ಉಮಾಶ್ರೀ 
ಸಿನಿಮಾ ಸುದ್ದಿ

'ರತ್ನನ್ ಪ್ರಪಂಚ'ದ ಮೂಲಕ ಬೆಳ್ಳಿಪರದೆಗೆ ಉಮಾಶ್ರೀ ಕಂ ಬ್ಯಾಕ್

ರೋಹಿತ್ ಪಡಕಿಯ  "ರತ್ನನ್ ಪ್ರಪಂಚ" ದಲ್ಲಿ  ಧನಂಜಯ್ ಮತ್ತು ರೆಬಾ ಮೋನಿಕಾ ಜಾನ್ ಪ್ರಮುಖ ತಾರಾಂಗಣದಲ್ಲಿದ್ದಾರೆ. ಆದರೆ ಸುದ್ದಿ ಅದಲ್ಲ. ಹಿರಿಯ ನಟಿ, ರಾಜಕಾರಣಿ ಉಮಾಶ್ರೀ ಈ ಚಿತ್ರದ ಮೂಲಕ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದಾರೆ. ಈ ಹಿಂದೆ "ಲವ್ ಯು ಆಲಿಯಾ" ಚಿತ್ರದಲ್ಲಿ ಕಡೆಬಾರಿಗೆ ನಟಿಸಿದ್ದ ಉಮಾಶ್ರೀ ಐದು ವರ್ಷಗಳ ನಂತರ ಮತ್ತೆ ಸಿನಿ ಪರದೆ ಮೇಲೆ ಕಾ

ರೋಹಿತ್ ಪಡಕಿಯ  "ರತ್ನನ್ ಪ್ರಪಂಚ" ದಲ್ಲಿ  ಧನಂಜಯ್ ಮತ್ತು ರೆಬಾ ಮೋನಿಕಾ ಜಾನ್ ಪ್ರಮುಖ ತಾರಾಂಗಣದಲ್ಲಿದ್ದಾರೆ. ಆದರೆ ಸುದ್ದಿ ಅದಲ್ಲ. ಹಿರಿಯ ನಟಿ, ರಾಜಕಾರಣಿ ಉಮಾಶ್ರೀ ಈ ಚಿತ್ರದ ಮೂಲಕ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದಾರೆ. ಈ ಹಿಂದೆ "ಲವ್ ಯು ಆಲಿಯಾ" ಚಿತ್ರದಲ್ಲಿ ಕಡೆಬಾರಿಗೆ ನಟಿಸಿದ್ದ ಉಮಾಶ್ರೀ ಐದು ವರ್ಷಗಳ ನಂತರ ಮತ್ತೆ ಸಿನಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. 

ರವಿಚಂದ್ರನ್ ಅಭಿನಯದ ಪುಟ್ನಂಜ ಚಿತ್ರದಲ್ಲಿರವಿಚಂದ್ರನ್ ತಾಯಿಯ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದ ನಟಿಯ ಆ ಪಾತ್ರ ಈಗಲೂ ಜನರ ಮನದಲ್ಲಿ ಅಚ್ಚೊತ್ತಿದೆ. ಈಗ "ರತ್ನನ್ ಪ್ರಪಂಚ"ದ್ಅಲ್ಲಿ ಸಹ ನಟಿ ಹಳೆ ಕಾಲದ ಬೆಂಗಲೂರಿನಲ್ಲಿ ವಾಸವಿರುವ ಮದ್ಯಮ ವರ್ಗದ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

“ಅವಳು ಪಾರಂಪರಿಕ ಮೌಲ್ಯದ ವ್ಯವಸ್ಥೆಯನ್ನು ಹೊಂದಿರುವವಳು ಆದರೆ ಸಾಂಪ್ರದಾಯಿಕತೆ ಇಲ್ಲ.  ನಿಮ್ಮ ಮತ್ತು ನನ್ನ ತಾಯಿಯಂತೆ ಅವಳು ತುಂಬಾ ತುಂಟಿ ಃಆಗೂ ಮುಗ್ದೆ. ಅವಳು ಜೀವನವನ್ನು ಪೂರ್ಣವಾಗಿ ಬದುಕುತ್ತಾಳೆ, ಮತ್ತು ಅಳು ಆಕೆಯ ಜೀವನದಲ್ಲಿ ತನಗೆ ತಾನು ರಾಣಿಯಂತಿರುತ್ತಾಳೆ"  ನಿರ್ದೇಶಕ ರೋಹಿತ್ ಉಮಾಶ್ರೀ ಪಾತ್ರದ ಬಗ್ಗೆ ವಿವರಿಸಿದರು. ಈ ತಾಯಿಯು ಕೆಲಸಗಳನ್ನುಪೂರ್ಣಗೊಳಿಸುವ  ದಾರಿಯನ್ನು ಹೊಂದಿದ್ದಾಳೆ. ನಂಜಯ್ ನಿರ್ವಹಿಸಿದ ರತ್ನನ ಪಾತ್ರದೊಡನೆ ಈಕೆಯ ಪಾತ್ರ ಯಾವಾಗಲೂ ಭಿನ್ನಾಭಿಪ್ರಾಯ ಹೊಂದಿರಲಿದೆ. 

 ಆಗಸ್ಟ್ 31 ರಂದು ನಡೆದ ಚಿತ್ರದ ಮುಹೂರ್ತದಲ್ಲಿ ಭಾಗವಹಿಸಿದ್ದ ನಟಿ ಉಮಾಶ್ರೀ ಸೆಪ್ಟೆಂಬರ್‌ನಿಂದ ಸೆಟ್ ಗೆ ಆಗಮಿಸಲಿದ್ದಾರೆ.

ಇದೇ ವೇಳೆ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ರತ್ನನ್ ಪ್ರಪಂಚ ತಂಡವನ್ನು ಸೇರಿಕೊಳ್ಳುತ್ತಿದ್ದಾರೆ. . ಪ್ರಸ್ತುತ ಇಂಗ್ಲಿಷ್ ಮಂಜ ಹಾಗೂ 100 ಮಂಕೀಸ್ ಚಿತ್ರದ ಶೂಟಿಂಗ್ ನಲ್ಲಿರುವ ನಟ ಧನಂಜಯ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲಿದ್ದಾರೆ. ಅವರು ರಾಬಿನ್ ಹುಡ್ ರೀತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆಂದು ಮೂಲಗಳು ಹೇಳಿದೆ. 

"ರತ್ನನ್ ಪ್ರಪಂಚ" ಚಿತ್ರಕ್ಕೆ  ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ಬಂಡವಾಳ ತೊಡಗಿಸಿದ್ದಾರೆ.  ಇದರಲ್ಲಿ ಡಿಒಪಿ ಶ್ರೀಶಾ ಕುಡುವಲ್ಲಿ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕಾಂತ್ ಕ್ರಮವಾಗಿ ಛಾಯಾಗ್ರಹಣ ಹಾಗೂ ಹಿನ್ನೆಲೆ ಸಂಗೀತವನ್ನು ನಿರ್ವಹಿಸುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT