ತೇಜ್ 
ಸಿನಿಮಾ ಸುದ್ದಿ

'ರಿವೈಂಡ್' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಮರಳುತ್ತಿದ್ದಾರೆ ನಟ ತೇಜ್!

ಬಾಲನಟನಾಗಿ ಕನ್ನಡ ಚಿತ್ರೋದ್ಯಮ ಪ್ರವೇಶಿಸಿದ್ದ  ನಟ ತೇಜ್ ಹಲವು ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ.

ಬಾಲನಟನಾಗಿ ಕನ್ನಡ ಚಿತ್ರೋದ್ಯಮ ಪ್ರವೇಶಿಸಿದ್ದ  ನಟ ತೇಜ್ ಮತ್ತೆ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ.

ಹಿರಿಯ ನಟ ಶಂಕರ್ ನಾಗ್ ಅವರ ಜೊತೆ ಮಹೇಶ್ವರ ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸಿದ್ದರು. ನಂತರ 15 ವರ್ಷದವರಿದ್ದಾಗ ಮೀಸೆ ಚಿಗುರಿದಾಗ ಸಿನಿಮಾದಲ್ಲಿಯೂ ನಟಿಸಿದ್ದರು.  ನಂತರ ಸಿನಿಮಾ ರಂಗದ ಕಡೆ ಬಾರದೇ ತಮ್ಮ ವಿದ್ಯಾಭ್ಯಾಸದತ್ತ ಗಮನ ಹರಿಸಿದ್ದರು.

18 ವರ್ಷಗಳ  ನಂತರ ಮತ್ತೆ ಕನ್ನಡಕ್ಕೆ ವಾಪಸಾಗಿದ್ದಾರೆ. ಹಿಂದೆಯೇ ಕನ್ನಡ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ತೇಜ್ ಇದುವರೆಗೂ 6 ಸಿನಿಮಾಗಳನ್ನ ಮಾಡಿದ್ದಾರೆ. ಕನ್ನಡ ಅಲ್ಲದೇ ತಮಿಳಿನಲ್ಲೂ ಹಲವು ಸಿನಿಮಾಗಳಲ್ಲಿ ತೇಜ್ ಅಭಿನಯಿಸಿದ್ದಾರೆ.

ನಟನೆಯ ಜೊತೆ ನಿರ್ಮಾಣ ಮತ್ತು ನಿರ್ದೇಶನದ ಹೊಣೆ ಕೂಡ ಹೊತ್ತಿದ್ದಾರೆ ತೇಜ್, ತೇಜ್ ತರಬೇತಿ ಪಡೆದ ನಟನಲ್ಲ, ಆದರೆ ತಮ್ಮ ಅಭಿರುಚಿಗಾಗಿ ಸಿನಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಂದನ ರಿವೈಂಡ್ ಸಿನಿಮಾದಲ್ಲಿ ತೇಜ್ ಗೆ ನಾಯಕಿಯಾಗಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT