ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಮೂಲಕ ಬೆಳ್ಳಿ ಪರದೆಗೆ ಕಾಲಿಡುತ್ತಿರುವ ರೇಷ್ಮಾ ನಾಣಯ್ಯ ಅಕ್ಟೋಬರ್ 12 ರಿಂದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.
ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾದಲ್ಲಿ ನಟಿ ರಕ್ಷಿತಾ ಸಹೋದರ ರಾಣಾ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ರೋಮ್ಯಾಂಟಿಕ್ ಕಥೆಯುಳ್ಳ ಸಿನಿಮಾದಲ್ಲಿ ರಚಿತಾ ಕಾಮ್ ಕೂಡ ನಟಿಸುತ್ತಿದ್ದಾರೆ. ರಕ್ಷಿತಾ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಳೆದ ಕೆಲವು ದಿನಗಳ ವರೆಗೂ ರೇಷ್ಮಾ ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಆದರೆ ಸದ್ಯ ರಿಹರ್ಸಲ್ ಮಾಡುತ್ತಿದ್ದು ಅಕ್ಟೋಬರ್ 12 ರಿಂದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.
ಮೊದಲ ಮೂರು ದಿನಗಳ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯಲಿದೆ, ಅದಾದ ನಂತರ ಊಟಿಯಲ್ಲಿ ನಡೆಯಲಿದೆ, ಫೆಬ್ರವರಿಯಲ್ಲಿ ನಾನು ಶೂಟಿಂಗ್ ನಲ್ಲಿ ನಾನು ಭಾಗವಹಿಸಿದ್ದೆ, ಸುಮಾರು 8 ತಿಂಗಳ ನಂತರ ಮತ್ತೆ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದೇನೆ, ಲಾಕ್ ಡೌನ್ ಸಮಯದಲ್ಲಿ ಡ್ಯಾನ್ಸ್ ಮತ್ತು ವರ್ಕ್ ಔಟ್ ಮಾಡುತ್ತಿದ್ದೆ, ಮೊದಲಿಗಿಂತ ನಾನು ಈಗ ಕ್ಯಾಮೆರಾ ಮುಂದೆ ನಿಲ್ಲಲ್ಲು ಶಕ್ತಳಾಗಿದ್ದೇನೆ ಎಂದು ರೇಷ್ಮಾ ನಾಣಯ್ಯ ಹೇಳಿದ್ದಾರೆ.
ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಅಡಿ ಏಕ್ ಲವ್ ಯಾ ಸಿನಿಮಾ ತಯಾರಾಗುತ್ತಿದೆ, ಅರ್ಜುನ್ ಜನ್ಯ ಸಿನಿಮಾ ಗೆ ಸಂಗೀತ ನೀಡಿದ್ದಾರೆ. ಎಕ್ ಲವ್ ಯಾ ನಂತರ ರೇಷ್ಮಾ ಮಾರ್ಗ ಸಿನಿಮಾದಲ್ಲಿ ನಟಿಸಲಿದ್ದಾರೆ.