ಸಿನಿಮಾ ಸುದ್ದಿ

ಯಶ್-ರಾಧಿಕಾ ಮಗುವಿನ ನಾಮಕರಣ: ಮಗುವಿನ ಹೆಸರು ಏನು ಗೊತ್ತೆ?

Shilpa D

ಬೆಂಗಳೂರು: ಯಶ್-ರಾಧಿಕಾ ಮಗನಿಗೆ ಏನು ಹೆಸರು ಇಡುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಈಗ ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ.

ಆಯ್ರಾ ಅಕ್ಷರದ ಮೊದಲ ಹೆಸರು ಆ ಹಾಗೂ ಯಶ್ ಹೆಸರನ್ನು ಸೇರಿಸಿ ಆಯುಷ್ ಎಂದು ನಾಮಕರಣ ಮಾಡಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.

ಸದ್ಯ, ರಾಧಿಕಾ ಪಂಡಿತ್ ಈ ಎಲ್ಲ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ಮಗನಿಗೆ ಯಥರ್ವ್ ಎಂದು ನಾಮಕರಣ ಮಾಡಿದ್ದಾರೆ. ಯಥರ್ವ ಎಂದರೆ ಸಂಪೂರ್ಣ ಎಂದು ಅರ್ಥ. ಮಗನ ನಾಮಕರಣ ವಿಡಿಯೋವನ್ನು ಶೇರ್ ಮಾಡಿ ಯಶ್ ದಂಪತಿ "ನಮ್ಮನ್ನು ಪೂರ್ಣಗೊಳಿಸಿದವನು" ಎಂದು ಬರೆದುಕೊಂಡಿದ್ದಾರೆ ಜೊತೆಗೆ "ರಾರಾಜಿಸುತ ಬದುಕು ಮಗನೇ. ಹರಸಿ ಹಾರೈಸಿ" ಎಂದು ಹೇಳಿದ್ದಾರೆ.

ರಾಧಿಕಾ ಪಂಡಿತ್ ಮಗನಿಗೆ ನಾಮಕರಣ ಮಾಡಿರುವ  ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ​ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಗನಿಗೆ ಇಟ್ಟಿರುವ ಹೆಸರನ್ನು ಬಹಿರಂಗ ಮಾಡಲಾಗಿದೆ.

SCROLL FOR NEXT