ರಾಗಿಣಿ 
ಸಿನಿಮಾ ಸುದ್ದಿ

ರ್ಯಾಂಪ್ ನಿಂದ ಸುಲಭವಾಗಿ ಬೆಳ್ಳಿ ತೆರೆ ಪ್ರವೇಶಿಸಿದ 'ಮಾದಕ' ನಟಿ ರಾಗಿಣಿ ನಡೆದು ಬಂದ ಹಾದಿ!

ಡ್ರಗ್ಸ್ ನಂಟಿನ ಆರೋಪದಲ್ಲಿ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ದ್ವಿವೇದಿ, ಮಾಡೆಲ್ ಆಗಿ ನಂತರ ನಟಿಯಾಗಿ ದೊಡ್ಡ ದೊಡ್ಡ ವ್ಯವಹಾರಗಳಲ್ಲಿ ಹೆಸರು ಪಡೆದವರು.

ಬೆಂಗಳೂರು: ಡ್ರಗ್ಸ್ ನಂಟಿನ ಆರೋಪದಲ್ಲಿ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ದ್ವಿವೇದಿ, ಮಾಡೆಲ್ ಆಗಿ ನಂತರ ನಟಿಯಾಗಿ ದೊಡ್ಡ ದೊಡ್ಡ ವ್ಯವಹಾರಗಳಲ್ಲಿ ಹೆಸರು ಪಡೆದವರು.

ಪ್ಯಾಷನ್ ಗುರು ಬಿಡ್ಡಪ್ಪ ಅವರಿಂದ ಗುರುತಿಸಲ್ಪಟ್ಟ ರಾಗಿಣಿ 2008 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಮೂಲಕ  ಗ್ಲಾಮರ್ ಜಗತ್ತಿನಲ್ಲಿ ಕಾಣಿಸಿಕೊಂಡರು,  2008 ರಲ್ಲಿ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡ ನಟಿ ರಾಗಿಣಿ ಪಂಜಾಬಿ ಮೂಲದದವರು. 

ರಾಗಿಣಿಗೆ ಸೈನ್ಯದ ಸಂಪರ್ಕವಿದೆ. ಆಕೆಯ ತಂದೆ ರಾಕೇಶ್ ಕುಮಾರ್ ದ್ವಿವೇದಿ ಕೊಲೋನಿಯಲ್ ಆಗಿದ್ದವರು, ಆಕೆಯ ತಾಯಿ ಗೃಹಿಣಿ, ಮತ್ತು ಸಹೋದರ ರುದ್ರಾಕ್ಷ್ ಸಹ ವಸ್ತ್ರ ವಿನ್ಯಾಸಕರಾಗಿದ್ದರು.

ಮನೀಶ್ ಮಲ್ಹೋತ್ರಾ. ರೀತು ಕುಮಾರ್, ತರುಣ್ ತಹಿಲಾನಿ, ರೋಹಿತ್ ಬಾಲ್, ಸಬ್ಯಸಾಚಿ ಮುಖರ್ಜಿ ಮುಂತಾದ ಪ್ರಸಿದ್ಧ ಪ್ಯಾಶನ್ ಡಿಸೈನರ್ ಗಳ ಜೊತೆ ರಾಗಿಣಿ ಕೆಲಸ ಮಾಡಿದ್ದಾರೆ. 

ಸುಮಾರು 30 ಸಿನಿಮಾಗಳಲ್ಲಿ ಕೆಲಸ ಮಾಡಿರುವ ರಾಗಿಣಿ 2009 ರಲ್ಲಿ ಸುದೀಪ್ ನಟನೆಯ ವೀರ ಮದಕರಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಪಡೆದರು. ನಂತರ ಕೆಂಪೇಗೌಡ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಮೂಲಕ ಅವರ ಸಿನಿಮಾ ಕೆರಿಯರ್ ಗೆ ಬ್ರೇಕ್ ನೀಡಿತ್ತು.

ಮಲಯಾಳಂ ನ ಕಂದಹಾರ್ ಸಿನಿಮಾ ಆಕೆಗೆ ಮತ್ತಷ್ಟು ಹೆಸರು ತಂದಿತು. ತಮಿಳಿನಲ್ಲು ರಾಗಿಣಿ 2 ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಸಿನಿಮಾದಲ್ಲಿ ನಟಿಸಿದ್ದ ರಾಗಿಣಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮುನ್ಸಿಪಲ್ ಕಾರ್ಪೋರೇಷನ್ ಸ್ವಚ್ಛ ಭಾರತ ಅಭಿಯಾನದ ರಾಯಭಾರಿಯಾಗಿದ್ದರು. ಈ ನಟಿಗೆ ವಿವಾದ ಹೊಸದಲ್ಲ, ಆದರೆ ಇವರಿಗೆ ತಮ್ಮದೇ ಆದ ಫ್ಯಾನ್ ಫಾಲೋ ಇದೆ.

ಶಂಕರ್ ಐಪಿಎಸ್, ಕಳ್ಳಮಳ್ಳ ಸುಳ್ಳ, ರಾಗಿಣಿ ಐಪಿಎಸ್, ಕಾಂಚನ, ಆರಕ್ಷಕ, ಮತ್ತು ಶಿವಂ, 2019ರ ಅಧ್ಯಕ್ಷ ಇನ್ ಅಮೆರಿಕಾ ರಾಗಿಣಿ ನಟನೆಯ ಕೊನೆಯ ಸಿನಿಮಾ. ಶಿವರಾಜ್ ಕುಮಾರ್, ಉಪೇಂದ್ರ, ಮುಮ್ಮಟಿ ಮುಂತಾದ ಸ್ಟಾರ್ ಗಳ ಜೊತೆ ರಾಗಿಣಿ ನಟಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT