ಅಂಜಲಿ ಅನೀಶ್ 
ಸಿನಿಮಾ ಸುದ್ದಿ

'ಪದವಿ ಪೂರ್ವ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಂಜಲಿ ಅನೀಶ್ ಪ್ರವೇಶ

ಹರಿಪ್ರಸಾದ್ ಜಯಣ್ಣ ನಿರ್ದೇಶನದ "ಪದವಿ ಪೂರ್ವ" ಚಿತ್ರದ ಮೂಲಕ ಅಂಜಲಿ ಹರೀಶ್ ಎಂಬ ನವ ಪ್ರತಿಭೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಆಗುತ್ತಿದೆ.  2019 ರ ಟೈಮ್ಸ್ ಫ್ರೆಶ್ ಫೇಸ್, ರಾಂಪ್‌ನಲ್ಲಿ ಭಾಗವಹಿಸಿದ್ದ ಅಂಜಲಿ ಇದೀಗ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಹರಿಪ್ರಸಾದ್ ಜಯಣ್ಣ ನಿರ್ದೇಶನದ "ಪದವಿ ಪೂರ್ವ" ಚಿತ್ರದ ಮೂಲಕ ಅಂಜಲಿ ಹರೀಶ್ ಎಂಬ ನವ ಪ್ರತಿಭೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಆಗುತ್ತಿದೆ.  2019 ರ ಟೈಮ್ಸ್ ಫ್ರೆಶ್ ಫೇಸ್, ರಾಂಪ್‌ನಲ್ಲಿ ಭಾಗವಹಿಸಿದ್ದ ಅಂಜಲಿ ಇದೀಗ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇವರಿಗೆ ಜೋಡಿಯಾಗಿ ಇನ್ನೊಬ್ಬ ಹೊಸ ಪ್ರತಿಭೆ ಪೃಥ್ವಿ ಶಾಮನೂರ್ ಕಾಣಿಸಿಕೊಳ್ಳುತ್ತಿದ್ದಾರೆ. ಪೃಥ್ವಿ ಮೂಲತಃ ದಾವಣಗೆರೆಯವರಾಗಿದ್ದು ಮಾಡೆಲ್ ವೃತ್ತಿಯಲ್ಲಿದ್ದಾರೆ.

ಮಾಡೆಲ್ ಮತ್ತು ಕಾನೂನು ವಿದ್ಯಾರ್ಥಿನಿ ಅಂಜಲಿ ನಿರ್ದೇಶನ ಕ್ಷೇತ್ರದಲ್ಲಿ ಕೆಲ ಕಾಲ ಅನುಭವ ಪಡೆದಿದ್ದಾರೆ.  ಮೂರು ಕನ್ನಡ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಇನ್ನುಳಿದ ಪಾತ್ರವರ್ಗ ಅಂತಿಮಗೊಂಡ ನಂತರ ಚಿತ್ರತಂಡವು ನವೆಂಬರ್ ಎರಡನೇ ವಾರದಿಂದ ಫ್ಲೋರ್‍ ಗೆ ತೆರಳಲು ತೀರ್ಮಾನಿಸಿದೆ.

"ಪದವಿ ಪೂರ್ವ" ಎಂದರೆ  ಹೆಸರೇ ಹೇಳಿದಂತೆ ಇದು ವಿಶ್ವವಿದ್ಯಾನಿಕಯದ ಪದವಿ ಪೂರ್ವ ವಿದ್ಯಾರ್ಥಿಗಳ ಸುತ್ತ ಸುತ್ತುವ ಕಥೆಯಾಗಿದೆ. ಯೋಗರಾಜ್ ಭಟ್ ಅವರ ಜತೆ ಗುರುತಿಸಿಕೊಂಡಿರುವ ಹರಿಪ್ರಸಾದ್ ಫ್ರೆಂಡ್ ಶಿಪ್ ಹಾಗೂ ರೊಮಾನ್ಸ್  ಆಧಾರಿತ ಕಥೆಯೊಂದಿಗೆ ಬಂದಿದ್ದಾರೆ ಮತ್ತು 90ರ ದಶಕದ ಉತ್ತರಾರ್ಧದ ಕಾಲೇಜು ಹಿನ್ನೆಲೆಯನ್ನಿಟ್ಟುಕೊಂಡು ಸಿದ್ದವಾಗಿದ್ದಾರೆ.

"ಪದವಿ ಪೂರ್ವ" ಚಿತ್ರವನ್ನು ಯೋಗರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ ಮತ್ತು ಇದನ್ನು ಯೋಗರಾಜ್ ಭಟ್ಮತ್ತು ರವಿ ಶಾಮನೂರ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ, ಅರ್ಜುನ್ ಜನ್ಯಾ ಸಂಗೀತ ಮತ್ತು ಸಂತೋಷ್ ರೈ ಪತ್ತಾಜೆ  ಕ್ಯಾಮೆರಾ ಕೆಲಸ ನಿಭಾಯಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್