ಜಗ್ಗೇಶ್ 
ಸಿನಿಮಾ ಸುದ್ದಿ

ಕನ್ನಡ ಸ್ವಲ್ಪ ಗೊತ್ತಿದೆ ಎಂದು ಉತ್ತರದಿಂದ ಬಂದವರಿಂದ ಚಿತ್ರರಂಗದ ಮಾನ ಹರಾಜು : ಜಗ್ಗೇಶ್

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟು ದಿನದಿನಕ್ಕೆ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು ಈ ಬಗ್ಗೆ ನವರಸನಾಯಕ ಜಗ್ಗೇಶ್ ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕನ್ನಡ ಸ್ವಲ್ಪ ಗೊತ್ತಿದೆ ಎಂದು ಉತ್ತರದಿಂದ ಬಂದವರಿಂದ ಚಿತ್ರರಂಗದ ಮಾನ ಹರಾಜಾಗುತ್ತಿದೆ" ಎಂದು ಜಗ್ಗೇಶ್ ಹೇಳಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟು ದಿನದಿನಕ್ಕೆ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು ಈ ಬಗ್ಗೆ ನವರಸನಾಯಕ ಜಗ್ಗೇಶ್ ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕನ್ನಡ ಸ್ವಲ್ಪ ಗೊತ್ತಿದೆ ಎಂದು ಉತ್ತರದಿಂದ ಬಂದವರಿಂದ ಚಿತ್ರರಂಗದ ಮಾನ ಹರಾಜಾಗುತ್ತಿದೆ" ಎಂದು ಜಗ್ಗೇಶ್ ಹೇಳಿದ್ದಾರೆ.

ಜಗ್ಗೇಶ್ ಸಾಮಾಜಿಕ ತಾಣ ಟ್ವಿಟ್ಟರ್ ಮೂಲಕ ಈಗಿನ ಸ್ಯಾಂಡಲ್ ವುಡ್ ಬಗೆಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು "ಕನ್ನಡಚಿತ್ರರಂಗದ ನಲ್ಮೆಯ ಕನ್ನಡದ ಹೆಣ್ಣುಮಕ್ಕಳು ನಮ್ಮತನ ಉಳಿಸಿಕೊಂಡು ನಮ್ಮ ಕಾಲದಿಂದ ಬದುಕಿದ್ದಾರೆ ಪಾಪ! ಕನ್ನಡ್ ಸ್ವಲ್ಪಗೊತ್ತಿದೆ ಎನ್ನುವ ಉತ್ತರದಿಂದ ಬಂದು ನಮ್ಮವರ
ಮೋಡಿ ಮಾಡಿದವರೆ ನಮ್ಮಚಿತ್ರರಂಗದ ಮಾನ ಹರಾಜು ಹಾಕುತ್ತಿರುವುದು!ಇನ್ನುಮೇಲಾದರು ನಮ್ಮವರು ನಮ್ಮವರಿಗೆ ಜೈಅನ್ನುವ!ಕನ್ನಡದವರು ಕನ್ನಡಿಗರಿಗೆ ಕೈಎತ್ತಿಸಾಕು" ಎಂದಿದ್ದಾರೆ.

ಅಲ್ಲದೆ "1980ನವಂಬರ್17ಕ್ಕೆ ಸಿನಿಮಾರಂಗಕ್ಕೆ ಬಂದವ ನಾನು! ಭಯದಿಂದ ಬೆಳೆದು ದಡ ಮುಟ್ಟಿರುವೆ! ಹೈಸ್ಪೀಡು!ಕೈಬಿಟ್ಟು ಗಾಡಿ ಓಡ್ಸದವರು!ಅರ್ಧರಾತ್ರೀಲಿ ಛತ್ರಿ ಹಿಡಿದವರು!ಒಂದೆರಾತ್ರಿ ಬೆಟ್ಟ ಹತ್ತಿ ಹಳ್ಳಕ್ಕೆ ಬಿದ್ದವರು! ಏಷ್ಟೆಬೆಳೆದರು ತಲೆಬಾಗಿ ಬಾಳಿದವರ ನೋಡಿ ಬದುಕು ಕಲಿತವ ನಾನು! ದೇವರು ಕೈಹಿಡಿದರೆ ಮಹಾರಾಜ! ಕೈಬಿಟ್ರೆ ಬಿಕ್ಷುಕ!ನಶ್ವರಜಗ ಎಚ್ಚರ!" ಎಂದು ಎಚ್ಚರಿಸಿದ್ದಾರೆ. 

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಟು ರಾಗಿಣಿ ದ್ವಿವೇದಿ ನಂ. 2 ಆರೋಪಿಯಾಗಿ ಸಿಸಿಬಿಯಿಂದ ಗುರುತಿಸಿಕೊಂಡಿದ್ದಾರೆ. ಶ್ರೇಷ್ಠ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಪ್ರಕರಣದಲ್ಲಿ ನಟಿಯೊಬ್ಬರ ಬಂಧನವಾಗಿರುವುದು ಇದೇ ಮೊದಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ