ಸಿನಿಮಾ ಸುದ್ದಿ

ನವೆಂಬರ್ ಮೊದಲ ವಾರದಲ್ಲಿ 'ಸ್ಪೂಕಿ ಕಾಲೇಜ್' ಆರಂಭ

ವಿವೇಕ್ ಸಿಂಹ ಹಾಗೂ  ಖುಷಿ ರವಿ ಅಭಿನಯದ  ಭರತ್ ಜಿ ಅವರ ನಿರ್ದೇಶನದ ಚಿತ್ರ 'ಸ್ಪೂಕಿ ಕಾಲೇಜ್' ನ ಶೂಟಿಂಗ್ ನವೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ಹಾರರ್ ಹಾಗೂ ಕಾಮಿಡಿ ಮಿಶ್ರಿತ ಕಥಾನಕವಾಗಿರುವ ಸೈಕಲಾಜಿಕಲ್ ಥ್ರಿಲ್ಲರ್ ಅನ್ನು ಎಚ್ ಕೆ ಪ್ರಕಾಶ್ ನಿರ್ಮಿಸಿದ್ದಾರೆ

ವಿವೇಕ್ ಸಿಂಹ ಹಾಗೂ ಖುಷಿ ರವಿ ಅಭಿನಯದ ಭರತ್ ಜಿ ಅವರ ನಿರ್ದೇಶನದ ಚಿತ್ರ 'ಸ್ಪೂಕಿ ಕಾಲೇಜ್' ನ ಶೂಟಿಂಗ್ ನವೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ಹಾರರ್ ಹಾಗೂ ಕಾಮಿಡಿ ಮಿಶ್ರಿತ ಕಥಾನಕವಾಗಿರುವ ಸೈಕಲಾಜಿಕಲ್ ಥ್ರಿಲ್ಲರ್ ಅನ್ನು ಎಚ್ ಕೆ ಪ್ರಕಾಶ್ ನಿರ್ಮಿಸಿದ್ದಾರೆ.

ಈ ಹಿಂದೆ "ರಂಗಿತರಂಗ", "ಅವನೇ ಶ್ರೀಮನ್ನಾರಾಯಣ" ಚಿತ್ರಗಳನ್ನು ನಿರ್ಮಿಸಿದ್ದ ಶ್ರೀ ದೇವಿ ಎಂಟರ್‌ಟೈನರ್ಸ್ಬ್ಯಾನರ್ ನಡಿ ಈ ಚಿತ್ರ ತಯಾರಾಗುತ್ತಿದೆ. ಚಿತ್ರದಲ್ಲಿ ಇನ್ನೊಬ್ಬ ಯುವ ಪ್ರತಿಭೆ ಪ್ರಥ್ವಿ ರಾಷ್ಟ್ರಕೂಟ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಈ ಚಿತ್ರದಲ್ಲಿ ವಿಲನ್ ಆಗಿ ಅಭಿನಯಿಸಲಿದ್ದಾರೆ.

ತಂಡವು ನವೆಂಬರ್ ಮೊದಲ ವಾರದಲ್ಲಿ ಫೈಲಿಂಗ್ ಪ್ರಾರಂಭಿಸಲು ಸಿದ್ಧವಾಗಿದೆ.  'ಸ್ಪೂಕಿ ಕಾಲೇಜ್' ಚಿತ್ರಕ್ಕೆ ಅಡ್ಮಿಶನ್ಸ್ ಓಪನ್ ಎಂಬ ಟ್ಯಾಗ್ ಲೈನ್ ಸಹ ಇದೆ. ತಂಡವು ಧಾರವಾಡದಲ್ಲಿನ 103 ವರ್ಷಗಳ ಹಳೆಯ ಕಾಲೇಜು ಹಾಗೂ ಸುತ್ತಲಿನ ಪ್ರದೇಶದಲ್ಲಿ ಚಿತ್ರದ ಚಿತ್ರೀಕರಣ ನಡೆಸಲು ತೀರ್ಮಾನಿಸಿದೆ. ಚಿತ್ರದ ಸೆಕೆಂಡ್ ಶೆಡ್ಯೂಲ್ ಅನ್ನು ದಾಂಡೇಲಿಯ ದಟ್ಟ ಕಾಡಿನಲ್ಲಿ ಚಿತ್ರೀಕರಿಸುವುದಾಗಿ ತಂಡವು ತೀರ್ಮಾನಿಸಿದೆ.

ಬಿ ಅಜನೀಶ್ ಲೋಕನಾಥ್ ಸಂಗೀತ ಮನೋಹರ್ ಜೋಶಿ ಛಾಯಾಗ್ರಹಣ ಚಿತ್ರಕ್ಕಿದ್ದು  ಹಿರಿಯ ನಟರಾದ ಪ್ರಕಾಶ್ ಬೆಖವಾಡಿ , ಹನುಮಂತ್ ಗೌಡ, ರಘು ರಾಮನ್ ಕೊಪ್ಪ, ವಿಜಯ್ ಚೆಂದೂರ್, ಅರವಿಂದ್ ಬೋಳಾರ್, ಎಂ ಕೆ ಮಠಮತ್ತು ಅಶ್ವಿನ್ ಹಸನ್ ಸಹ ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

SCROLL FOR NEXT