ಸಿನಿಮಾ ಸುದ್ದಿ

ಮೈಸೂರು: ವಿಷ್ಣುವರ್ಧನ್ ಸ್ಮಾರಕ ಸ್ಥಳದಲ್ಲಿ ಫಿಲ್ಮ್ ಇನ್ಸ್ ಸ್ಟಿಟ್ಯೂಟ್ ಸ್ಥಾಪನೆಗೆ ಚಿಂತನೆ

Shilpa D

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ತನ್ನದೇ ಆದ ಫಿಲ್ಮ್ ಸಿಟಿ ಹೊಂದುವ ಅವಕಾಶದಿಂದ ವಂಚಿತವಾಗಿರುವ ಬೆನ್ನಲ್ಲೇ, ಸಾಹಸ ಸಿಂಹ ವಿಷ್ಣುವರ್ದನ್ ಸ್ಮಾರಕ ಸ್ಥಳದಲ್ಲಿ ಫಿಲ್ಮ್ ಇನ್ಸ್ ಸ್ಟಿಟ್ಯೂಟ್ ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ.

ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪುಣೆಯಲ್ಲಿರುವಂತೆ ಮೈಸೂರಿನ ಹೊರವಲಯದ ವಿಷ್ಣುವರ್ಧನ್ ಸ್ಮಾರಕದಲ್ಲಿ ಪ್ರತಿಷ್ಠಿತ ಸಿನಿಮಾ ಮತ್ತು ದೂರದರ್ಶನ ಸಂಸ್ಥೆ ಸ್ಥಾಪಿಸಲು ಯೋಜನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ಯೋಜನೆಯು ಅನೇಕ ಚಲನಚಿತ್ರ ಉತ್ಸಾಹಿಗಳು, ಆಕಾಂಕ್ಷಿಗಳು ಮತ್ತು ಉದಯೋನ್ಮುಖ ಕಲಾವಿದರಿಗೆ ಚಲನಚಿತ್ರ ಕಲೆಯನ್ನು ಕಲಿಯಲು ಸಹಾಯವಾಗುತ್ತದೆ. ಗುಣಮಟ್ಟದ ತರಬೇತಿ ನೀಡುವುದರ ಜೊತೆಗೆ ಚಲನಚಿತ್ರ ಮತ್ತು ನಾಟಕ ಉತ್ಸವಗಳನ್ನು ನಡೆಸಲು ಸಭಾಂಗಣವನ್ನೂ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.

ಇನ್ನೂ 11 ವರ್ಷದ ನಂತರ ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕನಸು ಕೈಗೂಡುತ್ತಿದೆ, ಸೆಪ್ಟಂಬರ್ 15 ರಂದು ಸಿಎಂ ಯಡಿೂರಪ್ಪ ಸರ್ಕಾರ ನೀಡಿರುವ ಐದೂವರೆ ಎಕರೆ ಜಮೀನಿನನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗುತ್ತಿದೆ.

ಎರಡು ಎಕರೆ ಜಮೀನಿನಲ್ಲಿ ಆರು ಅಡಿ ಎತ್ತರದ ವಿಷ್ಣುವರ್ಧನ್ ಪ್ರತಿಮೆ ಸ್ಥಾಪಿಸಲಾಗುವುದು, ಇದರ ಜೊತೆಗೆ ಹೆಚ್ಚುವರಿಯಾಗಿ ಮ್ಯೂಸಿಯಂ ಸ್ಥಾಪಿಸಲಾಗುವುದು, ಇಲ್ಲಿ ನಟ ವಿಷ್ಣುವರ್ಧನ್ ಅವರ ಅಪರೂಪದ ಭಾವಚಿತ್ರಗಳನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ನೋಡಲು ಅವಕಾಶ ನೀಡಲಾಗುವುದು.

ಮೈಸೂರಿನಲ್ಲೇ ಹುಟ್ಟಿ ಬೆಳೆದ ನಟ ವಿಷ್ಣು ವರ್ಧನ್ ಅವರಿಗೆ ಮೈಸೂರಿನಲ್ಲಿ ಫಿಲ್ಮ್ ಇನ್ಸ್ ಸ್ಟಿಟ್ಯೂಟ್ ನಿರ್ಮಿಸಬೇಕೆಂಬ ಮಹಾದಾಸೆಯಿತ್ತು.  ಆ ಕನಸು ಈ ನನಸಾಗುವ ಸಮಯ ಬರುತ್ತಿದೆ.

SCROLL FOR NEXT