ರಾಗಿಣಿ ಮತ್ತು ಸಂಜನಾ 
ಸಿನಿಮಾ ಸುದ್ದಿ

ಸಂಜನಾ ಬಗ್ಗೆ ಮಾತನಾಡಿ ಬಾಯಿ ಗಲೀಜು ಮಾಡಿಕೊಳ್ಳಲ್ಲ: ರಾಗಿಣಿ ಘಮ ಘಮ ನಾರುತ್ತಿದ್ದಾಳಾ? ಪ್ರಶಾಂತ್ ಸಂಬರಗಿ

ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿರುವ ಡ್ರಗ್ಸ್ ನಂಟಿನ ಸಂಬಂಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇಂದು ಸುದ್ದಿಗೋಷ್ಠಿ ನಡೆಸಿ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿರುವ ಡ್ರಗ್ಸ್ ನಂಟಿನ ಸಂಬಂಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇಂದು ಸುದ್ದಿಗೋಷ್ಠಿ ನಡೆಸಿ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿ ಗುಂಪುಗಾರಿಕೆಯಿಂದ ಕನ್ನಡ ಸಿನಿಮಾ ರಂಗ ಹಾಳಾಗುತ್ತಿದೆ. ನನಗೂ ಮಂಡಳಿಗೂ ಯಾವುದೇ ಸಂಬಂಧವಿಲ್ಲ, ಏಕೆಂದರೆ ನಾನು ವಾಣಿಜ್ಯ ಮಂಡಳಿ ಸದಸ್ಯನಲ್ಲ ಎಂದು ಹೇಳಿದ್ದಾರೆ. ವಾಣಿಜ್ಯ ಮಂಡಳಿ ಹೆಸರಲ್ಲಿ  ಕನ್ನಡ ಸಿನಿಮಾ ರಂಗವನ್ನು ರೂಲ್ ಮಾಡುವುದಕ್ಕೆ ಹೋಗಬೇಡಿ ಎಂದು ಹೇಳಿದ್ದಾರೆ.

ನಟಿ ರಾಗಿಣಿ ಡ್ರಗ್ಸ್ ನಂಟಿನ ಬಗ್ಗೆ ಮಾತನಾಡಿದ ಸಂಬರಗಿ ರಾಗಿಣಿ ಘಮಘಮ ಅನ್ನುತ್ತಿದ್ದಾಳಾ ಆಕೆ ಗಬ್ಬು ನಾರುತ್ತಿದ್ದಾಳಾ, ಆಕೆ ಒಬ್ಬ ಆರ್ ಟಿಓ ಪೊಲೀಸ್ ಅಧಿಕಾರಿ ಜೊತೆ ಯುಬಿ ಸಿಟಿಯಲ್ಲಿ ಓಡಾಡುತ್ತಿದ್ದಳು, ಮದುವೆಯಾಗುವುದಾಗಿಯೂ ಹೇಳಿದ್ದಳು, ಆದರೆ ಇಂಥ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾಳೆ ಎಂದು ನಮಗೆ ತಿಳಿದಿರಲಿಲ್ಲ, ಆಕೆಗೆ ನೋಟಿಸ್ ನೀಡಿರುವುದನ್ನು  ನಾನು ಟಿವಿಯಲ್ಲಿ ನೋಡಿದೆ ಎಂದು ಹೇಳಿದರು.

ಇನ್ನು ನಟಿ ಸಂಜನಾ ಗಲ್ರಾನಿ ಬಗ್ಗೆ ಮಾತನಾಡಿದ ಸಂಬರಗಿ ಯಾರೋಬ್ಬರ ತೇಜೋವಧೆ ಮಾಡುವುದು ನನ್ನ ಉದ್ದೇಶವಲ್ಲ, ಸಂಜನಾ ಬಗ್ಗೆ ಸಿನಿಮಾ ಇಂಡಸ್ಟ್ರಿಗೆ ಗೊತ್ತು, ಆಕೆ ಬಗ್ಗೆ ಮಾತನಾಡಿ ನಾನು ಬಾಯಿ ಗಲೀಜು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಬಿಸಿಬಿಸಿ ಎಂಬ ಸಿನಿಮಾದಲ್ಲಿ ಸಂಜನಾ ಅವರಿಗೆ ಪಾತ್ರ ಕೊಡಲು ಹೋಗಿದ್ದೇವು, ಸಿಂಧ್ ಸ್ಕೂಲಿಗೆ ಹೋಗಿ ಆಕೆಯನ್ನು ನೋಡಿದ್ದೆವು, ಆದರೆ ಮೈನರ್ ಎಂಬ ಕಾರಣಕ್ಕೆ ಆಕೆಯನ್ನು ಆ ಸಿನಿಮಾದಲ್ಲಿ ನಟಿಸಲು ಆಗಲಿಲ್ಲ, ಆಕೆ ಲೆವೆಲ್ ಏನು ಎಂಬುದು ಸಿನಿಮಾ ರಂಗಕ್ಕೆ ಗೊತ್ತಿದೆ ಎಂದು ತಿಳಿಸಿದ್ದಾರೆ.

ನಾನು ಕೆಲವು ಸಿನಿಮಾ ವಿತರಣೆ ಮಾಡಿದ್ದೇನೆ, ನನ್ನ ಕೊಡುಗೆ ಏನು ಎಂದು ಪ್ರಶ್ನಿಸುವವರು ವೆಬ್ ಸೈಟ್ ನಲ್ಲಿ ನನ್ನ ಬಗ್ಗೆ ತಿಳಿದು ಕೊಳ್ಳಲಿ, ಕಾಂಗ್ರೆಸ್ ಶಾಸಕರೊಬ್ಬರ ಬರ್ತ್ ಡೇ ಪಾರ್ಟಿಯಲ್ಲಿ ಇಮ್ತಿಯಾಜ್ ಖಾತ್ರಿ ಭಾಗವಹಿಸಿದ್ದ, ಈ ಇಮ್ತಿಯಾಜ್ ಖಾತ್ರಿ ರು ಎಂಬ ಬಗ್ಗೆ ಸರ್ಕಾರ ವಿವರಣೆ ಪಡೆಯಲಿ , ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT