ತಮೀರಾ 
ಸಿನಿಮಾ ಸುದ್ದಿ

ಖ್ಯಾತ ತಮಿಳು ನಿರ್ದೇಶಕ ತಮೀರಾ ಕೊರೊನಾಗೆ ಬಲಿ

ಕಾಲಿವುಡ್ ನ ಖ್ಯಾತ ಚಲನಚಿತ್ರ ನಿರ್ದೇಶಕ ತಮಿರಾ(53) ಏಪ್ರಿಲ್ 27 ರಂದು ಚೆನ್ನೈನಲ್ಲಿ ಕೋವಿಡ್ -19 ಸೋಂಕಿನ ಕಾರಣ ನಿಧನರಾದರು. ಅವರು ನಗರದ ಅಶೋಕ ಪಿಲ್ಲರ್ ನಲ್ಲಿರುವ ಮಾಯಾ ನರ್ಸಿಂಗ್ ಹೋಂ ನಲ್ಲಿ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದರು.

ಕಾಲಿವುಡ್ ನ ಖ್ಯಾತ ಚಲನಚಿತ್ರ ನಿರ್ದೇಶಕ ತಮಿರಾ(53) ಏಪ್ರಿಲ್ 27 ರಂದು ಚೆನ್ನೈನಲ್ಲಿ ಕೋವಿಡ್ -19 ಸೋಂಕಿನ ಕಾರಣ ನಿಧನರಾದರು. ಅವರು ನಗರದ ಅಶೋಕ ಪಿಲ್ಲರ್ ನಲ್ಲಿರುವ ಮಾಯಾ ನರ್ಸಿಂಗ್ ಹೋಂ ನಲ್ಲಿ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದರು.

"ರಟ್ಟೈಸುಳಿ", "ಆನ್ ದೇವತೈ" ನಂತಹಾ ಚಿತ್ರಗಳಿಂದ ಪ್ರಸಿದ್ದವಾಗಿದ್ದ ನಿರ್ದೇಶಕರ ಹಠಾತ್ ನಿಧನಕ್ಕೆ ತಮಿಳು ಚಿತ್ರೋದ್ಯಮದ ಇತರ ಖ್ಯಾತನಾಮರು ಆಘಾತ ವ್ಯಕ್ತಪಡಿಸಿದ್ದಾರೆ.

ತಮೀರಾ ಅವರು 07.04.2021 ರಂದು ಬೆಳಿಗ್ಗೆ ತೀವ್ರವಾದ ಕೋವಿಡ್ 19 ನ್ಯುಮೋನಿಯಾದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ತೀವ್ರ ನಿಗಾ ಘಟಕಕ್ಕೆ ನೇರವಾಗಿ ದಾಖಲಿಸಲಾಯಿತು. ಕಳೆದ 20 ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದ ಚಲನಚಿತ್ರ ನಿರ್ದೇಶಕ ಇಂದು ಬೆಳಿಗ್ಗೆ 8.20 ಕ್ಕೆ ಹಠಾತ್ ಹೃದಯ ಸ್ತಂಭನ ನಂತರ ಮೃತಪಟ್ಟಿದ್ದಾರೆ ಎಂದು ಮಾಯಾ ನರ್ಸಿಂಗ್ ಹೋಂ ಪತ್ರಿಕಾ ಪ್ರಕಟಣೆ ಹೇಳಿದೆ. 

ಅವರ ನಿಧನದ ಸುದ್ದಿ ಹೊರಬಂದ ನಂತರ, ಅರುಣ್ ವೈದ್ಯನಾಥನ್, ಶಂಕರ್ ಮುಂತಾದ ಪ್ರಸಿದ್ಧರು ಶೋಕ ವ್ಯಕ್ತಪಡಿಸಿದ್ದಾರೆ, 

ತಮೀರಾ ಅವರು ತಿರುನೆಲ್ವೇಲಿ ಬಳಿ ಮೂಲಕಾರಪಟ್ಟಿಯಲ್ಲಿ ಶೇಕ್ ದಾವೂದ್ ಆಗಿ ಜನಿಸಿದರು. ಅವರಿಗೆ ಕೋವಿಡ್ ಸೋಂಕು ಕಾಣಿಸಿಕೊಳ್ಳುವ ವೇಳೆ ಅವರು ಸ್ಕ್ರಿಪ್ಟ್‌ ಒಂದರ ಕೆಲಸದಲ್ಲಿದ್ದರು. ಇವರು ಇದಕ್ಕೆ ಹಿಂದೆ ಖ್ಯಾತ ಹಿರಿಯ ನಿರ್ದೇಶಕರಾದ ಕೆ ಬಾಲಚಂದರ್ ಮತ್ತು ಭಾರತಿರಾಜ ಅವರ ಸಹಾಯಕರಾಗಿ ಕೆಲಸ ಮಾಡಿದ್ದರು.

'ಮೈ ಪರ್ಫೆಕ್ಟ್ ಹಸ್ಬೆಂಡ್' ಎಂಬ ವೆಬ್ ಸರಣಿಗೆ ತಮೀರಾ ನಿರ್ದೇಶನವಿತ್ತು. ಹಿರಿಯ ನಟರಾದ ಸತ್ಯರಾಜ್ ಮತ್ತು ಸೀತಾ ಅದರಲ್ಲಿ ಮುಖ್ಯ ಪಾತ್ರಧಾರಿಗಳಾಗಿದ್ದರು. ಸರಣಿಯನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಮಾಡಲು ಸಿದ್ದತೆ ನಡೆದಿತ್ತು.

ಮೃತರು ಪತ್ನಿ, ಮೂವರು ಗಂಡು ಮಕ್ಕಳು ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT