ್ರಾಮುಖ್ಯತೆ ಕೂಡ ಅವರಿಗೆ ತಿಳಿದಿಲ್ಲ. ಚಿತ್ರರಂಗಕ್ಕೆ ಇಂತಹವರಿಂದ ಕೆಟ್ಟ ಹೆಸರು ಬರುತ್ತಿದೆ ಎಂದು ತಿಳಿಸಿದ್ದಾರೆ. 

ಡ್ರಗ್ಸ್ ಕೇಸ್ ನಲ್ಲಿ ಕೇವಲ ನಟಿಯರ ಹೆಸರುಗಳೇ ಏಕೆ ಕೇಳಿಬರುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಇಂದ್ರಜಿತ್ ಅವರು, ವಿಚಾರಣೆ ವೇಳೆ ನಾನು ನಟ ಹಾಗೂ ನಟಿಯರ ಹೆಸರನ್ನು ನೀಡಿದ್ದೇನೆ. ಡ್ರಗ್ಸ್ ಕೇಸ್ ನಲ್ಲಿ ಕೇವಲ ಕಲಾವಿದರಷ್ಟೇ ಅಲ್ಲ, ರಾಜಕೀಯ ನಾಯಕರ ಮಕ್ಕಳು, ಇವೆಂಟ್ ಮ್ಯಾನೇಜರ್ ಗಳು, ಮಾಡೆಲ್ ಗಳೂ ಕೂಡ ಭಾಗಿಯಾಗಿದ್ದಾರೆ. ಎಲ್ಲರ ಹೆಸರನ್ನೂ ನಾನು ಪೊಲೀಸರಿಗೆ ಹೇಳಿದ್ದಾರೆ. ಆದರೆ, ಅವರಿಗೆ ಸಾಕ್ಷ್ಯಾಧಾರಗಳು ಸಿಗದ ಕಾರಣ ಬಂಧಿಸುತ್ತಿಲ್ಲ. ಪೊಲೀಸರಿಗಿಂದ ಆರೋಪಿಗಳು ಸ್ಮಾರ್ಟ್ ಆಗಿರುವಂತಿದೆ ಎಂದಿದ್ದಾರೆ. 

ಡ್ರಗ್ಸ್ ಕೇಸ್ ನಲ್ಲಿ ಕಲಾವಿದರ ಹೆಸರು ಬಹಿರಂಗಪಡಿಸಿದ್ದರಿಂದ ಚಿತ್ರರಂಗದಲ್ಲಿ ಸಮಸ್ಯೆಗಳು ಎದುರಾಗಲಿದೆಯೇ? 
ಚಿತ್ರರಂಗದಲ್ಲಿ ನಾನು ಯಾವಾಗಲೂ ಕಪ್ಪು ಕುರಿಯಾಗಿದ್ದೇನೆ. ನಾನು ನನ್ನ ತಂದೆಯಿಂದ ಪಾಠ ಕಲಿತಿದ್ದೇನೆ. ಪತ್ರಿಕೋದ್ಯಮ ವೃತ್ತಿಯಲ್ಲಿರುವವರಿಗೆ ಹೆಚ್ಚಾಗಿಯೇ ಸ್ನೇಹಿತರಿರುತ್ತಾರೆ. ಆದರೆ, ಆಪ್ತ ಸ್ನೇಹಿತರಿರುವುದಿಲ್ಲ. ಹಾಗೆ ಇರುವವರು ಬದ್ಧತೆಯಲ್ಲಿ ರಾಜಿಯಾಗುತ್ತಾರೆ. ನನ್ನ ಸುತ್ತಲೂ ಸಾಕಷ್ಟು ಉತ್ತಮ ಜನರಿದ್ದಾರೆ. ಮೊದಲ ದಿನದಿಂದಲು ಪ್ರಕರಣವನ್ನು ಫಾಲೋ ಮಾಡುತ್ತಿದ್ದೇನೆ. ಪ್ರಸ್ತುತ ಆಗುತ್ತಿರುವ ಎಲ್ಲಾ ಬೆಳವಣಿಗೆಗಳು ಒಳ್ಳೆಯ ಚಿನ್ಹೆಗಳಾಗಿವೆ. ಮಾಫಿಯಾಗಳು ಬಹಿರಂಗವಾಗುತ್ತಿವೆ. ತಪ್ಪು ಮಾಡಿ ತಮಗೇನೂ ಆಗುವುದಿಲ್ಲ ಎಂದು ಧೈರ್ಯದಿಂದಿರುವ ಸೆಲೆಬ್ರೆಟಿಗಳೂ ಉತ್ತಮ ಪಾಠ ಕಲಿಯುತ್ತಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಚಲನಚಿತ್ರ ನಿರ್ಮಾಪಕರು ಅಸಮಾಧಾನಗೊಳ್ಳುತ್ತಿರುವ ಸಾಕಷ್ಟು ಬೆಳವಣಿಗೆಗಳು ಕಂಡು ಬರುತ್ತಿವೆ. “ಉಡುಪಿಯ ಸಣ್ಣ ಹಳ್ಳಿಯಿಂದ ಬಂದ ಪ್ರಕಾಶ್ ಪಡುಕೋಣೆ ತಮ್ಮ ಶ್ರಮವನ್ನು ಎಂದಿಗೂ ಮರೆತಿಲ್ಲ. ಪ್ರಕಾಶ್ ಅವರು ವಿಶ್ವ ಚಾಂಪಿಯನ್‌ಶಿಪ್ ಗೆದ್ದಾಗ ಕನ್ನಡಿಗರು ಎಷ್ಟು ಹೆಮ್ಮೆಪಟ್ಟಿದ್ದರು ಎಂಬುದು ನನಗೆ ಈಗಲೂ ನೆನಪಿದೆ. ಆದರೆ, ಅವರ ಮಗಳು ದೀಪಿಕಾ ಪಡುಕೋಣೆ ಬಹುಶಃ ಬಾಲಿವುಡ್ ಅಥವಾ ಅದರ ಸದಸ್ಯರ ವಾತಾವರಣದಿಂದ ಪ್ರಭಾವಿತರಾಗಿದ್ದಾರೆನಿಸುತ್ತಿದೆ. ದೀಪಿಕಾ ತಮ್ಮ ವೃತ್ತಿಜೀವನವನ್ನು ಐಶ್ವರ್ಯ ಎಂಬ ಕನ್ನಡ ಚಿತ್ರದಲ್ಲಿ ಪ್ರಾರಂಭಿಸಿದ್ದರು, ಆದರೆ, ಅದನ್ನು ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಅವರ ತಂದೆಯ ಕನ್ನಡಿಗನೆಂಬುದಕ್ಕೆ ಹೆಮ್ಮೆ ಪಡುತ್ತಾರೆ. ದೀಪಿಕಾ ಕೂಡ ಅದೇ ರೀತಿ ಹೆಮ್ಮೆಪಡಬೇಕು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪರಸ್ಪರ ನಂಬಿಕೆ, ಗೌರವದ ಆಧಾರದ ಮೇಲೆ ಸಂಬಂಧ ಮುಂದುವರಿಸಲು ಬದ್ಧ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಪ್ರಧಾನಿ ಮೋದಿ

SCO ಶೃಂಗಸಭೆ: ಮೋದಿ ಭೇಟಿ ಹಿನ್ನೆಲೆ, ಅಮೆರಿಕದ ಸುಂಕಾಸ್ತ್ರ ವಿರುದ್ಧ ರಷ್ಯಾ ಅಧ್ಯಕ್ಷ ಪುಟಿನ್ ಕಿಡಿ! ಹೇಳಿದ್ದು ಏನು?

Pepsi To McDonald: ಸುಂಕ ಸಂಘರ್ಷದ ನಡುವೆ ಅಮೆರಿಕದ ದೈತ್ಯ ಕಂಪನಿಗಳಿಗೆ ಭಾರತದಲ್ಲಿ #Boycott ಬಿಸಿ!

SCO ಶೃಂಗಸಭೆ: ಪುಟಿನ್ ಭೇಟಿಗೂ ಮುನ್ನ ಉಕ್ರೇನ್ ಜೊತೆ ಮೋದಿ ಮಾತು; ರಷ್ಯಾಕ್ಕೆ ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ!

US President: ಅನಾರೋಗ್ಯದ ವದಂತಿ, ಕೆಲವು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸದ ಡೊನಾಲ್ಡ್ ಟ್ರಂಪ್!

SCROLL FOR NEXT