ಹರಿಪ್ರಿಯಾ 
ಸಿನಿಮಾ ಸುದ್ದಿ

'ಪೆಟ್ರೋಮ್ಯಾಕ್ಸ್' 'ನೀರ್ ದೋಸೆ'ಗಿಂತ ತುಂಬಾ ವಿಭಿನ್ನ: ಹರಿಪ್ರಿಯಾ

ನಟಿ ಹರಿಪ್ರಿಯಾ ನಿರ್ದೇಶಕ ವಿಜಯಪ್ರಸಾದ್ ಅವರ ಇತ್ತೀಚಿನ ಚಿತ್ರ "ಪೆಟ್ರೋಮ್ಯಾಕ್ಸ್" ಚಿತ್ರದ ಶೂಟಿಂಗ್ ನಲ್ಲಿದ್ದು ಇದೀಗ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ.

ನಟಿ ಹರಿಪ್ರಿಯಾ ನಿರ್ದೇಶಕ ವಿಜಯಪ್ರಸಾದ್ ಅವರ ಚಿತ್ರ "ಪೆಟ್ರೋಮ್ಯಾಕ್ಸ್" ಚಿತ್ರದ ಶೂಟಿಂಗ್ ನಲ್ಲಿದ್ದು ಇದೀಗ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ.  ನಟ ಸತೀಶ್ ನಿನಾಸಮ್ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದ ಸೆಟ್ ಗೆ ಹರೊಪ್ರಿಯಾ ಸೇರ್ಪಡೆಯಾಗಿದ್ದು ಇದೇ ಮೊದಲ ಬಾರಿಗೆ ಸತೀಶ್ ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಚಿತ್ರೀಕರಣದ ಬಗ್ಗೆ ಮಾತನಾಡುತ್ತಾ, ನಟಿ ಮೂರು ಕಾರಣಗಳಿಂಡ ನನಗೆ ಈ ಚಿತ್ರ ಇಷ್ಟವಾಗಿದೆ ಎಂದರು. “ಮೊದಲಿಗೆ, ಇದು ಉತ್ತಮ ವಿಷಯ ಒಳಗೊಂಡಿದೆ. ಹಾಗಾಗಿ ನೀರ್ ದೋಸೆ ನಿರ್ದೇಶಕರೊಂದಿಗೆ ಮತ್ತೆ ಒಂದಾಗಲು ನನಗೆ ಸಂತೋಷವಾಗಿದೆ. ಅಲ್ಲದೆ, ನಾನು ನಟ ಸತೀಶ್ ನಿನಾಸಮ್ ಅವರೊಂದಿಗೆ ಮೊದಲ ಬಾರಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುತ್ತಿದ್ದೇನೆ ”ಎಂದು ಹರಿಪ್ರಿಯಾ ಹೇಳುತ್ತಾರೆ.

“ಒಂದು ಚಿತ್ರದಲ್ಲಿ ವಿಜಯಪ್ರಸಾದ್ ನಿರ್ದೇಶಕರಾಗಿ, ಮತ್ತು ನಾನು ನಟಿಯಾಗಿರುವಾಗ ಒಬ್ಬರಿಗೊಬ್ಬರು ಏನನ್ನು ನಿರೀಕ್ಷಿಸುತ್ತಾರೆ ಎನ್ನುವುದು ನನಗೆ ಅರಿಇವಿದೆ. ನಮ್ಮ ಹಿಂದಿನ ಚಿತ್ರವಾದ ನೀರ್ ದೋಸೆ ಸಮಯದಲ್ಲಿ ನಾವು ಉತ್ತಮ ಒಡನಾಟ ಹೊಂದಿದ್ದೇವೆ. ಅಭಿನಯದ ದೃಷ್ಟಿಯಿಂದ  ಆವರು  ನನ್ನನ್ನು ಹೇಗೆ ಚಿತ್ರಿಸುತ್ತಾನೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಹಾಗಾಗಿ "ಪೆಟ್ರೋಮ್ಯಾಕ್ಸ್"ಗಾಗಿ ನ್ನನ್ನು ಸಂಪರ್ಕಿಸಿದಾಗ, ನನ್ನ ಏಕೈಕ ಕುತೂಹಲವು ನಿರ್ದೇಶಕರು ಮಂಡಿಸಿದ ವಿಷಯದ ಬಗ್ಗೆ ಮಾತ್ರವೇ ಇತ್ತು"

"ಪೆಟ್ರೋಮ್ಯಾಕ್ಸ್‌"ನಲ್ಲಿನ ತನ್ನ ಪಾತ್ರವು ನೀರ್ ದೋಸೆ ಯಲ್ಲಿ ಮಾಡಿದ ಪಾತ್ರಕ್ಕೆ ಬಹಳವೇ ವಿಭಿನ್ನವಾಗಿದೆ. ಪೆಟ್ರೋಮ್ಯಾಕ್ಸ್ ನೀರ್ ದೋಸೆಯ ಪರಿಮಳಹೊಂದಿಲ್ಲ. ಆದರೆ ಈ ಚಿತ್ರಕ್ಕೆ ನಿರ್ದೇಶಕ ವಿಜಯಪ್ರಸಾದ್ ಅವರ ದೃಷ್ಟಿಕೋನ ಹಾಗೆಯೇ ಇರಲಿದೆ. ಭಾವನೆಗಳೊಂದಿಗೆ ಬೆರೆಸುವ ಹಾಸ್ಯದ ಅಂಶ ತಾಜಾ ಸಂಭಾಷಣೆಗಳೊಂದಿಗೆ ಅರ್ಥಪೂರ್ಣವಾದ ಸ್ಕ್ರಿಪ್ಟ್ ಮತ್ತು ಬಹಳಷ್ಟು ಆಯಾಮಗಳಿದೆ. "

"ಪೆಟ್ರೋಮ್ಯಾಕ್ಸ್" ಚಿತ್ರವನ್ನು ಸತೀಶ್ ಪಿಕ್ಚರ್ಸ್, ಸ್ಟುಡಿಯೋ 18, ಮತ್ತು ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಜಂಟಿಯಾಗಿ  ನಿರ್ಮಾಣ ಮಾಡಿದೆ. ಚಿತ್ರಕ್ಕೆ  ಅನೂಪ್ ಸೀಳನ್ ಸಂಗೀತ ನಿರಂಜನ್ ಬಾಬು ಛಾಯಾಗ್ರಹಣವಿದೆ. ಅರುಣ್(ಗೊಂಬೆಗಳ ಲವ್ ಖ್ಯಾತಿ), ನಾಗಭೂಷಣ್, ಕಾರುಣ್ಯಾ ರಾಮ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಹರಿಪ್ರಿಯಾ ಇದೀಗ "ಪೆಟ್ರೋಮ್ಯಾಕ್ಸ್" ಹೊರತು ತೆಲುಗು ಚಿತ್ರ "ಎವರು"ಕನ್ನಡದ ರಿಮೇಕ್‌ನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. , ಇದರಲ್ಲಿ ದಿಗಂತ್ ಎದುರು ಜೋಡಿಯಾಗಿರುವ ನಟಿ  ಉಪೇಂದ್ರ ಅಭಿನಯದ ಲಗಾಮ್ ಚಿತ್ರಕ್ಕಾಗಿ ನಿರ್ದೇಶಕ ಕೆ.ಮಹೇಶ್  ಅವರೊಂದಿಗೆ ಕೆಲಸ ಮಾಡಲಿದ್ದಾರೆ. "ನಾನು ಪ್ರಸ್ತುತ ನಾಲ್ಕು ಚಿತ್ರಗಳನ್ನು ಹೊಂದಿದ್ದೇನೆ.  ಇನ್ನೂ ಒಂದೆರಡು ಚಿತ್ರದ ಬಗ್ಗೆ ಮಾತುಕತೆ ನಡೆದಿದೆ. ನನ್ನ ಡೇಟ್ಸ್ ಗಳನ್ನು ಮ್ಯಾನೇಜ್ ಮಾಡುವ ಪ್ರತಿ ಚಿತ್ರದ ನಡುವೆ ನನ್ನ ಶೆಡ್ಯೂಲ್ ಹೊಂದಿಸುವ ಬಗೆಗೆ ನಾನೇ ಜವಾಬ್ದಾರಿ ತೆಗೆದುಕೊಂಡಿದ್ದೇನೆ. . ನಾನು ಪ್ರಸ್ತುತ ವಿಜಯಪ್ರಸಾದ್ ಮತ್ತು ಅಶೋಕ್ ತೇಜ ಅವರ  ಚಿತ್ರದ ಶೂಟಿಂಗ್ ನಲ್ಲಿದ್ದೇನೆ. ಮುಂದಿನ ದಿನಗಳಲಿ ನಾನು ಲಗಾಮ್‌ ಸೆಟ್ ಗಳಿಗೆ ತೆರಳಲಿದ್ದೇನೆ." ನಟಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT