ತಾನ್ಯ ಹೋಪ್ 
ಸಿನಿಮಾ ಸುದ್ದಿ

ಟಾಲಿವುಡ್ ಚಿತ್ರಕ್ಕಾಗಿ ಇನ್ನೊಮ್ಮೆ ಬೈಕ್ ರೈಡ್ ಹೊರಟ ತಾನ್ಯ ಹೋಪ್!

ಕನ್ನಡ ನಟಿ ತಾನ್ಯ ಹೋಪ್ 3450 ಕಿ.ಮೀ ರೈಡ್ ನಲ್ಲಿದ್ದಾರೆಯೆ? ಹೌದು, ನಟ ಮತ್ತೊಂದು ರೋಡ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗುರು ಪವನ್ ನಿರ್ದೇಶನದ "ಎಧೆ ಮಾ ಕಥಾ"  ಹೆಸರಿನ  ಈ ಚಿತ್ರದಲ್ಲಿ ತಾನ್ಯ ಸುಮಂತ್ ಅಶ್ವಿನ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಬೆಂಗಳೂರಿನ ನಟಿಯಾಗಿ ಬದಲಾದ ಮಾಡೆಲ್ ಈಗ ದಕ್ಷಿಣ ಭಾರತದ ಚಲನಚಿತ್ರೋದ್ಯಮಗಳಲ್ಲಿ ತನಗೊಂದು ಗ

ಕನ್ನಡ ನಟಿ ತಾನ್ಯ ಹೋಪ್ 3450 ಕಿ.ಮೀ ರೈಡ್ ನಲ್ಲಿದ್ದಾರೆಯೆ? ಹೌದು, ನಟ ಮತ್ತೊಂದು ರೋಡ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗುರು ಪವನ್ ನಿರ್ದೇಶನದ "ಎಧೆ ಮಾ ಕಥಾ"  ಹೆಸರಿನ  ಈ ಚಿತ್ರದಲ್ಲಿ ತಾನ್ಯ ಸುಮಂತ್ ಅಶ್ವಿನ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಬೆಂಗಳೂರಿನ ನಟಿಯಾಗಿ ಬದಲಾದ ಮಾಡೆಲ್ ಈಗ ದಕ್ಷಿಣ ಭಾರತದ ಚಲನಚಿತ್ರೋದ್ಯಮಗಳಲ್ಲಿ ತನಗೊಂದು ಗಟ್ಟಿಯಾದ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ತೆಲುಗಿನ "ಅಪ್ಪಟ್ಲೋ ಒಕದುಂಡೆವಾಡುವಾಂಡ್" ಚಿತ್ರದ ಮೂಲಕ ಟಾಲಿವುಡ್ ಗೆ ನಟಿ ಪಾದಾರ್ಪಣೆ ಮಾಡಿದ್ದರು.

ದರ್ಶನ್ ಅಭಿನಯದ "ಯಜಮಾನ" ಚಿತ್ರದಲ್ಲಿ ಕನ್ನಡದಲ್ಲಿನಟಿಸಿದ್ದ ಈ ನಟ ತಮಿಳಿನ "ಥಾಡಂ", "ಧರಾಲಾ ಪ್ರಭು" ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಲಾಕ್ ಡೌನ್ ನಂತರ ಅವರು ಸಹಿ ಮಾಡಿದ ಪ್ರಾಜೆಕ್ಟ್  "ಎಧೆ ಮಾ ಕಥಾ," ಆಗಿದ್ದು ಇದಕ್ಕೆ " ರೈಡರ್ ಸ್ಟೋರಿ" ಎಂದು ಟ್ಯಾಗ್ ಲೈನ್ ಕೊಡಲಾಗಿದೆ.

ಈ ಚಿತ್ರವು ರೋಡ್ ಟ್ರಿಪ್ ನ ಸುತ್ತ ಹೆಣೆದ ಕಥೆಯನ್ನಾಧರಿಸಿದೆ. ಇದರಲ್ಲಿ ಪ್ರಮುಖ ತಾರೆಯರು ಹಿಮಾಚಲಪ್ರದೇಶದ ಮನಾಲಿಗೆ ಬೈಕ್ ರೈಡ್ ಮಾಡುತ್ತಾರೆ.. ಈ ಹಿಂದೆ ಅಭಿಷೇಕ್ ಅಂಬರೀಶ್ ಅಭಿನಯದ "ಅಮರ್" ಎಂಬ ರೋಡ್ ಟ್ರಿಪ್ ಸಿನಿಮಾದ ಭಾಗವಾಗಿದ್ದ ತಾನ್ಯ ಗೆ "ಎಧೆ ಮಾ ಕಥಾ"ದಲ್ಲಿ ಸಹ ಬೈಕ್ ರೈಡ್ ನ ಕಥೆಯು ಸಿಕ್ಕಿದೆ. 

ಜಿ ಮಹೇಶ್ ಅವರ ಗುರಪ್ಪ ಪರಮೇಶ್ವರ ಪ್ರೊಡಕ್ಷನ್ಸ್ ನಿರ್ಮಿಸಿದ ಈ ಚಿತ್ರದಲ್ಲಿ ಶ್ರೀಕಾಂತ್ ಜೊತೆಗೆ ಸಮೀರ್, ಸಪ್ತಗಿರಿ, ಶ್ರೀಜಿತಾ ಘೋಷ್, ಸತ್ಯ ರಾಜೇಶ್, ಮತ್ತು ತ್ರಿವಿಕ್ರಮ್ ಸಾಯಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರ ಸಂಗೀತವನ್ನು ಸುನಿಲ್ ಕಶ್ಯಪ್ ನೀಡಿದ್ದರೆ ಸಿ ರಾಮ್ ಪ್ರಸಾದ್ ಕ್ಯಾಮರಾ ಕೆಲಸ ಮಾಡಿದ್ದಾರೆ,

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT