ಸಿನಿಮಾ ಸುದ್ದಿ

ಸಿನಿಮಾ ಇಂಡಸ್ಟ್ರೀ ಎಂದು ಟಾರ್ಗೆಟ್ ಮಾಡಬೇಡಿ: ಸಂಸದೆ ಸುಮಲತಾ ಅಂಬರೀಶ್

Srinivasamurthy VN

ಬೆಂಗಳೂರು: ಈ ರೀತಿ ಚಟುವಟಿಕೆಗಳು ನಡೆದಾಗ ಯಾರಿಗೂ ಗೊತ್ತಾಗುವು ದಿಲ್ಲ.ಅಭ್ಯಾಸ ಇರುವವರಿಗೆ ಇದನ್ನು ಬಿಡುವುದು ಕಷ್ಟ.ಸಿನಿಮಾ ಇಂಡಸ್ಟ್ರಿ ಎಂದು ಟಾರ್ಗೆಟ್ ಮಾಡಬೇಡಿ.ಸಿನಿಮಾ ರಂಗದಲ್ಲಿ ಮಾತ್ರ ಅಲ್ಲ,ಎಲ್ಲಾ ರಂಗದಲ್ಲೂ ಡ್ರಗ್ಸ್ ಇದೆ ಎಂದು ಸಂಸದೆ ಸುಮಲತಾ ಪ್ರತಿಕ್ರಿಯಿಸಿದ್ದಾರೆ.

ವಿಧಾನ ಸೌಧದಲ್ಲಿಂದು ದಸರಾ ಆಚರಣೆ ಕುರಿತು ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಡ್ರಗ್​ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ನಾಯಕಿಯರನ್ನು ಸಿಸಿಬಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.ಸಿನಿಮಾ ರಂಗದಲ್ಲಿ ಹೆಣ್ಣು ಮಕ್ಕಳೇ ಯಾಕೆ ಟಾರ್ಗೆಟ್ ಆಗ್ತಾರೆ ಅನ್ನೋ  ವಿಚಾರಕ್ಕೆ ಸುಮಲತಾ ಪ್ರತಿಕ್ರಿಯಿಸಿದ್ದಾರೆ.ಮಾಹಿತಿ ಇಲ್ಲದ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ.ವಿವಾದ ಮಾಡಬೇಕು ಎಂದು ನಾನು ಎಂದಿಗೂ ಮಾತನಾಡುವುದಿಲ್ಲ.ಈ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ಕೇಳಿ ಎಂದು ಉತ್ತರಿಸುತ್ತಾರೆ ಎಂದಿದ್ದಾರೆ.

ಕನ್ನಡ ಚಿತ್ರರಂಗ ಅಷ್ಟೇ ಅಲ್ಲ, ಎಲ್ಲ ಚಿತ್ರರಂಗದಲ್ಲಿಯೂ ಜನರೇಶನ್ ಚೇಂಜ್ ಆಗಿದೆ. ಹಿರಿಯರ ಜನರೇಶನ್ ಗೆ ಕೊಡುತ್ತಿದ್ದ ಗೌರವ ಈಗ ಕಡಿಮೆಯಾಗಿದೆ. ಅಭ್ಯಾಸ ಆಗಿರೋರಿಗೆ ಬಿಡುವುದು ಕಷ್ಟ. ಡ್ರಗ್ಸ್ ಪೆಡ್ಲರ್ ಗಳ ಜೊತೆ ದಂಧೆ ನಡೆಯುತ್ತಿದೆ. ನಾಯಕಿಯರ ಹೆಸರೇ ದಂಧೆಯಲ್ಲಿ ಕೇಳಿಬರ್ತಿದೆ. ವಿನಾಕಾರಣ  ಮಾಹಿತಿ ಇಲ್ಲದೇ ನಾನು ಮಾತನಾಡುವುದಿಲ್ಲ. ಡ್ರಗ್ಸ್ ದಂಧೆಯಲ್ಲಿ ಇತರೆ ನಟರು ಇದ್ದಾರಾ ಅನ್ನೋದ್ರ ಬಗ್ಗೆ ತನಿಖಾಧಿಕಾರಿಗಳೇ ಮಾಹಿತಿ ಕೊಡಬೇಕು ಎಂದು ತಿಳಿಸಿದರು.

ನಾಗಮಂಗಲದಲ್ಲಿ ಡ್ರಗ್ಸ್ ಮಾರಾಟ ಆಗುತ್ತಿದೆ ಎಂಬ ಮಾಜಿ ಸಂಸದ ಶಿವರಾಮೇಗೌಡ ಹೇಳಿಕೆಗೆ ಸಂಸದೆ ಸುಮಲತಾ ತಿರುಗೇಟು ನೀಡಿದ್ದಾರೆ.ಮಾಧ್ಯಮಗಳ‌ ಮುಂದೆ ಸುಮ್ಮನೆ ಆರೋಪ‌ ಮಾಡ ಬಾರದು.ದಾಖಲೆ ಇದ್ದರೆ ಪೊಲೀಸರಿಗೆ ಕೊಡಿ. ಸಾಕ್ಷಿ ಪುರಾವೆ ಸಹಿತ ಸಾಬೀತುಪಡಿಸಿ.ತಪ್ಪಿತಸ್ಥರಿ ಗೆ ಶಿಕ್ಷೆ ಆಗುವಂ  ತೆ ನೋಡಿಕೊಳ್ಳಿ.ಅದನ್ನು ಬಿಟ್ಟು ಸುಖಾಸುಮ್ಮನೆ ಆರೋಪ ಮಾಡಬೇಡಿ, ಎಂದಿದ್ದಾರೆ.

ಡಗ್ರ್ಸ್ ಚಿತ್ರರಂಗದಷ್ಟೇ ಅಲ್ಲ, ಎಲ್ಲ ಕಡೆ ಇದೆ ಅಂತ ಹೇಳುವುದನ್ನ ಕೇಳಿದ್ದೇನೆ. ಈಗ ತನಿಖೆ ನಡೆಯುತ್ತಿದೆ, ಸತ್ಯಾಂಶ ಬರುವ ತನಕ ಕಾಯೋಣ. ಇಂದಿನ ಜನರೇಶನ್ ಹಾಳಾಗುವ ವಿಚಾರ ಇದು. ಇದರಲ್ಲಿ ಎಲ್ಲರ ತಪ್ಪು ಇದೆ. ಚಿತ್ರರಂಗದಲ್ಲಿ ಎಷ್ಟು ಜನರೇಶನ್ ನಿಂದ ನಟನಟಿಯರು ಇದ್ದಾರೆ. ಆದರೆ ಡ್ರಗ್ಸ್  ವಿಚಾರದಲ್ಲಿ ಎಷ್ಟು ಪರ್ಸೆಂಟ್ ಇದ್ದಾರೆ. ಚಿತ್ರರಂಗದಲ್ಲಿ ಏನೇ ನಡೆದ್ರೂ ವಿಪರೀತವಾಗಿ ತೋರಿಸುವುದು ಅಭ್ಯಾಸವಾಗಿಬಿಟ್ಟಿದೆ, ಇದು ಸರಿ ಇಲ್ಲ ಅನ್ನೋದು ನನ್ನ ಅಭಿಪ್ರಾಯ ಎಂದರು.

ಕನ್ನಡ ಚಿತ್ರರಂಗದಲ್ಲಿ ಯಜಮಾನಿಕೆ ಇಲ್ಲದಿರುವುದೇ ಇಷ್ಟಕ್ಕೆಲ್ಲ ಕಾರಣ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂತಹ ವಿಚಾರಗಳು ನಡೆಯಬೇಕಾದ್ರೆ ಯಾರೂ ಹೇಳಿ ಮಾಡಲ್ಲ. ಎಲ್ಲೆಲ್ಲಿ ನಡೆಯುತ್ತೆ ಅದು ನಡೆಯುತ್ತಿರುತ್ತೆ. ಯಜಮಾನ ಇದ್ದಾರೆ, ಇಲ್ಲ ಅನ್ನೋದನ್ನ ನೋಡಿಕೊಂಡು ಮಾಡುವುದಿಲ್ಲ. ದಯಮಾಡಿ ಇಡೀ  ಚಿತ್ರರಂಗವನ್ನು ಟಾರ್ಗೆಟ್ ಮಾಡಬೇಡಿ ಅಂತ ಮನವಿ ಮಾಡಿಕೊಂಡರು.

SCROLL FOR NEXT