ಮಾರಿ ಗೋಲ್ಡ್ ಚಿತ್ರ ತಂಡ 
ಸಿನಿಮಾ ಸುದ್ದಿ

ಸಿಸಿಬಿ ವಿಚಾರಣೆ ನಡುವೆಯೇ ಮಾರಿಗೋಲ್ಡ್ ಶೂಟಿಂಗ್ ನಲ್ಲಿ ದಿಗಂತ್ ಬ್ಯುಸಿ!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದ ನಟ ದಿಗಂತ್ ಮಾರಿಗೋಲ್ಡ್ ಸಿನಿಮಾ ಶೂಟಿಂಗ್ ಬಗ್ಗೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದ ನಟ ದಿಗಂತ್ ಮಾರಿಗೋಲ್ಡ್ ಸಿನಿಮಾ ಶೂಟಿಂಗ್ ಬಗ್ಗೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ.

ಕನ್ನಡ ಸಿನಿಮಾ ರಂಗದಲ್ಲಿ ದೂದ್ ಪೇಡ ಎಂದೇ ಪ್ರಸಿದ್ಧವಾಗಿರುವ  ನಟ ದಿಗಂತ್ ಸೆಪ್ಟಂಬರ್ 18 ರಿಂದ ಕಾಮಿಡಿ ಥ್ರಿಲ್ಲರ್ ಮಾರಿಗೋಲ್ಡ್ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ.

ಗೋಲ್ಡ್ ಬಿಸ್ಕೇಟಿಗೆ ಸಂಬಂಧಪಟ್ಟ ಸಿನಿಮಾವನ್ನು ರಾಘವೇಂದ್ರ ನಾಯಕ್ ನಿರ್ದೇಶಿಸುತ್ತಿದ್ದಾರೆ. ಸಂಗೀತಾ ಶೃಂಗೇರಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಚಿತ್ರ ತಂಡ ಸಿನಿಮಾ ಶೂಟಿಂಗ್ ಸೆಟ್ ನ ಕೆಲವು ಫೋಟೋ ಗಳನ್ನು ಶೇರ್ ಮಾಡಿದ್ದಾರೆ. ಯಶ್ ಶೆಟ್ಟಿ ಮತ್ತು ಟಗರು ಸಿನಿಮಾದ ಕಾಕ್ರೋಚ್ ಖ್ಯಾತಿಯ ಸುದಿ ಸಿನಿಮಾದಲ್ಲಿ ನಟಿಸಿದ್ದಾರೆ. 

ಮಾರ್ಚ್ ತಿಂಗಳಲ್ಲಿ ಕೆಲ ಭಾಗದ ಸಿನಿಮಾ ಶೂಟಿಂಗ್ ಮುಗಿಸಿತ್ತು. ಉಳಿದ ಭಾಗದ ಶೂಟಿಂಗ್ ಈಗ ನಡೆಯುತ್ತಿದೆ. 18 ದಿನಗಳ ಶೂಟಿಂಗ್ ಗೆ ಚಿತ್ರ ತಂಡ ಪ್ಲಾನ್ ಮಾಡಿದ್ದ ಇನ್ನು 12 ದಿನದ ಚಿತ್ರೀಕರಣ ಬಾಕಿ ಉಳಿದಿದೆ. ಉಳಿದ ಭಾಗದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಲಿದೆ.

ನಿರ್ದೇಶಕ ರಾಘವೇಂದ್ರ ಕುಂದಾಪುರ ಮೂಲದವರಾಗಿದ್ದು ದಿಗಂತ್ ಆತ್ಮೀಯರಾಗಿದ್ದಾರೆ. 15 ವರ್ಷಗಳ ಕಾಲ ಅನುಭವವಿರುವ ರಾಘವೇಂದ್ರ ಅವರು ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಆರ್ ವಿ ಕ್ರಿಯೇಷನ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ವೀರ್ ಸಮರ್ಥ್ ಸಂಗೀತ ನೀಡಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. 

ದಿಗಂತ್ ನಟನೆಯ ನಾಗರಾಜ್ ಬೆಥೂರ್ ಅವರ ಹುಟ್ಟುಹಬ್ಬದ ಶುಭಾಶಯಗಳು ಬಿಡುಗಡೆಗೆ ಸಿದ್ಧವಾಗಿದೆ ಮತ್ತು ಸಂತೋಷ್ ಆನಂದ್ರಾಮ್ ನಿರ್ದೇಶನದ ಯುವರತ್ನದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ಪುನೀತ್ ರಾಜ್‌ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT